Breaking; ಉಕ್ರೇನ್‌ಗೆ ಮಿಲಿಟರಿ ನೆರವು ಘೋಷಿಸಿದ ಅಮೆರಿಕ

ಮಾಸ್ಕೋ, ಏಪ್ರಿಲ್ 25; ಯುದ್ಧ ಪೀಡಿತ ಉಕ್ರೇನ್‌ಗೆ ಅಮೆರಿಕ ಹೊಸ ಮಿಲಿಟರಿ ನೆರವು ಘೋಷಣೆ ಮಾಡಿದೆ. ಅಧ್ಯಕ್ಷ ಜೋ ಬೈಡನ್‌ ಕಾರ್ಯದರ್ಶಿ ಭಾನುವಾರ ಕೀವ್‌ಗೆ ಭೇಟಿ ನೀಡಿದ್ದರು.

ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಉಕ್ರೇನ್‌ಗೆ ಹೊಸ ಮಿಲಿಟರಿ ನೆರವು ಘೋಷಣೆ ಮಾಡಿದೆ ಮತ್ತು ರಾಜತಾಂತ್ರಿಕ ಸಹಕಾರ ಮುಂದುವರೆಸುವ ಭರವಸೆ ನೀಡಿದೆ.

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಕಾರ್ಯದರ್ಶಿ ಮತ್ತು ಪೆಂಟಗನ್ ಮುಖ್ಯಸ್ಥರು ಭಾನುವಾರ ಕೀವ್‌ಗೆ ಭೇಟಿ ನೀಡಿದ್ದರು. ಈ ಭೇಟಿಯ ಬಳಿಕ ಹೊಸ ಮಿಲಿಟರಿ ನೆರವು ಘೋಷಣೆ ಮಾಡಲಾಗಿದೆ.

America Announces New Military Assistance For Ukraine

ವಾಷಿಂಗ್ಟನ್ ಜೋ ಬಿಡೆನ್ ಕಾರ್ಯದರ್ಶಿಗಳು ಕೀವ್‌ಗೆ ಭೇಟಿ ನೀಡಿರುವುದನ್ನು ಖಚಿತಪಡಿಸಿದೆ. ರಷ್ಯಾ ಉಕ್ರೇನ್‌ನ ವಿವಿಧ ನಗರಗಳ ಮೇಲೆ ದಾಳಿಯನ್ನು ತೀವ್ರಗೊಳಿಸುತ್ತಿರುವ ಸಂದರ್ಭದಲ್ಲಿಯೇ ಅಮೆರಿಕ ಈ ಮಿಲಿಟರಿ ನೆರವು ನೀಡಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶನಿವಾರ ತಾವು ಭಾನುವಾರ ಅಮೆರಿಕದ ಮಿಲಿಟರಿ ಅಧಿಕಾರಿಗಳನ್ನು ಭೇಟಿ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದರು. ಆದರೆ ಅಮೆರಿಕ ಈ ವರದಿಯನ್ನು ಖಚಿತಪಡಿಸಿರಲಿಲ್ಲ. ಈಗ ವಾಷಿಂಗ್ಟನ್ ಕೀವ್‌ಗೆ ಅಧಿಕಾರಿಗಳ ಭೇಟಿಯನ್ನು ಖಚಿತಪಡಿಸಿದೆ.

ಫೆಬ್ರವರಿಯಲ್ಲಿ ಉಕ್ರೇನ್-ರಷ್ಯಾ ಯುದ್ದ ಆರಂಭವಾದ ಬಳಿಕ ಮೊದಲ ಬಾರಿಗೆ ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳು ಉಕ್ರೇನ್‌ಗೆ ಭೇಟಿ ನೀಡಿದ್ದಾರೆ. ಜೋ ಬೈಡನ್ ಕೆಲವೇ ದಿನಗಳಲ್ಲಿ ಉಕ್ರೇನ್‌ಗೆ ಹೊಸ ರಾಯಭಾರಿಯನ್ನು ಘೋಷಣೆ ಮಾಡಲಿದ್ದಾರೆ.

ಭಾನುವಾರ ಕೀವ್‌ನಲ್ಲಿ ಭಾಷಣ ಮಾಡಿರುವ ವೊಲೊಡಿಮಿರ್ ಝೆಲೆನ್ಸ್ಕಿ ದೇಶ ಕರಾಳ ಪರಿಸ್ಥಿತಿಯಿಂದ ಶೀಘ್ರವೇ ಹೊರಬರಲಿದೆ ಎಂದು ಘೋಷಣೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+