ರಷ್ಯಾ ವಿರುದ್ಧ ಮುಗಿಬಿದ್ದ ಪಾಶ್ಚಿಮಾತ್ಯ ದೇಶಗಳು: ಕಾರಣ ತಿಳಿಯಿರಿ!

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಕೆಲವು ದಿನಗಳ ಹಿಂದಷ್ಟೇ ಉತ್ತರ ಕೊರಿಯಾಗೆ ಪ್ರವಾಸ ಕೈಗೊಂಡಿದ್ದರು. ಈ ವಿಚಾರ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳನ್ನ ರೊಚ್ಚಿಗೆಬ್ಬಿಸಿದೆ. ಅದರಲ್ಲೂ ಉತ್ತರ ಕೊರಿಯಾ & ಅಮೆರಿಕ ನಡುವೆ ನೇರ ತಿಕ್ಕಾಟವು ನಡೆಯುತ್ತಿರುವ ಸಮಯದಲ್ಲೇ, ಪಾಶ್ಚಿಮಾತ್ಯ ದೇಶಗಳ ವಿರೋಧಿ ರಷ್ಯಾ ಈಗ ದಿಢೀರ್ ಉತ್ತರ ಕೊರಿಯಾ ಜೊತೆ ವೆಪನ್ ಡೀಲ್ ಮಾಡಿಕೊಂಡಿದೆ ಎಂಬುದು ತೀವ್ರ ಆಕ್ರೋಶ ಸ್ಫೋಟಗೊಳ್ಳುವ ರೀತಿ ಮಾಡಿದೆ.

ಅದ್ಯಾವ ಘಳಿಗೆಯಲ್ಲಿ ಯುದ್ಧ ಶುರುವಾಗಿತ್ತೋ ಗೊತ್ತಿಲ್ಲ, ರಷ್ಯಾ & ಉಕ್ರೇನ್ ತಿಕ್ಕಾಟ ಜಗತ್ತಿನ ನೆಮ್ಮದಿ ಹಾಳಾಗುವಂತೆ ಮಾಡಿದೆ. ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುತ್ತಿದೆ. ರಷ್ಯಾ ಅಧ್ಯಕ್ಷ ಪುಟಿನ್, 2022 ಫೆಬ್ರವರಿ ತಿಂಗಳಲ್ಲಿ ಉಕ್ರೇನ್ ವಿರುದ್ಧ ಯುದ್ಧದ ಘೋಷಣೆ ಹೊರಡಿಸಿದ್ದರು. ಈ ಮೂಲಕ ಶತ್ರು ನಾಶಕ್ಕೆ ಪಣತೊಟ್ಟರು ರಷ್ಯಾ ಅಧ್ಯಕ್ಷ ಪುಟಿನ್ ಹೀಗೆ ನೋಡ ನೋಡುತ್ತಲೇ ಯುದ್ಧ ಕೈಮೀರುತ್ತಿದ್ದು, ಯುದ್ಧ ನಿಲ್ಲಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ. ಹೀಗಿದ್ದಾಗಲೇ ರಷ್ಯಾ ವಿರುದ್ಧ ಪಾಶ್ಚಿಮಾತ್ಯ ದೇಶಗಳು ಹೊಸ ಅಸ್ತ್ರ ಪ್ರಯೋಗ ಮಾಡಲು ಮುಂದಾಗಿವೆ.

Allegedly Russia Is Facing Problems After The Putin Visit To North Korea

ದಕ್ಷಿಣ ಕೊರಿಯಾ ಖಡಕ್ ವಾರ್ನಿಂಗ್!

ರಷ್ಯಾ & ಉಕ್ರೇನ್ ಯುದ್ಧದಲ್ಲಿ ಅಮೆರಿಕ ಪರೋಕ್ಷವಾಗಿ ಮಧ್ಯಪ್ರವೇಶ ಮಾಡುತ್ತಿದೆ. ಈ ವಿಚಾರ ಎರಡೂ ದೇಶಗಳ ನಡುವೆ ಕಿರಿಕ್ ಆಗುವಂತೆ ಮಾಡಿದೆ. ಹೀಗಿದ್ದಾಗಲೇ, ರಷ್ಯಾದ ಅಧ್ಯಕ್ಷ ಪುಟಿನ್ ಅಮೆರಿಕ ವಿರುದ್ಧ ಈಗ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಈ ಅಸ್ತ್ರದ ಭಾಗವಾಗಿ ಉತ್ತರ ಕೊರಿಯಾಗೆ ಭೇಟಿ ನೀಡಿದ್ದರು ಪುಟಿನ್. ಆದರೆ ಪುಟಿನ್ ಅವರು ಈ ರೀತಿ ಉತ್ತರ ಕೊರಿಯಾಗೆ ಭೇಟಿ ನೀಡಿದ ಕಾರಣಕ್ಕೆ ಇದೀಗ ದಕ್ಷಿಣ ಕೊರಿಯಾ ಖಡಕ್ ವಾರ್ನಿಂಗ್ ಕೊಟ್ಟಿದ್ದು, ರಷ್ಯಾಗೆ ಏನ್ ಹೇಳಿದೆ ಗೊತ್ತಾ?

ರಷ್ಯಾಗೆ ಸರ್ವಾಧಿಕಾರಿ ಸಹಾಯ?

ಉತ್ತರ ಕೊರಿಯಾ ಜೊತೆ ಹೊಸ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದನ್ನ ವಿರೋಧಿಸಲು ಈ ದೇಶ ಅಂದ್ರೆ ದಕ್ಷಿಣ ಕೊರಿಯಾ, ರಷ್ಯಾ ರಾಯಭಾರಿಗೆ ಸಮನ್ಸ್‌ ನೀಡಿದೆ. ಅಲ್ಲದೆ ಹೀಗೆ ನೀವು ಆಡಬೇಡಿ ಎಂಬ ವಾರ್ನಿಂಗ್ ಕೊಟ್ಟಿದೆ. ಉತ್ತರ ಕೊರಿಯಾ & ದಕ್ಷಿಣ ಕೊರಿಯಾ ಎರಡೂ ಶತ್ರು ದೇಶಗಳು. ಹೀಗಾಗಿ ಇಬ್ಬರ ನಡುವೆ ಮೊದಲಿನಿಂದ ಕೂಡ ಕಿತ್ತಾಟವೂ ಇದೆ.

ಹೀಗಿದ್ದಾಗಲೇ ರಷ್ಯಾ ನೇರವಾಗಿ ಉತ್ತರ ಕೊರಿಯಾ ಜೊತೆ ವೆಪನ್ಸ್ ಡೀಲ್ ಮಾಡಿಕೊಂಡ ವಿಚಾರ ಕಿಚ್ಚು ಹೊತ್ತಿಸಿದೆ. ಹೀಗಾಗಿ ದಕ್ಷಿಣ ಕೊರಿಯಾ ಈಗ ರ‍ಷ್ಯಾ ಬಳಿ ತನ್ನ ಕೋಪ ಹೊರಹಾಕಿದೆ. ಮುಂದಿನ ದಿನಗಳಲ್ಲಿ ಈ ಕಿಚ್ಚು ಇನ್ನಷ್ಟು ದೊಡ್ಡದಾಗುವ ಭಯವೂ ಆವರಿಸಿದೆ. ಆದರೆ ರಷ್ಯಾ ಈ ವಿಚಾರದಲ್ಲಿ ಜಾಣ ನಡೆ ಮುಂದಿಟ್ಟಿದ್ದು, ಈ ಕುರಿತು ಮಹತ್ವದ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+