ಪುಟಿನ್‌ಗೆ ಆನೆಬಲ ತುಂಬಿದ ಕಿಮ್, ಭಾರಿ ಪ್ರಮಾಣದಲ್ಲಿ ವೆಪನ್ಸ್ ಸಪ್ಲೈ?
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಒಳ್ಳೆ ಚಡ್ಡಿ ದೋಸ್ತ್‌ಗಳ ರೀತಿ, ಒಟ್ಟಾಗಿ ಅಮೆರಿಕ ವಿರುದ್ಧ ತಿರುಗಿ ನಿಂತಿದ್ದಾರೆ. ಹೀಗಾಗಿ, ಕಿಮ್ ಜಾಂಗ್ ಉನ್ ತನ್ನ ಆಪ್ತ ಮಿತ್ರನಿಗೆ ದೊಡ್ಡ ಉಡುಗೊರೆ ನೀಡುತ್ತಿದ್ದಾನೆ. ಇದನ್ನು ನೋಡಿ ಅಮೆರಿಕ ಮತ್ತೆ ರೊಚ್ಚಿಗೆದ್ದಿದೆ. ಅದರಲ್ಲೂ ಉಕ್ರೇನ್ & ರಷ್ಯಾ ಯುದ್ಧಕ್ಕೆ ಅಂತ್ಯ ಹಾಡುವ ಯತ್ನಕ್ಕೆ ಕಿಮ್ ಅಡ್ಡಿಯಾಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ರಷ್ಯಾ ವಿರುದ್ಧ ಅಮೆರಿಕ ಮತ್ತು ಅದರ ಮಿತ್ರ ದೇಶಗಳು ಹಲವು ನಿರ್ಬಂಧ ಹೇರಿವೆ. ಈ ಕಾರಣಕ್ಕೆ ರಷ್ಯಾಗೆ ದೊಡ್ಡ ಸಮಸ್ಯೆ ಎದುರಾಗಿದೆ. ಉಕ್ರೇನ್ ವಿರುದ್ಧ ಹೋರಾಡಲು ಕಷ್ಟ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿದ್ದಾಗಲೆ ಕಿಮ್ ಜಾಂಗ್ ಉನ್ ಎಂಬ, ಉತ್ತರ ಕೊರಿಯಾ ಸರ್ವಾಧಿಕಾರಿ ರಷ್ಯಾಗೆ ಬಲವಾಗಿ ನಿಂತು ಸಹಾಯ ಮಾಡುತ್ತಿದ್ದಾನೆ. ಅದರಲ್ಲೂ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರವನ್ನ ಇದೀಗ ಉತ್ತರ ಕೊರಿಯಾ ಸೇನೆ ರಷ್ಯಾಗೆ ಸಪ್ಲೈ ಮಾಡುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ರಷ್ಯಾಗೆ ಕಿಮ್ ಆನೆ ಬಲ!
ಹೌದು ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಶುರು ಮಾಡಿ ಬರೋಬ್ಬರಿ 2 ವರ್ಷವೇ ತುಂಬುತ್ತಿದೆ. ಹೀಗಿದ್ದರೂ ಯುದ್ಧ ನಿಲ್ಲುತ್ತಿಲ್ಲ. ಅದಕ್ಕೆಲ್ಲಾ ಪ್ರಮುಖ ಕಾರಣ ಉತ್ತರ ಕೊರಿಯಾ ಎಂಬ ಗಂಭೀರ ಆರೋಪವನ್ನ ಮಾಡುತ್ತಿವೆ ಅಮೆರಿಕ & ಮಿತ್ರ ದೇಶಗಳು. ಯಾಕಂದ್ರೆ ಈಗಾಗಲೇ ಉತ್ತರ ಕೊರಿಯಾ ಸರ್ವಾಧಿಕಾರಿ ಸಾವಿರಾರು ಕಂಟೇನರ್ ಮೂಲಕ ರಷ್ಯಾಗೆ ಶಸ್ತ್ರಾಸ್ತ್ರವನ್ನ ನೀಡಿದ್ದಾನೆ ಎಂದು ಆರೋಪ ಮಾಡಲಾಗಿದೆ. ಇದಕ್ಕೆ ಸಾಕ್ಷಿಯನ್ನೂ ಅಮೆರಿಕ ನೀಡಿತ್ತು. ಹೀಗಾಗಿ ಅಲರ್ಟ್ ಆಗಿರುವ ಯುರೋಪ್ ದೇಶಗಳು ಹಾಗೂ ಅಮೆರಿಕ ಕಿಮ್ ವಿರುದ್ಧ ಈಗ ತಿರುಬಿದ್ದಿವೆ.
ಉಗ್ರರಿಗೂ ವೆಪನ್ಸ್ ಕೊಡ್ತಿದ್ದಾನಾ?
