ಎ.ಆರ್. ರಹಮಾನ್ ವಿರುದ್ಧ ಟ್ವಿಟ್ಟರ್ ನಲ್ಲಿ ದೂರುಗಳ ಮಹಾಪೂರ

Posted By:
Subscribe to Oneindia Kannada

ಲಂಡನ್, ಜುಲೈ 14: ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ವಿರುದ್ಧ ಟ್ವಿಟ್ಟರಿಗರು ಭಾರೀ ಅಸಮಾಧಾನ ವ್ಯಕ್ತವಾಗಿದೆ. ಜುಲೈ 8ರಂದು ವೆಂಬ್ಲೆಯಲ್ಲಿ ಈ ಸಂಗೀತ ಕಾರ್ಯಕ್ರಮ ನಡೆದಿತ್ತು.

ಆ ಸಂಗೀತ ಕಾರ್ಯಕ್ರಮದಲ್ಲಿ ಅತಿ ಹೆಚ್ಚಾಗಿ ತಮಿಳು ಚಿತ್ರದ ಹಾಡುಗಳನ್ನೇ ಹಾಡಿದ್ದು ಹಲವರನ್ನು ಕೆರಳಿಸಿದೆ. ಕೇವಲ ಬೆರಳೆಣಿಯಷ್ಟು ಹಿಂದಿ ಹಾಡುಗಳನ್ನು ಹಾಡಿದ್ದು ರಹಮಾನ್ ಹಾಡಿದ ಉಳಿದೆಲ್ಲಾ ಹಾಡುಗಳು ಬರಿ ತಮಿಳು ಹಾಡುಗಳೇ ಆಗಿದ್ದವು ಎಂದು ಹಲವರು ದೂರಿಕೊಂಡಿದ್ದಾರೆ.

AR Rahman Performed Tamil Songs And The Shock Was Too Much For These Fans

ಈ ಬಗ್ಗೆ ಹಲವಾರು ಜನರು ಟ್ವಿಟರ್ ನಲ್ಲಿ ರಹಮಾನ್ ವಿರುದ್ಧ ಕಿಡಿಕಾರಿದ್ದು, ಅತಿ ಹೆಚ್ಚು ತಮಿಳು ಹಾಡುಗಳನ್ನು ಹಾಡಿದ್ದರಿಂದ ಅವ್ಯಾವೂ ಅರ್ಥವಾಗದ ನಮಗೆ ಭ್ರಮನಿರಸನವಾಗಿದೆ. ಹಾಗಾಗಿ, ಸಂಗೀತ ಕಾರ್ಯಕ್ರಮಕ್ಕಾಗಿ ನಾವು ಕೊಂಡಿದ್ದ ಟಿಕೆಟ್ ಶುಲ್ಕವನ್ನು ಹಿಂದಿರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೂ, ಕೆಲವರು, ರಹಮಾನ್ ಅವರು ತಮಿಳು ಚಿತ್ರರಂಗದ ಮೂಲಕ ಬೆಳಕಿಗೆ ಬಂದಿದ್ದರೂ, ಅವರೊಂದು ನೆಲೆ ಕಂಡುಕೊಂಡಿದ್ದು ಬಾಲಿವುಡ್ ನಿಂದ. ಹಾಗಾಗಿ, ಅವರು ಹಿಂದಿ ಹಾಡುಗಳನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ತಿಳಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Musicial AR Rahman himself engulfed in a controversy by singing a number of tamil songs in his London concert recently. Many of the people who attended this, concert.
Please Wait while comments are loading...