Mystery Pneumonia: ಚೀನಾ ಶಾಲೆಗಳ ಮೂಲಕ ವ್ಯಾಪಿಸುತ್ತಿದೆ ಮತ್ತೊಂದು ಸಾಂಕ್ರಾಮಿಕ ರೋಗ!
ಕೊರೊನಾದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಚೀನಾ ಮತ್ತೊಂದು ಹೊಸ ಭೀತಿಯನ್ನು ಎದುರಿಸುತ್ತಿದೆ. ನಿಗೂಢ ಸಾಂಕ್ರಾಮಿಕ ರೋಗವೊಂದು ಏಕಾಏಕಿ ಚೀನಾ ಶಾಲೆಗಳಲ್ಲಿ ವ್ಯಾಪಿಸುತ್ತಿದೆ. ವೇಗವಾಗಿ ಹರಡುತ್ತಿರುವ ಈ ರೋಗ ಕೋವಿಡ್ ಬಿಕ್ಕಟ್ಟಿನ ಆರಂಭಿಕ ದಿನಗಳನ್ನು ನೆನಪಿಸುತ್ತಿದೆ.
ನಿತ್ಯ ಈ ಖಾಯಿಲೆಯಿಂದಾಗಿ ಆಸ್ಪತ್ರೆಗಳಲ್ಲಿ ದಾಖಲಾತಿಗಳು ಹೆಚ್ಚಾಗುತ್ತಿವೆ. ಇದು ಭಾರತ ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ಮತ್ತೆ ಪರಿಣಾಮ ಬೀರುವಂತೆ ಕಾಣಿಸುತ್ತಿದೆ. 500 ಮೈಲುಗಳಷ್ಟು ಈಶಾನ್ಯದಲ್ಲಿರುವ ಬೀಜಿಂಗ್ ಮತ್ತು ಲಿಯಾನಿಂಗ್‌ನಲ್ಲಿರುವ ಆಸ್ಪತ್ರೆಗಳು ಅನಾರೋಗ್ಯದ ಮಕ್ಕಳ ಸಂಖ್ಯೆಯನ್ನು ನಿಭಾಯಿಸಲು ಹೆಣಗಾಡುತ್ತಿವೆ.

ಈ ನಿಗೂಢ ಸಾಂಕ್ರಾಮಿಕ ರೋಗದಿಂದ ದಾಖಲಾಗುವ ಮಕ್ಕಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಸಂಪನ್ಮೂಲಗಳ ಕೊರತೆ ಹೆಚ್ಚಾಗುತ್ತಿದೆ. ಏಕಾಏಕಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ಸೂಚಿಸುತ್ತವೆ. ಆಸ್ಪತ್ರೆಗಳಿಗೆ ದಾಖಲಾಗುವ ಮಕ್ಕಳು ಶ್ವಾಸಕೋಶದ ಉರಿಯೂತ ಮತ್ತು ಅಧಿಕ ಜ್ವರ ಸೇರಿದಂತೆ ಅಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಇವರು ವಿಶಿಷ್ಟವಾದ ಕೆಮ್ಮು, RSV ಮತ್ತು ಇತರ ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದ ಇತರ ಚಿಹ್ನೆಗಳನ್ನು ಹೊಂದಿರುವುದಿಲ್ಲ.
ಮಾನವರು ಮತ್ತು ಪ್ರಾಣಿಗಳಲ್ಲಿ ಪ್ರಪಂಚದಾದ್ಯಂತ ಹರಡುವ ರೋಗಗಳನ್ನು ಪತ್ತೆಹಚ್ಚುವ ProMed ಮಕ್ಕಳ ಮೇಲೆ ಪರಿಣಾಮ ಬೀರುವ "ಮಿಸ್ಟರಿ ನ್ಯುಮೋನಿಯಾ" ದ ಉದಯೋನ್ಮುಖ ಸಾಂಕ್ರಾಮಿಕ ರೋಗದ ಬಗ್ಗೆ ಮಂಗಳವಾರ ಸಂಜೆ ಎಚ್ಚರಿಕೆಯನ್ನು ನೀಡಿದೆ.
