Israel: ಹಿಜ್ಬುಲ್ಲಾಗೆ ಮತ್ತೊಬ್ಬ ಮುಖ್ಯಸ್ಥ, ಹತ್ಯೆಗೆ ಇಸ್ರೇಲ್ ನಿರಂತರ ಪ್ರಯತ್ನ!
ಇಸ್ರೇಲ್ ಆಡುತ್ತಿರುವ ರೀತಿ ನೋಡಿದರೆ ಯಾವುದೋ ವಿನಾಶಕ್ಕೆ ಇದೀಗ ಮುನ್ನುಡಿಯನ್ನು ಬರೆದಂತೆ ಕಾಣುತ್ತಿದೆ. ಇಸ್ರೇಲ್ ಮನಸ್ಸಿಗೆ ಬಂದಂತೆ ಅಟ್ಯಾಕ್ ನಡೆಸುತ್ತಿದ್ದು, ಲೆಬನಾನ್ & ಇರಾನ್ ಸೇರಿದಂತೆ ಗಾಜಾ ಪಟ್ಟಿ & ಸಿರಿಯಾ ಮೇಲೂ ಭೀಕರ ದಾಳಿ ನಡೆಯುತ್ತಿದೆ. ಹೀಗೆ ನಡೆಯುತ್ತಿರುವ ದಾಳಿಯ ಕಾರಣಕ್ಕೆ ಇದೀಗ ಇಡೀ ಮಧ್ಯಪ್ರಾಚ್ಯ ಸ್ಮಶಾನದಂತೆ ಕಾಣುತ್ತಿದೆ. ಇಂತಹ ಸಮಯದಲ್ಲೇ ಹಿಜ್ಬುಲ್ಲಾಗೆ ಮತ್ತೊಬ್ಬ ಮುಖ್ಯಸ್ಥನ ಆಯ್ಕೆಯಾಗಿದ್ದು, ಇಸ್ರೇಲ್ ಸೇನೆ ಹೊಸ ಮುಖ್ಯಸ್ಥನ ಹೆಣ ಬೀಳಿಸಲು ರೊಚ್ಚಿಗೆದ್ದಿದೆಯಂತೆ!
ಇಸ್ರೇಲ್ & ಇರಾನ್, ಲೆಬನಾನ್, ಸಿರಿಯಾ ನಡುವೆ ನಡೆಯುತ್ತಿರುವ ಕಿತ್ತಾಟ ಅಲ್ಲೋಲ & ಕಲ್ಲೋಲ ಸೃಷ್ಟಿ ಮಾಡಿದೆ. ಈ ಫೈಟಿಂಗ್ ಮುಂದೆ ಮಹಾಯುದ್ಧದ ಭಯ ಹುಟ್ಟು ಹಾಕಿದೆ. ಅಂದಹಾಗೆ ಇಸ್ರೇಲ್ & ಇರಾನ್ ಸಂಘರ್ಷ ಕೊತ ಕೊತ ಕುದಿಯುತ್ತಿದೆ. ಅತ್ತ ಇಸ್ರೇಲ್ ಕೂಡ ನಾವು ದಾಳಿ ಮಾಡ್ತೀವಿ, ನಾವು ರಿವೇಂಜ್ ತೆಗೆದುಕೊಳ್ತೀವಿ ಅಂತಿದೆ. ಇತ್ತ ಇರಾನ್ ಕೂಡ ನಾವು ಕೂಡ ಮತ್ತೆ ದಾಳಿ ಮಾಡ್ತೀವಿ ಅಂತಾ ಹೇಳ್ತಿದೆ. ಹೀಗೆ ಇಬ್ಬರ ನಡುವೆ ನಡೆಯುತ್ತಿರುವ ಘರ್ಷಣೆ ಜಾಗತಿಕ ಆರ್ಥಿಕತೆ ಬುಡಕ್ಕೆ ಬಾಂಬ್ ಇಡುತ್ತಿದೆ. ಇದು ಸಾಲದು ಎನ್ನುವಂತೆ ಇದೀಗ ಹಿಜ್ಬುಲ್ಲಾ ಬಂಡುಕೋರ ಸಂಘಟನೆ ಮುಖ್ಯಸ್ಥನಾಗಿದ್ದ ಹಸನ್ ನಸ್ರಲ್ಲಾ ಸಹೋದರ ಸಂಬಂಧಿ ಮತ್ತು ಆತನ ಉತ್ತರಾಧಿಕಾರಿ ಹತ್ಯೆಗೆ ಇಸ್ರೇಲ್ ಬಲೆ ಬೀಸಿದೆಯಂತೆ.

