ಇಸ್ರೇಲ್ ಸೇನೆಯಿಂದ ಮತ್ತೊಂದು ಆಘಾತ: ಲೆಬನಾನ್ ಬಳಿಕ ಸಿರಿಯಾ ಮೇಲೂ ಅಟ್ಯಾಕ್?
ಇಸ್ರೇಲ್ ಸುಮ್ಮನೆ ಕೂರುತ್ತಿಲ್ಲ, ಹೀಗಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಈಗ ಅಶಾಂತಿ ಮೂಡಿದ್ದು ಇದಕ್ಕೆಲ್ಲಾ ಇಸ್ರೇಲ್ ಕಾರಣ ಅಂತಾ ಆರೋಪ ಮಾಡಲಾಗುತ್ತಿದೆ. ಪರಿಸ್ಥಿತಿ ಸೂಕ್ಷ್ಮವಾಗಿರುವ ಸಮಯದಲ್ಲೇ ಇಸ್ರೇಲ್ ಸೇನೆಯಿಂದ ಮತ್ತೊಂದು ಆಘಾತವು ಸಿಕ್ಕಿದ್ದು, ಲೆಬನಾನ್ ವಿರುದ್ಧ ಯುದ್ಧ ಆರಂಭಿಸಿದ ನಂತರ ಇದೀಗ ಸಿರಿಯಾ ಮೇಲೂ ದಾಳಿ ಶುರು ಮಾಡಿದೆ ಇಸ್ರೇಲ್ ಸೇನೆ. ಹಾಗಾದ್ರೆ ಈ ತಿಕ್ಕಾಟದಿಂದ ಮುಂದೆ ಆಗುವ ಕೆಡಕುಗಳು ಏನು? ಮತ್ತೊಂದು ಮಹಾಯುದ್ಧಕ್ಕೆ ಇಲ್ಲಿಂದಲೇ ಆರಂಭ ಸಿಗಲಿದೆಯಾ? ಬನ್ನಿ ತಿಳಿಯೋಣ.
ಅಂದಹಾಗೆ ಇಸ್ರೇಲ್ ಇದೀಗ ನೇರವಾಗಿ ಸಿರಿಯಾ ಮೇಲೆ ದಾಳಿ ಆರಂಭ ಮಾಡಿದೆ ಎನ್ನುವ ಆರೋಪ ಕೇಳಿಬಂದಿದೆ. ಆ ಪ್ರಕಾರ, ಸಿರಿಯಾದ ಕಾರ್ಮಿಕರು ವಾಸ ಇದ್ದ ಕಟ್ಟಡದ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದೆ ಎಂದು ಆರೋಪ ಮಾಡಲಾಗಿತ್ತು. ಈ ದಾಳಿಯ ಹಿನ್ನೆಲೆ 23 ಜನರು ಬಲಿಯಾಗಿದ್ದಾರೆ. ಇಸ್ರೇಲ್ ಭೀಕರ ವಾಯು ದಾಳಿ ನಡೆಸಿರುವ ಕುರಿತು ಇದೀಗ ಲೆಬನಾನ್‌ನ ಸರ್ಕಾರಿ ಮಾಧ್ಯಮ ವರದಿ ಪ್ರಕಟಿಸಿದ್ದು ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಹಾಗೇ ಈಗ ದಾಳಿ ನಡೆದಿರುವ ಪ್ರದೇಶ ಸಿರಿಯಾ & ಲೆಬನಾನ್ ಗಡಿ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಕಟ್ಟಡಗಳ ಅವಶೇಷವನ್ನು ಅಗೆದು ಮೃತದೇಹ ಹೊರಗೆ ತೆಗೆಯಲಾಗಿದೆ.

ಸಿರಿಯಾದಿಂದ ಕೌಂಟರ್ ಅಟ್ಯಾಕ್?
ಇಸ್ರೇಲ್ ವಿರುದ್ಧ ಈಗಾಗಲೇ ಲೆಬನಾನ್ ಕೌಂಟರ್ ಅಟ್ಯಾಕ್ ಅಂದ್ರೆ ಮರು ದಾಳಿ ನಡೆಸ್ತಿದೆ. ಹೀಗಿದ್ದಾಗ ಸಿರಿಯಾ ಕೂಡ ಇದೇ ರೀತಿ ಇಸ್ರೇಲ್ ವಿರುದ್ಧ ದಾಳಿ ನಡೆಸುತ್ತಾ? ಎಂಬ ಚಿಂತೆ ಶುರುವಾಗಿದೆ. ಯಾಕಂದ್ರೆ ಗಾಜಾ ಪಟ್ಟಿ ಮೇಲೆ ಕೂಡ ಇಸ್ರೇಲ್ ಯುದ್ಧ ನಡೆಸುತ್ತಿದ್ದು, ಈ ಸಂದರ್ಭದಲ್ಲೇ ಲೆಬನಾನ್ & ಸಿರಿಯಾ ಕೂಡ ಇಸ್ರೇಲ್ ವಿರುದ್ಧ ತಿರುಗಿಬಿದ್ದರೆ ಪರಿಸ್ಥಿತಿಯು ಇನ್ನಷ್ಟು ಕಠಿಣವಾಗುವ ಭಯ ಆರಿಸಿದೆ. ಹೀಗಾಗಿ ಮಧ್ಯಪ್ರಾಚ್ಯ ಇದೀಗ ಬೂದಿ ಮುಚ್ಚಿದ ಕೆಂಡವಾಗಿದೆ.












Click it and Unblock the Notifications