15,730 ಕೆಜಿ ಟ್ರಕ್ ಅನ್ನು ಹಲ್ಲುಗಳಿಂದ ಎಳೆದು ದಾಖಲೆ ಬರೆದ ಈಜಿಪ್ಟ್ ವ್ಯಕ್ತಿ

ಒಬ್ಬ ಮನುಷ್ಯನ ಶಕ್ತಿಯನ್ನು ಆತನ ದಷ್ಟಪುಷ್ಟವಾದ ದೇಹದಿಂದ ಅಳೆಯಲು ಸಾಧ್ಯವಿಲ್ಲ. ಆತ ನೋಡಲು ಬಲಶಾಲಿಯಾಗಿ ಕಾಣದೇ ಇದ್ದರೂ ಆತನಲ್ಲಿ ನಾವ್ಯಾರೂ ಊಹಿಸದ ಶಕ್ತಿ ಇರಬಹುದು. ಸಾಮಾನ್ಯವಾಗಿ ನಾವು ನೀವೆಲ್ಲಾ ಭಾರವಾದ ವಸ್ತುಗಳನ್ನು ಎತ್ತುವ ಸಾಹಸ ಮಾಡುವ ವ್ಯಕ್ತಿಗಳನ್ನು ನೋಡಿರುತ್ತೇವೆ. ಕಾಲಿಂದ ಬೇರೆ ಯಾರೂ ಹೋರದ ಭಾರವನ್ನು ಹೋರುವುದನ್ನು ಕಂಡಿದ್ದೇವೆ.

ಅಷ್ಟೇ ಯಾಕೆ ಹೆಗಲ ಮೇಲೆ ಭಾರದ ವಸ್ತುಗಳನ್ನು ಹೊತ್ತು ಸಾಧನೆ ಮಾಡಿದ ವ್ಯಕ್ತಿಗಳು ನಮ್ಮ ಕಣ್ಣು ಮುಂದಿದ್ದಾರೆ. ಆದರೆ ಇಲ್ಲೊಬ್ಬ ಈಜಿಪ್ಟ್‌ನ ವ್ಯಕ್ತಿ ತನ್ನ ಹಲ್ಲಿನಿಂದ ಒಂದಲ್ಲ ಎರಡಲ್ಲಾ ಬರೋಬ್ಬರಿ 15,730 ಕಿಲೋಗ್ರಾಂ ತೂಕದ ಟ್ರಕ್ ಎಳೆದಿದ್ದಾನೆ. ಹಲ್ಲಿನಿಂದ ಆಹಾರ ಕಚ್ಚಿ ತಿನ್ನಲು ಹೆಣಗಾಡುವ ಜನರ ನಡುವೆ ಇಷ್ಟು ಭಾರದ ವಾಹನ ಎಳೆಯುವುದು ಅಂದ್ರೆ ಇದೊಂದು ಸರಳವಾದ ಕೆಲಸವಲ್ಲಿ. ವ್ಯಕ್ತಿ ತನ್ನ ಹಲ್ಲಿನಿಂದ ಟ್ರಕ್ ಎಳೆಯುವ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು. ನೋಡುಗರು ಬೆಚ್ಚಿ ಬಿದ್ದಿದ್ದಾರೆ.

An Egyptian man set a record for pulling a 15,730 kg truck with his teeth

ಮಾತ್ರವಲ್ಲದೆ ಟ್ರಕ್ ಅನ್ನು ತನ್ನ ಹಲ್ಲುಗಳಿಂದ ಎಳೆಯುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾನೆ. ಅಂದಹಾಗೆ ಈತನ ಹೆಸರು ಅಶ್ರಫ್ ಮಹ್ರೂಸ್ ಮೊಹಮ್ಮದ್ ಸುಲಿಮಾನ್. ಜೂನ್ 13, 2021 ರಂದು ಈಜಿಪ್ಟ್‌ನ ಇಸ್ಮಾಯಿಲಿಯಾದಲ್ಲಿ ಈ ದಾಖಲೆಯನ್ನು ಸ್ಥಾಪಿಸಿದರು. ಅವರ ದಾಖಲೆಯ ಪ್ರಯತ್ನದ ವಿಡಿಯೋವನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ವೈರಲ್ ಆಗಿರುವ ಇನ್‌ಸ್ಟಾಗ್ರಾಮ್ ರೀಲ್ ಅನ್ನು 4 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಹಲವಾರು ಜನ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ವಿಡಿಯೋವನ್ನು ನೋಡಿದ ನೆಟ್ಟಗರೊಬ್ಬರು ಈ ದೃಶ್ಯವನ್ನು ಕಂಡು ನನಗೆ ಹಲ್ಲುಗಳು ನೋವಾಗುತ್ತಿವೆ ಎಂದು ಬರೆದಿದ್ದಾರೆ. ಇನ್ನೊಬ್ಬರು ತಮಾಷೆಯಾಗಿ "ವ್ಯಕ್ತಿಯ ದಂತವೈದ್ಯರು ಯಾರೆಂದು ನಾನು ಕಂಡುಹಿಡಿಯಬೇಕಾಗಿದೆ" ಎಂದು ಬರೆದಿದ್ದಾರೆ. ಮೂರನೆಯ ಬಳಕೆದಾರ, "ಅದು ಸಂಪೂರ್ಣವಾಗಿ ಹುಚ್ಚುತನವಾಗಿದೆ. ಅವನಿಗೆ ಎಲ್ಲಿಂದ ಇಷ್ಟೊಂದು ಶಕ್ತಿ ಬರುತ್ತದೆ" ಎಂದು ಪ್ರಶ್ನೆ ಮಾಡಿದ್ದಾನೆ. ಮತ್ತೊಬ್ಬರು ಹಾಸ್ಯಾಸ್ಪದವಾಗಿ "ದಯವಿಟ್ಟು ನಿಮ್ಮ ಟೂತ್‌ಪೇಸ್ಟ್ ಅನ್ನು ಹೆಸರಿಸಬಹುದೇ?" ಎಂದು ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+