ಪಾಕಿಸ್ತಾನದ 4 ಪ್ರಾಂತ್ಯಗಳನ್ನು ವಿಭಜಿಸಿ 12ರಿಂದ 15 ರಾಜ್ಯ ಮಾಡ್ತಾರಂತೆ! ಭಾರತಕ್ಕೆ ಇದು ಲಾಭ ಯಾಕೆ?
ಪಾಕಿಸ್ತಾನದ (Pakistan) ರಾಜಕೀಯ ನಕ್ಷೆಯಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆ ಕುರಿತು ಚರ್ಚೆ ಆರಂಭವಾಗಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ದೇಶದ ನಾಲ್ಕು ಬೃಹತ್ ಪ್ರಾಂತ್ಯಗಳನ್ನು ಸಣ್ಣ ಘಟಕಗಳಾಗಿ ವಿಭಜಿಸುವ ಪ್ರಸ್ತಾವನೆಗೆ ಒಲವು ತೋರಿದ್ದಾರೆ ಎಂದು ವರದಿಯಾಗಿದೆ. ಈ ಯೋಜನೆ ಜಾರಿಗೆ ಬಂದರೆ, ಪ್ರಸ್ತುತ ಇರುವ ನಾಲ್ಕು ಪ್ರಾಂತ್ಯಗಳ ಬದಲಿಗೆ 12ರಿಂದ 15 ಪ್ರಾಂತ್ಯಗಳನ್ನು ರಚಿಸುವ ಸಾಧ್ಯತೆಯಿದೆ. ಇನ್ನೂ ಸಣ್ಣ ಆಡಳಿತ ಘಟಕಗಳನ್ನಾಗಿ ವಿಭಜಿಸುವ ಪ್ರಸ್ತಾಪವೂ ಚರ್ಚೆಯಲ್ಲಿದೆ.

ಪಂಜಾಬ್, ಸಿಂಧ್, ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ್ ಪಾಕಿಸ್ತಾನದ ನಾಲ್ಕು ಪ್ರಮುಖ ಪ್ರಾಂತ್ಯಗಳು. ಇವು ಕೇವಲ ಆಡಳಿತಾತ್ಮಕ ವಿಭಾಗಗಳಲ್ಲ. ಪ್ರಬಲ ರಾಜಕೀಯ ಪಕ್ಷಗಳ ನೆಲೆಗಳು, ಪ್ರಾದೇಶಿಕ ಗುರುತಿನ ಕೇಂದ್ರಗಳು ಮತ್ತು ಅಧಿಕಾರದ ಪ್ರಮುಖ ಆಧಾರಗಳೂ ಹೌದು. ಹೀಗಾಗಿ, ಈ ಪ್ರಾಂತ್ಯಗಳನ್ನು ವಿಭಜಿಸುವ ನಿರ್ಧಾರವು ಪಾಕಿಸ್ತಾನದ ಆಡಳಿತ ವ್ಯವಸ್ಥೆಯನ್ನು ಮಾತ್ರವಲ್ಲ, ಅಲ್ಲಿನ ರಾಜಕೀಯ ಅಧಿಕಾರದ ಸಮತೋಲನವನ್ನೂ ಬದಲಾಯಿಸಬಹುದು.
ಈ ಬೆಳವಣಿಗೆಯನ್ನು ಭಾರತದ ದೃಷ್ಟಿಕೋನದಿಂದಲೂ ಗಮನಿಸುವುದು ಮುಖ್ಯ. ಹೀಗೆ ಹೋಳಾದರೆ ಭಾರತಕ್ಕೆ ತುಂಬಾ ಲಾಭವಿದೆ. ಹೇಗೆ ಎಂಬುದನ್ನ ಆಮೇಲೆ ಗಮನಿಸೋಣ.
