• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿ. ಬೆನಜಿರ್- ಜರ್ದಾರಿ ಮಗಳು ಭಕ್ತವರ್ ಮದುವೆ ನಿಶ್ಚಯ; ಪಾಕ್ ನಲ್ಲಿ ಸಂಭ್ರಮ

By ಅನಿಲ್ ಆಚಾರ್
|

ಪಾಕಿಸ್ತಾನದಲ್ಲಿನ ಈ ವಿದ್ಯಮಾನ ಭಾರತ, ಬಾಂಗ್ಲಾದೇಶ್, ಶ್ರೀಲಂಕಾ, ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಹಾಗೂ ಯು.ಕೆ.ನಲ್ಲೂ ಸುದ್ದಿ ಆಗಿದೆ. ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಅಸಿಫ್ ಅಲಿ ಜರ್ದಾರಿ ಹಾಗೂ ಮಾಜಿ ಪ್ರಧಾನಿ- ದಿವಂಗತ ಬೆನಜಿರ್ ಭುಟ್ಟೋ ಮಗಳು ಭಕ್ತವರ್ ಭುಟ್ಟೋ ಜರ್ದಾರಿ ನಿಶ್ಚಿತಾರ್ಥ ಆಗಿದೆ. ಯು.ಎಸ್. ಮೂಲದ ವಾಣಿಜ್ಯೋದ್ಯಮಿ ಮೆಹ್ಮೂದ್ ಚೌಧರಿ ಜತೆಗೆ ಶುಕ್ರವಾರದಂದು ಮದುವೆ ನಿಶ್ಚಯ ಆಗಿದೆ.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಈ ಸುದ್ದಿಯನ್ನು ಘೋಷಣೆ ಮಾಡಿದೆ. "ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಈ ಘೋಷಣೆ ಮಾಡಲು ಸಂತೋಷಿಸುತ್ತಾರೆ. ಆ ದೇವರ ದಯೆಯಿಂದ ಅವರ ಹಾಗೂ ಹುತಾತ್ಮ ಮೊಹ್ತರ್ಮಾ ಬೆನಜಿರ್ ಭುಟ್ಟೋ ಮಗಳಾದ ಭಕ್ತವರ್ ಭುಟ್ಟೋ ಜರ್ದಾರಿ ನಿಶ್ಚಿತಾರ್ಥವು ಮೆಹ್ಮೂದ್ ಚೌಧರಿಯೊಂದಿಗೆ ನವೆಂಬರ್ 27, 2020ರಂದು ನಡೆದಿದೆ," ಎಂದು ಪಿಪಿಪಿ ಮಾಧ್ಯಮ ವಿಭಾಗ ತಿಳಿಸಿದೆ.

ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಪ್ರಕಾರ, ದುಬೈನಲ್ಲಿ ಚೌಧರಿ ಕುಟುಂಬದ ವ್ಯವಹಾರಗಳಿವೆ. ಅಂದ ಹಾಗೆ ಕರಾಚಿಯಲ್ಲಿ ಇರುವ ಬಿಲಾವಲ್ ಹೌಸ್ ನಲ್ಲಿ ಈ ನಿಶ್ಚಿತಾರ್ಥ ನಡೆದಿದೆ. ಮೆಹೆಂದಿ ಕಾರ್ಯಕ್ರಮವು ಇದೇ ಸ್ಥಳದಲ್ಲಿ ನಡೆಯಲಿದೆ. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಕೋವಿಡ್ 19 ಪರೀಕ್ಷೆ ಕಡ್ಡಾಯವಾಗಿತ್ತು.