⚠️UNDIAGNOSED PNEUMONIA OUTBREAK—An emerging large outbreak of pneumonia in China, with pediatric hospitals in Beijing, Liaoning overwhelmed with sick children, & many schools suspended. Beijing Children's Hospital overflowing. 🧵on what we know so far:pic.twitter.com/hmgsQO4NEZ
— Eric Feigl-Ding (@DrEricDing) November 22, 2023
ಡಿಸೆಂಬರ್ 2019 ರ ಅಂತ್ಯದಲ್ಲಿ ನೀಡಲಾದ ಕೊರೊನಾ ವೈರಸ್ ಬಗೆಗಿನ ಎಚ್ಚರಿಕೆಯನ್ನು ನೀಡಲಾಗಿದೆ. ಸದ್ಯ ಈ ವೈರಲ್ ಅನ್ನು SARS-CoV-2 ತರಹದ್ದು ಎಂದು ಗುರುತಿಸಲಾಗಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವೈದ್ಯಕೀಯ ವೃತ್ತಿಪರರು ಮತ್ತು ವಿಜ್ಞಾನಿಗಳನ್ನು ಎಚ್ಚರಿಸಿದೆ.
ವಿಜ್ಞಾನಿಗಳ ಪ್ರಕಾರ, '' ಈ ವೈರಸ್ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯಬೇಕಿದೆ. ಈ ಏಕಾಏಕಿ ಹರಡುತ್ತಿದೆ. ಎಲ್ಲಿಂದ ಯಾವಾಗ ಪ್ರಾರಂಭವಾಯಿತು ಎಂಬುದು ಸ್ಪಷ್ಟವಾಗಿಲ್ಲ. ಏಕೆಂದರೆ ಅನೇಕ ಮಕ್ಕಳ ಮೇಲೆ ಇದು ಬೇಗನೆ ಪರಿಣಾಮ ಬೀರುತ್ತಿದೆ. ಇದು ಯಾವುದೇ ವಯಸ್ಕರ ಮೇಲೆ ಪರಿಣಾಮ ಬೀರಿರುವುದು ಈವರೆಗೂ ವರದಿಯಾಗಿಲ್ಲ" ಎಂದಿದ್ದಾರೆ.
ಹೀಗಾಗಿ ಇದು ಮತ್ತೊಂದು ಸಾಂಕ್ರಾಮಿಕ ರೋಗವಾಗಬಹುದೇ ಎಂದು ಸಂಶೋಧನೆಗಳು ನಡೆಯುತ್ತಿವೆ. ಈ ಸಾಂಕ್ರಾಮಿಕದ ಸಮಯ ಎಷ್ಟು ಎಂದು ಸಂಶೋಧನೆಗಳ ಮೂಲಕ ತಿಳಿಯಬೇಕಿದೆ.
ಚೀನಾದಲ್ಲಿ ಕೊರೊನಾ ಆರ್ಭಟದಿಂದಾಗಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಹಿರಿಯರು ಸೋಂಕಿಗೆ ಒಳಗಾಗಿ ಪ್ರಾಣ ಬಿಟ್ಟಿದ್ದಾರೆ. ಆ ಸಮಯದಲ್ಲಿ ಚಿಕಿತ್ಸೆಗಾಗಿ ವಯಸ್ಸಾದವರು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಗಳಲ್ಲಿ ಕಾಯುವಂತ ಸ್ಥಿತಿ ಎದುರಾಗಿತ್ತು. ದಿನನಿತ್ಯ ಚೀನಾದಲ್ಲಿ ಹತ್ತು ಸಾವಿರ ಕೇಸ್ ವರದಿಯಾಗುತ್ತಿದ್ದವು. ಮಾತ್ರವಲ್ಲದೆ 5,000 ಕ್ಕೂ ಹೆಚ್ಚು ಸಾವುಗಳು ವರದಿಯಾಗುತ್ತಿದ್ದವು. ಆದರೆ ಸಾವುಗಳ ಬಗ್ಗೆ ಚೀನಾ ಈವರೆಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಮಾತ್ರವಲ್ಲದೆ ಶವಸಂಸ್ಕಾರ ನಡೆಸಲೂ ಜಾಗವಿಲ್ಲದೇ ಸ್ಮಶಾನಗಳಲ್ಲಿ ಹೆಣಗಳನ್ನು ದಮನ ಮಾಡಲು ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದಾದ ಬಳಿಕ ಚೀನಾ ಒಂದಾದ ಮೇಲ್ಲೊಂದರಂತೆ ವೈರಸ್ ನೋಡುತ್ತಲೇ ಬರುತ್ತಿದೆ. ಆದರೆ ಇದರಿಂದ ಶಾಶ್ವತ ಪರಿಹಾರವನ್ನು ಹುಡುಕಲು ಅದಕ್ಕೆ ಸಾಧ್ಯವಾಗಿಲ್ಲ.
-
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ












Click it and Unblock the Notifications