ರಷ್ಯಾ ಜೊತೆ ಹಮಾಸ್ ಉಗ್ರರಿಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಶಸ್ತ್ರಾಸ್ತ್ರ ನೀಡುತ್ತಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ದಕ್ಷಿಣ ಕೊರಿಯಾ ಈಗ ಸ್ಫೋಟಕ ಆರೋಪ ಮಾಡಿದೆ. ಒಂದು ಕಡೆ ರಷ್ಯಾಗೆ ಉತ್ತರ ಕೊರಿಯಾ ಗನ್, ಕ್ಷಿಪಣಿಗಳ ಜೊತೆಗೆ ರಾಕೆಟ್ ನೀಡುತ್ತಿರುವ ಸಮಯದಲ್ಲೇ ಹಮಾಸ್ ಉಗ್ರರಿಗೂ ಕಿಮ್ ಸಹಾಯವನ್ನು ಮಾಡುತ್ತಿದ್ದಾನೆ ಎನ್ನುವುದು ಭಯ ಹುಟ್ಟಿಸಿದೆ.

ದಕ್ಷಿಣ ಕೊರಿಯಾ ಆರೋಪ ಏನು?
ಇದೀಗ ದಕ್ಷಿಣ ಕೊರಿಯಾ ಗುಪ್ತಚರ ಇಲಾಖೆ ಮಾಡಿರುವ ಆರೋಪದ ಪ್ರಕಾರ, ಹಮಾಸ್ ಉಗ್ರರು ಇಸ್ರೇಲ್ ಸೇನೆ ವಿರುದ್ಧ ಹೋರಾಡಲು ಉತ್ತರ ಕೊರಿಯಾದಲ್ಲಿ ತಯಾರಿಸಿದ ಅಸ್ತ್ರ ಅಂದ್ರೆ ವೆಪನ್ಸ್ ಬಳಸುತ್ತಿದ್ದಾರಂತೆ. ಇದಕ್ಕೆ ಸಾಕ್ಷಿ ಎನ್ನುವಂತೆ ಉತ್ತರ ಕೊರಿಯಾದಲ್ಲಿಯೇ ತಯಾರಿಸಿದ ವಿವಿಧ ಶಸ್ತ್ರಾಸ್ತ್ರಗಳ ಅವಶೇಷ ಪತ್ತೆಯಾಗಿದೆ ಎನ್ನಲಾಗಿದೆ. ಹೀಗಾಗಿ ಇಸ್ರೇಲ್ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸಮಯದಲ್ಲೇ, ದಕ್ಷಿಣ ಕೊರಿಯಾ ಹೊಸ ಬಾಂಬ್ ಸಿಡಿಸಿದೆ. ಕಿಮ್ ಜಾಂಗ್ ಉನ್ ವಿರುದ್ಧ ಗಂಭೀರ ಆರೋಪ ಮಾಡಿದೆ.
ಮತ್ತೊಂದು ಯುದ್ಧ ಮಾಡಿಸುತ್ತಾನೆ!
ಜಗತ್ತಿನಲ್ಲಿ ಈಗ ಭಯದ ವಾತಾವರಣ ನಿರ್ಮಾಣ ಆಗಲು ಕಾರಣವೇ ರಷ್ಯಾ vs ಉಕ್ರೇನ್ ವಾರ್, ಇಸ್ರೇಲ್ vs ಹಮಾಸ್ ಯುದ್ಧ. ಈ ಎರಡೂ ಯುದ್ಧಗಳು, ಈಗ ಜಗತ್ತಿನಾದ್ಯಂತ ಭಯ ಹುಟ್ಟುಹಾಕಿವೆ. ಹೀಗಿದ್ದಾಗ ತೆಪ್ಪಗೆ ಕೂತುಕೊಳ್ಳದ ಉತ್ತರ ಕೊರಿಯಾ ಸರ್ವಾಧಿಕಾರಿ, ಉಗ್ರರ ಜೊತೆಗೆ ಕೈಜೋಡಿಸಿದ್ದಾನೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಅದರಲ್ಲೂ ಇಸ್ರೇಲ್ ವಿರುದ್ಧ ಡೆಡ್ಲಿ ಅಟ್ಯಾಕ್ ನಡೆಸುತ್ತಿರುವ ಹಮಾಸ್ ಉಗ್ರರಿಗೆ ಕಿಮ್ ಜಾಂಗ್ ಉನ್ ಗ್ಯಾಂಗ್ ವೆಪನ್ಸ್ ಅಂದ್ರೆ ಶಸ್ತ್ರಾಸ್ತ್ರ ಸಪ್ಲೈ ಮಾಡುತ್ತಿದೆಯಂತೆ. ಹಾಗೇ ರಷ್ಯಾಗೆ ಕೂಡ ಈಗ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ನೀಡುತ್ತಿರುವುದು ಆತಂಕ ಹೆಚ್ಚಿಸಿದೆ.












Click it and Unblock the Notifications