Pakistanದ ನಾಲ್ಕು ಪ್ರಾಂತ್ಯಗಳೇ ಆಡಳಿತಕ್ಕೆ ಹೊರೆ
ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳು ಜನಸಂಖ್ಯೆ, ಭೌಗೋಳಿಕ ವಿಸ್ತೀರ್ಣ ಮತ್ತು ಆರ್ಥಿಕ ಸಂಪನ್ಮೂಲಗಳ ವಿಚಾರದಲ್ಲಿ ಪರಸ್ಪರ ಭಿನ್ನವಾಗಿವೆ. ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪಂಜಾಬ್ನಲ್ಲಿ ಸುಮಾರು 12.8 ಕೋಟಿ ಜನರಿದ್ದಾರೆ. ಇದು ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಾಗಿದೆ. ಮತ್ತೊಂದೆಡೆ, ದೇಶದ ವಿಸ್ತೀರ್ಣದಲ್ಲಿ ಅತಿ ದೊಡ್ಡದಾದ ಬಲೂಚಿಸ್ತಾನ್ನಲ್ಲಿ ಸುಮಾರು ಒಂದೂವರೆ ಕೋಟಿ ಜನರು ವಾಸಿಸುತ್ತಿದ್ದಾರೆ.
ಇಷ್ಟೊಂದು ದೊಡ್ಡ ಪ್ರದೇಶಗಳನ್ನು ಒಂದೇ ಆಡಳಿತ ವ್ಯವಸ್ಥೆಯ ಮೂಲಕ ಸಮರ್ಥವಾಗಿ ನಿರ್ವಹಿಸುವುದು ಸವಾಲಿನ ಕೆಲಸ. ಗ್ರಾಮೀಣ ಪ್ರದೇಶಗಳ ಜನರು ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಮತ್ತು ಇತರ ಸಾರ್ವಜನಿಕ ಸೇವೆಗಳನ್ನು ತಲುಪಲು ದೂರ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಪಂಜಾಬ್ನಲ್ಲಿಯೂ ಶುದ್ಧ ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳು ಎಲ್ಲರಿಗೂ ಸಮರ್ಪಕವಾಗಿ ಲಭ್ಯವಿಲ್ಲ.
ಮತ್ತೆ ಈ ಎರಡೂ ಪ್ರದೇಶಗಳಲ್ಲಿಯೂ ಪಾಕಿಸ್ತಾನದ ಆಡಳಿತದ ವಿರುದ್ಧ ಪ್ರಬಲ ವಿರೋಧ ಇದೆ. ಬಲೂಚಿಸ್ತಾನವೇ ಪ್ರತ್ಯೇ ದೇಶ ಆಗಬೇಕು ಎಂಬುದು ಇವರ ವಾದ. ಇಲ್ಲಿ ಹತ್ತಾರು ಭಯೋತ್ಪಾದಕ ಗುಂಪುಗಳು ಸಕ್ರಿಯವಾಗಿವೆ. ಅವು ಪಾಕಿಸ್ತಾನದ ರಾಜಕಾರಣಿಗಳು, ಅಧಿಕಾರಿಗಳನ್ನು ಗುಂಡಿಕ್ಕಿ ಬಾಂಬ್ ಸ್ಫೋಟಿಸಿ ಸಾಯಿಸುತ್ತವೆ. ಇಲ್ಲಿ ಬಂಡಾಯ ಸದಾ ಸಾಮಾನ್ಯ. ಇವರನ್ನು ಮಟ್ಟ ಹಾಕಲು ಹೋಗಿ ಪಾಕ್ ಸೇನೆ ಸೋತಿದೆ. ಈ ಬಲೂಚಿ ಉಗ್ರರು ಭಾರತದ ಬಗೆಗೆ ಸಾಫ್ಟ್ ಕಾರ್ನರ್ ಹೊಂದಿದವರು.
ಇನ್ನು ಪಂಜಾಬ್ನಲ್ಲಿ, ಪಾಕ್ ಆಕ್ರಮಿತ ಪಂಜಾಬ್ ಪ್ರಾಂತ್ಯವಿದೆ. ಇದಂತೂ ನ್ಯಾಯವಾಗಿ ಭಾರತಕ್ಕೇ ಸೇರಬೇಕಾದದ್ದು. ಇಲ್ಲಿ ಕೂಡ ಹಿಂದೂಗಳನ್ನು ಬರ್ಬರವಾಗಿ ಹತ್ತಿಕ್ಕಲಾಗುತ್ತಿದೆ. ಹೀಗಾಗಿ ಪಾಕ್ ವಿರೋಧಿ ಭಾವನೆ ಪ್ರಬಲವಾಗಿದೆ. ದುಷ್ಟ, ಮತಾಂಧ ಪಾಕ್ ಅಡಳಿತಕ್ಕಿಂತ ಲಿಬರಲ್ ಭಾರತವೇ ಲೇಸು ಎಂಬ ಭಾವನೆ ಇಲ್ಲಿ ಪ್ರಬಲವಾಗಿದೆ.
