ಪ್ರಜೆಗಳನ್ನೇ ಯುದ್ಧ ಭೂಮಿಗೆ ಕಳುಹಿಸುತ್ತಿದೆಯಾ ರಷ್ಯಾ?

ರಷ್ಯಾ ಸೇನೆ ವಿರುದ್ಧ ದಿನಕ್ಕೊಂದು ಆರೋಪಗಳನ್ನ ಪಾಶ್ಚಿಮಾತ್ಯ ದೇಶಗಳು ಮಾಡ್ತಿವೆ. ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿದ ನಂತರ ರಷ್ಯಾ ರೊಚ್ಚಿಗೆದ್ದು ಮನಸ್ಸಿಗೆ ಬಂದಂತೆ ದಾಳಿ ಮಾಡುತ್ತಿದೆ. ಅದರಲ್ಲೂ ಅಮೆರಿಕ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದು, ಇದೀಗ ರಷ್ಯಾ ತನ್ನ ಸಾಮಾನ್ಯ ಪ್ರಜೆಗಳನ್ನೇ ಯುದ್ಧ ಭೂಮಿಗೆ ಕಳುಹಿಸಿದೆ ಎಂಬ ಆರೋಪ ಕೇಳಿಬಂದಿದೆ.

ಉಕ್ರೇನ್ ವಿರುದ್ಧ ಯುದ್ಧ ಶುರುವಾದ ನಂತರ ಲಕ್ಷಾಂತರ ಸೈನಿಕರನ್ನ ಕಳೆದುಕೊಂಡಿದೆ ರಷ್ಯಾ. ಹೀಗಾಗಿ ರಷ್ಯಾ ಬಳಿ ಈಗ ಹೋರಾಡಲು ನುರಿತ ಸೈನಿಕರು ಇಲ್ಲ. ಹೀಗಾಗಿಯೇ ರಷ್ಯಾ ದೇಶದ ಸಾಮಾನ್ಯ ಪ್ರಜೆಗಳನ್ನೇ ಸಜ್ಜುಗೊಳಿಸಿ ಯುದ್ಧ ಭೂಮಿಗೆ ಕಳುಹಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸುಮಾರು 10,000 ಕ್ಕೂ ಹೆಚ್ಚು ಜನರನ್ನು ಈ ರೀತಿ ರಷ್ಯಾ ಕಳುಹಿಸಿದೆ ಎನ್ನಲಾಗಿದೆ. ಹೀಗಾಗಿ ಈ ಬಗ್ಗೆ ಕ್ರಮಕ್ಕೆ ಪಾಶ್ಚಿಮಾತ್ಯರು ಆಗ್ರಹಿಸುತ್ತಿದ್ದಾರೆ. ಆದರೆ ರಷ್ಯಾ ಮಾತ್ರ ಈ ಆರೋಪ ಅಲ್ಲಗಳೆದು ಪ್ರತ್ಯುತ್ತರ ನೀಡಿದೆ.

Allegedly Russia Is Sending Their Citizens For War Against The Ukraine

ಉಕ್ರೇನ್ ಉಡೀಸ್ ಗ್ಯಾರಂಟಿ?

ರಷ್ಯಾ ಈಗ ಹಲ್ಲುಕಚ್ಚಿ ನಿಂತಿರುವುದು ನೋಡಿದರೆ ಉಕ್ರೇನ್ ಸರ್ವನಾಶ ಆಗುವುದು & ರಷ್ಯಾ ಈ ಯುದ್ಧದಲ್ಲಿ ಗೆಲ್ಲುವುದು ಗ್ಯಾರಂಟಿ ಎಂಬ ಮಾತುಗಳು ಕೇಳಿಬರುತ್ತಿವೆ. ಯಾಕೆ ಅಂದ್ರೆ ರಷ್ಯಾ ಕೈಗೆ ಸಾಕಷ್ಟು ಅಸ್ತ್ರಗಳು ಸಿಗುತ್ತಿವೆ, ಇದರ ಜೊತೆಗೆ ರಷ್ಯಾ ಹೊಸ ತಂತ್ರ & ತಂತ್ರಜ್ಞಾನ ಬಳಸಿ ಉಕ್ರೇನ್ ವಿರುದ್ಧ ದಾಳಿ ಮಾಡುತ್ತಿದೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ.

ಇನ್ನೂ 10 ವರ್ಷ ಕಳೆದರೂ ಯುದ್ಧ ನಿಲ್ಲಿಸಬಾರದು ಎಂಬ ಐಡಿಯಾ ರಷ್ಯಾ ತಲೆಯಲ್ಲಿ ಇದೆ ಎಂಬ ಮಾತು ಇದೆ. ಈ ಕಾರಣಕ್ಕೆ ಅಮೆರಿಕ ಕೂಡ ಉಕ್ರೇನ್ ಸೇನೆ ನೆರವಿಗೆ ಮತ್ತೆ ಮತ್ತೆ ಹಣ ಖರ್ಚು ಮಾಡುತ್ತಿದೆ. ಹಾಗೇ ನ್ಯಾಟೋ ಒಕ್ಕೂಟದ ದೇಶಗಳು ಕೂಡ ಹೀಗೆ ಉಕ್ರೇನ್ ಸೇನೆ ಖರ್ಚಿಗೆ ಹಣ ಕೊಡುತ್ತಿವೆ.

ಇನ್ನೂ ಎಷ್ಟು ವರ್ಷ ಯುದ್ಧ?

ರಷ್ಯಾ & ಉಕ್ರೇನ್ ನಡುವೆ ಯುದ್ಧ ಶುರುವಾಗಿ ಇನ್ನೇನು 2.5 ವರ್ಷ ಮುಗಿಯಲಿದ್ದು, ಕೆಲ ತಿಂಗಳಲ್ಲಿ 3ನೇ ವರ್ಷ ಮುಗಿಸಿ 4ನೇ ವರ್ಷಕ್ಕೆ ಕಾಲಿಡಲಿದೆ. ಹೀಗಿದ್ದರೂ ಇಬ್ಬರ ನಡುವಿನ ತಿಕ್ಕಾಟ ಮಾತ್ರ ಶಾಂತವಾಗಿಲ್ಲ. ಇಬ್ಬರೂ ಹಾವು & ಮುಂಗಿಸಿ ರೀತಿ ತಿಕ್ಕಾಟ ನಡೆಸುತ್ತಿದ್ದು ರಷ್ಯಾ ಸೇನೆ ಉಕ್ರೇನ್‌ನ ತೈಲ ಘಟಕಗಳ ಮೇಲೆ ಭೀಕರ ದಾಳಿ ಮಾಡುತ್ತಿದೆ. ಮತ್ತೊಂದ್ಕಡೆ ಉಕ್ರೇನ್ ಆಹಾರ ಸಂಗ್ರಹ ಕೂಡ ರಷ್ಯಾ ದಾಳಿಯಲ್ಲಿ ನಾಶವಾಗಿ ಹೋಗುತ್ತಿದೆ ಎನ್ನುವ ಆರೋಪ ಇದೆ. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಉಕ್ರೇನ್‌ಗೆ ಹಿನ್ನಡೆ ಆಗ್ತಿದೆ ಎಂಬ ವಿಚಾರ ಯುರೋಪ್ ಒಕ್ಕೂಟಕ್ಕೂ ಭಯ ಹುಟ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+