ಹಸನ್ ನಸ್ರಲ್ಲಾ ಜಾಗಕ್ಕೆ ಮತ್ತೊಬ್ಬ?
ಹೌದು, ಹಿಜ್ಬುಲ್ಲಾ ಬಂಡುಕೋರ ಸಂಘಟನೆ ಮುಖ್ಯಸ್ಥನಾಗಿದ್ದ ಹಸನ್ ನಸ್ರಲ್ಲಾ ಹತ್ಯೆಯನ್ನು ಮಾಡಿ ಇನ್ನೂ ಕೆಲವೇ ದಿನಗಳು ಕಳೆದಿವೆ ಅಷ್ಟೇ. ಆಗಲೇ ಮತ್ತೊಮ್ಮೆ ಇಸ್ರೇಲ್ ಭರ್ಜರಿ & ಘೋರ ದಾಳಿಗೆ ಮುಂದೆ ನುಗ್ಗುತ್ತಿದೆಯಾ? ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಇಸ್ರೇಲ್ ಸೇನೆ ದಾಳಿಗೆ ಬಲಿಯಾದ ಹಿಜ್ಬುಲ್ಲಾ ಬಂಡುಕೋರ ಸಂಘಟನೆ ಮುಖ್ಯಸ್ಥನಾಗಿದ್ದ ಹಸನ್ ನಸ್ರಲ್ಲಾನ ಜಾಗಕ್ಕೆ ಇದೀಗ ಅವನ ಸಂಬಂಧಿ ಬಂದು ಕೂತಿದ್ದಾನೆ. ಹಶೀಂ ಸೈಫುದ್ದೀನ್ ಇದೀಗ ಅದೇ ಸಂಘಟನೆಯ ಮುಖ್ಯಸ್ಥನಾಗಿದ್ದು, ಅವನ ಹತ್ಯೆಗೂ ಇದೀಗ ಇಸ್ರೇಲ್ ದಾಳಿ ಆರಂಭಿಸಿದ್ದು ಮತ್ತಷ್ಟು ಆತಂಕ ಮೂಡಿಸಿದೆ ಎನ್ನಲಾಗಿದೆ. ಲೆಬನಾನ್ ರಾಜಧಾನಿ ಬೈರೂತ್ ಸಮೀಪದಲ್ಲಿ ಬಂಕರ್ ಒಂದನ್ನ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ.
15 ಮೈಲಿ ದೂರಕ್ಕೆ ಸೌಂಡ್?
ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ಹೊಸ ಮುಖ್ಯಸ್ಥನ ಜೀವ ತೆಗೆಯಲು ಇಸ್ರೇಲ್ ಈಗ ಅತ್ಯಂತ ವಿನಾಶಕಾರಿ ಅಸ್ತ್ರಗಳನ್ನೇ ಬಳಸುತ್ತಿರುವ ಆರೋಪ ಕೇಳಿಬಂದಿದೆ. ಇದೀಗ ಹಶೀಂ ಸೈಫುದ್ದೀನ್ ಮೇಲೆ ದಾಳಿ ಮಾಡಲು ಬಳಸಿದ ಬಾಂಬ್‌ನ ಶಬ್ಧ 15 ಮೈಲಿ ದೂರಕ್ಕೆ ಕೂಡ ಕೇಳಿಸಿದೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಇದೀಗ ಲೆಬನಾನ್ ರಾಜಧಾನಿ ಥೇಟ್ ಸ್ಮಶಾನದ ರೀತಿ ಆಗಿ ಹೋಗಿದೆ. ಇದು ಲೆಬನಾನ್ ಪ್ರಜೆಗಳಲ್ಲಿ ಮತ್ತಷ್ಟು ಭಯ ಮೂಡಿಸಿ, ಊರು ಬಿಟ್ಟು ಓಡಿ ಹೋಗುವಂತೆ ಮಾಡುತ್ತಿದೆ.












Click it and Unblock the Notifications