ಇವುಗಳನ್ನು ಒಡೆದು ಇನ್ನಷ್ಟು ಸಣ್ಣ ಪ್ರಾಂತ್ಯಗಳಾಗಿ ಮಾಡಿದರೆ, ಆಡಳೀತ ಇನ್ನಷ್ಟು ಚದುರುತ್ತದೆ. ಭಾರತದ ಹಿಡಿತ ಹೆಚ್ಚಾಗಲು ಇದು ಅವಕಾಶ ಮಾಡಿಕೊಡಬಹುದು. ಅರಾಜಕತೆ ಹೆಚ್ಚಬಹುದು. ಪಾಕ್ ಅಕ್ರಮಿತ ಪಂಜಾಬನ್ನು ಭಾರತಕ್ಕೆ ಮರಳಿ ತಂದುಕೊಳ್ಳುವ ಪ್ರಯತ್ನಕ್ಕೆ ಬಲ ಸಿಗಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಪಾಕ್ನೊಳಗೇ ಉಂಟಾಗುವ ಆಂತರಿಕ ಕಚ್ಚಾಟ. ಕಚ್ಚಾಟ ಹೆಚ್ಚಾದಷ್ಟೂ ದಂಗೆ, ಅರಾಜಕತೆ, ಬಂಡಾಯ, ಅಶಾಂತಿ. ಇದರಿಂದಾಗಿ ಭಾರತದ ಕಡೆಗೆ ಗಮನ ಕೊಡಲು ಪಾಕ್ಗೆ ಸಾಧ್ಯವಾಗದೆ ಸೋತು ಸುಣ್ಣವಾಗಲಿದೆ. ಆಗ ಭಾರತದ ವಿರುದ್ಧ ಉಗ್ರಗಾಮಿ ಕೃತ್ಯಗಳನ್ನು ಮಾಡಲು ಅದರಿಂದ ಸಾಧ್ಯವಾಗದೆ, ಆಂತರಿಕ ವೈರಿಗಳ ವಿರುದ್ಧ ಹೋರಾಡುವುದು ಕೆಲಸ ಆಗಿಬಿಡಲಿದೆ. ಆ ದೃಷ್ಟಿಯಿಂದಲೂ ಲಾಭ.
Asim Munir ರಾಜಕೀಯ ಲೆಕ್ಕಾಚಾರ
ಪಾಕಿಸ್ತಾನದಲ್ಲಿ ಪ್ರಾಂತ್ಯಗಳ ವಿಭಜನೆಯ ಚರ್ಚೆಯನ್ನು ಕೇವಲ ಆಡಳಿತ ಸುಧಾರಣೆಯ ದೃಷ್ಟಿಯಿಂದ ನೋಡುವುದು ಕಷ್ಟ. ಏಕೆಂದರೆ ಅಲ್ಲಿ ಸೇನೆಯ ಪ್ರಭಾವವು ದಶಕಗಳಿಂದ ರಾಜಕೀಯ ವ್ಯವಸ್ಥೆಯ ಮೇಲೆ ಆಳವಾದ ಪರಿಣಾಮ ಬೀರಿದೆ. ಪಾಕಿಸ್ತಾನದ ಇತಿಹಾಸದಲ್ಲಿ ಸೇನೆ ನೇರವಾಗಿ ಆಡಳಿತ ನಡೆಸಿದ ಅವಧಿಗಳೂ ಸಾಕಷ್ಟಿವೆ. ಚುನಾಯಿತ ಸರ್ಕಾರಗಳು ಅಧಿಕಾರದಲ್ಲಿದ್ದಾಗಲೂ ಸೇನೆಯ ಪ್ರಭಾವ ಪ್ರಮುಖವಾಗಿರುವುದು ಅಲ್ಲಿನ ರಾಜಕೀಯದ ವಿಶಿಷ್ಟ ಲಕ್ಷಣವಾಗಿದೆ.
