ಇಂಡೋನೇಷ್ಯಾದಲ್ಲಿ ಮತ್ತೆ ಭೂಕಂಪ, 5.9 ತೀವ್ರತೆ ದಾಖಲು
ಲಾಂಬೂಕ್, ಆಗಸ್ಟ್ 09: ಈಗಾಗಲೇ ತೀವ್ರ ಭೂಕಂಪದಿಂದ ನಲುಗಿರುವ ಇಂಡೋನೇಷಿಯಾ ಜನತೆ ಇಂದು ಮತ್ತೆ ಭೂಕಂಪದ ತಾಪಕ್ಕೆ ಬಲಿಯಾಗಬೇಕಾಯಿತು.
ಇಂದು ಇಂಡೋನೇಷ್ಯಾದ ಲಂಬೂಕಾ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 5.9 ರಷ್ಟು ತೀವ್ರತೆ ದಾಖಲಾಗಿದೆ. ಭಾನವುಆರವಷ್ಟೆ 7.0 ತೀವ್ರತೆಯ ಭಾರಿ ಭೂಕಂಪ ಕಂಡಿದ್ದ ಇಂಡೋನೇಷ್ಯಾ ಜನತೆ ಇಂದು ಮತ್ತೆ ಆತಂಕದಲ್ಲಿ ದಿನ ದೂಡುವಂತಾಗಿದೆ.
ಲಂಬೂಕ ಪ್ರಾಂತ್ಯದಲ್ಲಿ ಹಳ್ಳಿಗಳೇ ಹೆಚ್ಚಿಗಿದ್ದು, ಕಳೆದ ಭೂಕಂಪನವನ್ನು ಹಾಗೂ ಹೀಗೂ ತಾಳಿಕೊಂಡು ನಿಂತಿದ್ದ ಮನೆಗಳು ಇಂದು ಸಂಪೂರ್ಣ ಧರೆಗುರುಳಿವೆ.

ಪರಿಹಾರ ಕಾರ್ಯ ತಡ ಸಾಧ್ಯತೆ
ಭೂಕಂಪನದಿಂದ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸುವ ಸಂದರ್ಭದಲ್ಲೇ ಇನ್ನೊಂದು ಪ್ರಬಲ ಭೂಕಂಪವಾಗಿರುವುದು ನೆರವು ಕಾರ್ಯವನ್ನು ಇನ್ನಷ್ಟು ತಡ ಮಾಡಿದೆ ಭೂಕಂಪನಿಂದ ನಿರ್ಗತಿಕರಾದವರಿಗೆ ತಾತ್ಕಾಲಿಕ ಶೆಡ್ ನಿರ್ಮಾಣ ಕಾರ್ಯ ನಡೆಸಲಾಗುತ್ತಿತ್ತು, ಇಂದಿನ ಭೂಕಂಪನದಿಂದ ಅದೂ ಹಾಳಾಗಿದೆ.

ಭಾನುವಾರದಿಂದ 355 ಭೂಕಂಪನಗಳು ದಾಖಲು
ಭಾನುವಾರದಿಂದ ಇಂಡೋನೇಷ್ಯಾದಲ್ಲಿ 355 ಭೋಕಂಪನಗಳು ದಾಖಲಾಗಿದ್ದು, ಭಾನುವಾರದ ಭೂಕಂಪನ ಹೊರತುಪಡಿಸಿದರೆ ಇಂದು ಗುರುವಾರ ಸಂಭವಿಸಿದ ಭೂಕಂಪನ ಪ್ರಬಲವಾಗಿದ್ದವು ಎಂದು ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ಮಾಪನ ಸಂಸ್ಥೆ ಹೇಳಿದೆ.

300 ಕ್ಕೂ ಹೆಚ್ಚು ಜನ ಸಾವು
ಭಾನುವಾರ ಮತ್ತು ಇಂದು ಸಂಭವಿಸಿರುವ ಭೂಕಂಪನದಿಂದ 300 ಕ್ಕೂ ಅಧಿಕ ಜನ ಅಸುನೀಗಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಭೂಕಂಪನದಿಂದ ತತ್ತರಿಸಿರುವ ಇಂಡೋನೇಷ್ಯಾಕ್ಕೆ ರೆಡ್‌ಕ್ರಾಸ್ ಸಂಸ್ಥೆ ನೆರವು ನೀಡುವುದಾಗಿ ಘೋಷಿಸಿದೆ.

ಮಿತಿಮೀರಿದ ಗಾಯಾಳುಗಳ ಸಂಖ್ಯೆ
ಭೂಕಂಪನಿದಂದ ಗಾಯಗೊಂಡಿರುವವ ಸಂಖ್ಯೆ ಸಾವಿರಾರಾಗಿದ್ದು, ಗಾಯಗೊಂಡವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸ್ಥಳಾವಕಾಶದ ಕೊರತೆ ಎದುರಾಗಿದೆ. ಅಲ್ಲದೆ ಮನೆ ಕಳೆದುಕೊಂಡವರ ಸಂಖ್ಯೆಯೂ ಹೆಚ್ಚಾಗಿದ್ದದು, ಸಾವಿರಾರು ಜನ ನಿರ್ಗತಿಕರಾಗಿದ್ದಾರೆ.












Click it and Unblock the Notifications