ಇಪ್ಪತ್ನಾಲ್ಕು ಗಂಟೆ ಮುಂಚಿತವಾಗಿ ಪರೀಕ್ಷೆ ವರದಿ ಇಮೇಲ್ ಮಾಡಬೇಕಿತ್ತು. ಅತಿಥಿಗಳು ಮೊಬೈಲ್ ಫೋನ್ ತೆಗೆದುಕೊಂಡು ಹೋಗುವಂತಿರಲಿಲ್ಲ. ಕಾರ್ಯಕ್ರಮದ ಸ್ಥಳದಲ್ಲಿ ಫೋಟೋ ತೆಗೆಯುವುದಕ್ಕೆ ಅನುಮತಿ ಇರಲಿಲ್ಲ. ಮೂಲಗಳ ಪ್ರಕಾರ, ಮೂವತ್ತು ವರ್ಷದ ಭಕ್ತವರ್ ತಮ್ಮ ನಿಶ್ಚಿತಾರ್ಥದ ವೇಳೆ ಧರಿಸಿದ್ದ ದಿರಿಸು ಬೆನಜಿರ್ ಭುಟ್ಟೋ ತಮ್ಮ 'ನಿಖಾಹ್' ವೇಳೆ ಧರಿಸಿದ್ದ, ರೇಷಮ್ ರೇವಜ್ ಡಿಸೈನ್ ಮಾಡಿದ್ದ ದಿರಿಸನ್ನೇ ಎನ್ನಲಾಗಿದೆ. ಇನ್ನು ಭಕ್ತವರ್ ಮದುವೆ ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿದೆ.

ಭಾರತದಲ್ಲಿ ನೆಹರೂ- ಗಾಂಧಿ ಕುಟುಂಬದ ರಾಜಕೀಯ ಇತಿಹಾಸ ಹೇಗೆ ಕಾಣಲು ಸಿಗುತ್ತದೋ ಅದೇ ರೀತಿ ಪಾಕಿಸ್ತಾನದಲ್ಲಿ ಭುಟ್ಟೋ ಕುಟುಂಬ. ಬೆನಜಿರ್ ಭುಟ್ಟೋ ಅವರು ಪಾಕಿಸ್ತಾನದ ಪ್ರಧಾನಿ ಆಗಿದ್ದರು. ಆಕೆಯ ತಂದೆ ಝುಲ್ಫಿಕರ್ ಅಲಿ ಭುಟ್ಟೋ ಕೂಡ ಅಲ್ಲಿನ ಪ್ರಧಾನಿ ಆಗಿದ್ದರು. ಇನ್ನು ಬೆನಜಿರ್ ರ ಪತಿ ಅಸಿಫ್ ಅಲಿ ಜರ್ದಾರಿ ರಾಷ್ಟ್ರಾಧ್ಯಕ್ಷರಾಗಿದ್ದರು.

ಬೆನಜಿರ್ ಪ್ರಧಾನಿ ಹುದ್ದೆಯಲ್ಲಿ ಇದ್ದಾಗಲೇ ಭಕ್ತವರ್ ಜನಿಸಿದ್ದು. ಬೆನಜಿರ್ ಅವರ ಮಗ ಬಿಲಾವಲ್ ಭುಟ್ಟೋ ಜರ್ದಾರಿ ಸದ್ಯಕ್ಕೆ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಮುಖ್ಯಸ್ಥ. ಭುಟ್ಟೋ ಕುಟುಂಬದಲ್ಲಿ ಝುಲ್ಫೀಕರ್ ಅವರನ್ನು ನೇಣಿಗೆ ಏರಿಸಲಾಯಿತು. ಇನ್ನು ಬೆನಜಿರ್ ಭುಟ್ಟೋ ಹತ್ಯೆಯಾದರು.

ಭಕ್ತವರ್ ಅವರಿಗೆ ಅಸೀಫಾ ಜರ್ದಾರಿ ಭುಟ್ಟೋ ಎಂಬ ಹೆಸರಿನ ಕಿರಿಯ ಸೋದರಿ ಇದ್ದಾರೆ. ಬೆನಜಿರ್ ಭುಟ್ಟೋ- ಅಸಿಫ್ ಅಲಿ ಜರ್ದಾರಿ ಹಿರಿಯ ಮಗ ಬಿಲಾವಲ್, ಮಗಳು ಭಕ್ತವರ್ ಹಾಗೂ ಅಸಿಫಾ ಹೀಗೆ ಇಡೀ ಕುಟುಂಬದ ಶಿಕ್ಷಣವು ವಿದೇಶಗಳಲ್ಲೇ ಆಗಿದೆ.

English summary
Banazir Bhutto's daughter Bhaktawar Bhutto Zardari got engaged on November 27, 2020. Here is the must know details of this event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X