ಈ ಹಿನ್ನೆಲೆಯಲ್ಲಿ, ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸುತ್ತವೆ. ಸಣ್ಣ ಪ್ರಾಂತ್ಯಗಳ ರಚನೆಯ ಉದ್ದೇಶ ಜನರಿಗೆ ಉತ್ತಮ ಆಡಳಿತ ಒದಗಿಸುವುದೇ? ಅಥವಾ ಪ್ರಬಲ ಪ್ರಾದೇಶಿಕ ರಾಜಕೀಯ ಕೇಂದ್ರಗಳನ್ನು ದುರ್ಬಲಗೊಳಿಸುವುದೇ?
ಪ್ರಾಂತ್ಯಗಳು ಸಣ್ಣದಾದಾಗ ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಅಧಿಕಾರ ನೀಡಿದರೆ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗಬಹುದು. ಆದರೆ ಹೊಸ ಪ್ರಾಂತ್ಯಗಳು ಕೇಂದ್ರ ಸರ್ಕಾರ ಅಥವಾ ಸೇನಾ ವ್ಯವಸ್ಥೆಯ ಮೇಲೆ ಹೆಚ್ಚು ಅವಲಂಬಿತವಾಗುವಂತೆ ರೂಪುಗೊಂಡರೆ, ಅಧಿಕಾರ ಮತ್ತಷ್ಟು ಕೇಂದ್ರೀಕೃತವಾಗುವ ಅಪಾಯವೂ ಇದೆ.
ಪಂಜಾಬ್ ಮತ್ತು ಸಿಂಧ್ ವಿಭಜನೆಯಾದರೆ ಏನಾಗಬಹುದು?
ಪಾಕಿಸ್ತಾನದ ರಾಜಕೀಯದಲ್ಲಿ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳಿಗೆ ವಿಶೇಷ ಸ್ಥಾನವಿದೆ. ಪಂಜಾಬ್ ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್) ಪಕ್ಷದ ಪ್ರಮುಖ ರಾಜಕೀಯ ನೆಲೆಯಾಗಿದ್ದರೆ, ಸಿಂಧ್ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಪ್ರಬಲ ನೆಲೆಯಾಗಿದೆ.
ಈ ಪ್ರಾಂತ್ಯಗಳ ರಾಜಕೀಯ ಮತ್ತು ಚುನಾವಣಾ (election) ಪ್ರಭಾವವು ಕೇಂದ್ರ ಸರ್ಕಾರಕ್ಕೆ ಪರ್ಯಾಯ ಶಕ್ತಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ನೀಡಿದೆ. ಇವುಗಳನ್ನು ಸಣ್ಣ ಪ್ರಾಂತ್ಯಗಳಾಗಿ ವಿಭಜಿಸಿದರೆ, ಪ್ರಸ್ತುತ ಇರುವ ರಾಜಕೀಯ ಪ್ರಭಾವದಲ್ಲಿ ಬದಲಾವಣೆ ಉಂಟಾಗಬಹುದು.
ಆದರೆ ವಿಭಜನೆಯಿಂದ ಪ್ರಾದೇಶಿಕ ಪಕ್ಷಗಳ ಪ್ರಭಾವ ಕಡಿಮೆಯಾಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಹೊಸ ಪ್ರಾಂತ್ಯಗಳಲ್ಲಿಯೂ ಅದೇ ಪಕ್ಷಗಳು ಜನಪ್ರಿಯತೆ ಗಳಿಸಬಹುದು. ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚು ಗಮನ ನೀಡುವ ಮೂಲಕ ಪ್ರಾದೇಶಿಕ ನಾಯಕರು ಮತ್ತಷ್ಟು ಬಲಿಷ್ಠರಾಗಲೂಬಹುದು.
ಹೀಗಾಗಿ, ಈ ಪ್ರಸ್ತಾವನೆಯ ನಿಜವಾದ ಪರಿಣಾಮವು ಹೊಸ ಗಡಿಗಳನ್ನು ಎಲ್ಲಿ ಎಳೆಯಲಾಗುತ್ತದೆ ಎಂಬುದಕ್ಕಿಂತ, ಹೊಸ ಆಡಳಿತ ವ್ಯವಸ್ಥೆ ಹೇಗೆ ರೂಪುಗೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ.
ಪಾಕಿಸ್ತಾನದ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಬಹುದೇ?
ಪಾಕಿಸ್ತಾನವು ಹಲವು ವರ್ಷಗಳಿಂದ ಹಣದುಬ್ಬರ, ದುರ್ಬಲ ಆರ್ಥಿಕ ಬೆಳವಣಿಗೆ, ವಿದೇಶಿ ಸಾಲ ಮತ್ತು ಸಾಲದ ಮೇಲಿನ ಬಡ್ಡಿ ಪಾವತಿಯ ಹೊರೆ ಸೇರಿದಂತೆ ಗಂಭೀರ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳಿಗೆ ಪ್ರಾಂತ್ಯಗಳ ದೊಡ್ಡ ಗಾತ್ರವೊಂದೇ ಕಾರಣವಲ್ಲ. ತೆರಿಗೆ ಸಂಗ್ರಹದಲ್ಲಿನ ಸವಾಲುಗಳು, ಆರ್ಥಿಕ ನೀತಿಗಳಲ್ಲಿನ ದೌರ್ಬಲ್ಯಗಳು, ಆಡಳಿತದ ಮೇಲಿನ ವಿಶ್ವಾಸದ ಕೊರತೆ ಮತ್ತು ರಾಜಕೀಯ ಅಸ್ಥಿರತೆಯೂ ಪ್ರಮುಖ ಪಾತ್ರ ವಹಿಸುತ್ತವೆ.
ಹೊಸ ಪ್ರಾಂತ್ಯಗಳನ್ನು ರಚಿಸುವುದರಿಂದ ಆಡಳಿತಾತ್ಮಕ ವೆಚ್ಚವೂ ಹೆಚ್ಚಾಗಬಹುದು. ಹೊಸ ವಿಧಾನಸಭೆಗಳು, ಸಚಿವಾಲಯಗಳು, ಸರ್ಕಾರಿ ಕಚೇರಿಗಳು ಮತ್ತು ಅಧಿಕಾರಶಾಹಿ ವ್ಯವಸ್ಥೆಗಳಿಗೆ ಹಣ ಬೇಕಾಗುತ್ತದೆ. ಅದೇ ಸಮಯದಲ್ಲಿ, ಸೂಕ್ತ ಯೋಜನೆಯೊಂದಿಗೆ ಹೊಸ ಘಟಕಗಳನ್ನು ರಚಿಸಿದರೆ ಸಾರ್ವಜನಿಕ ಸೇವೆಗಳನ್ನು ಜನರಿಗೆ ತಲುಪಿಸುವ ವೆಚ್ಚ ಮತ್ತು ಸಮಯವನ್ನು ಕಡಿಮೆ ಮಾಡುವ ಅವಕಾಶವೂ ಇದೆ.
ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ್ನಲ್ಲಿ ಸವಾಲುಗಳು
ಪಾಕಿಸ್ತಾನದ ಆಂತರಿಕ ರಾಜಕೀಯ (politics) ಪರಿಸ್ಥಿತಿ ಈಗಾಗಲೇ ಹಲವು ಸವಾಲುಗಳಿಂದ ಕೂಡಿದೆ. ಖೈಬರ್ ಪಖ್ತುನ್ಖ್ವಾದಲ್ಲಿ ರಾಜಕೀಯ ಸಂಘರ್ಷಗಳು ಮತ್ತು ಉಗ್ರಗಾಮಿ ಹಿಂಸಾಚಾರದ ಸಮಸ್ಯೆಗಳಿವೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಈ ಪ್ರಾಂತ್ಯದಲ್ಲಿ ಪ್ರಬಲ ರಾಜಕೀಯ ನೆಲೆ ಹೊಂದಿದೆ.
ಇಂತಹ ಸಂದರ್ಭದಲ್ಲಿ ಆಡಳಿತಾತ್ಮಕ ಗಡಿಗಳನ್ನು ಬದಲಾಯಿಸುವ ನಿರ್ಧಾರವು ಹೊಸ ರಾಜಕೀಯ ಸಂಘರ್ಷಗಳಿಗೆ ಕಾರಣವಾಗದಂತೆ ನೋಡಿಕೊಳ್ಳುವುದು ಅಗತ್ಯ. ಸ್ಥಳೀಯ ಜನರ ಅಭಿಪ್ರಾಯವನ್ನು ನಿರ್ಲಕ್ಷಿಸಿ ಹೊಸ ಪ್ರಾಂತ್ಯಗಳನ್ನು ರಚಿಸಿದರೆ, ಈಗಾಗಲೇ ಇರುವ ಅಸಮಾಧಾನ ಮತ್ತಷ್ಟು ಹೆಚ್ಚಾಗಬಹುದು.
ಬಲೂಚಿಸ್ತಾನ್ನ ಪರಿಸ್ಥಿತಿಯೂ ಸೂಕ್ಷ್ಮವಾಗಿದೆ. ಅಲ್ಲಿ ಹಲವು ವರ್ಷಗಳಿಂದ ಪ್ರತ್ಯೇಕತಾವಾದಿ ಹಿಂಸಾಚಾರ, ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಹಕ್ಕು ಮತ್ತು ಕೇಂದ್ರ ಸರ್ಕಾರದೊಂದಿಗಿನ ಸಂಘರ್ಷದ ಪ್ರಶ್ನೆಗಳು ಮುಂದುವರಿದಿವೆ. ಈ ಪ್ರದೇಶವನ್ನು ವಿಭಜಿಸುವ ಯಾವುದೇ ಯೋಜನೆಯು ಭೂಪ್ರದೇಶ, ಸಂಪನ್ಮೂಲ ಹಂಚಿಕೆ ಮತ್ತು ಸ್ಥಳೀಯ ಜನರ ರಾಜಕೀಯ ಹಕ್ಕುಗಳ ಕುರಿತು ಗಂಭೀರ ಚರ್ಚೆಯನ್ನು ಒಳಗೊಂಡಿರಬೇಕು.
ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಆಡಳಿತ, ಬೆಲೆ ಏರಿಕೆ ಮತ್ತು ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಅಸಮಾಧಾನಗಳು ಪ್ರತಿಭಟನೆಗಳ ರೂಪದಲ್ಲಿ ವ್ಯಕ್ತವಾಗಿರುವ ಸಂದರ್ಭಗಳಿವೆ. ಇವೆಲ್ಲವೂ ಪಾಕಿಸ್ತಾನದ ಆಂತರಿಕ ಆಡಳಿತ ಸುಧಾರಣೆ ಎಷ್ಟು ಸಂಕೀರ್ಣವಾದ ವಿಷಯ ಎಂಬುದನ್ನು ತೋರಿಸುತ್ತವೆ.
ಭಾರತದ ಭದ್ರತಾ ಹಿತಾಸಕ್ತಿಗೆ ಸ್ಥಿರವಾದ ನೆರೆರಾಷ್ಟ್ರ ಮುಖ್ಯ. ಪಾಕಿಸ್ತಾನದ ಆಂತರಿಕ ಅಸ್ಥಿರತೆಯನ್ನು ಭಾರತವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಲ್ಲಿ ರಾಜಕೀಯ ಸಂಘರ್ಷಗಳು ಹೆಚ್ಚಾದರೆ ಗಡಿ ಭದ್ರತೆ ಮತ್ತು ಪ್ರಾದೇಶಿಕ ಸಂಬಂಧಗಳ ಮೇಲೆಯೂ ಪರಿಣಾಮ ಬೀರಬಹುದು. ಅದೇ ರೀತಿ, ಹೊಣೆಗಾರಿಕೆಯುತ ಆಡಳಿತ ಮತ್ತು ಆರ್ಥಿಕ ಸ್ಥಿರತೆ ನೆಲೆಸಿದರೆ, ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ಸಂವಾದಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು.


Click it and Unblock the Notifications
