ಒಂದೇ ಬಾಂಬ್.. 35 ಮಂದಿಯ ಜೀವ ಹಾರಿಹೋಯ್ತು..

ಇಸ್ರೇಲ್ & ಹಮಾಸ್ ಯುದ್ಧದಲ್ಲಿ ಸಾಮಾನ್ಯ ಜನರ ಪ್ರಾಣಪಕ್ಷಿ ಹಾರಿಹೋಗುವುದು ಮತ್ತೆ ಮುಂದುವರಿದಿದೆ. ಕಳೆದ ಕೆಲ ದಿನಗಳಿಂದ ಇಬ್ಬರ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಅದ್ರಲ್ಲೂ ಹಮಾಸ್ ಸಂಘಟನೆ ಪೂರ್ತಿ ನಾಶ ಆಗುವವರೆಗೂ ನಾವು ಯುದ್ಧ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಸೇನೆಯು ಹೇಳುತ್ತಿದೆ. ಈ ಸಮಯದಲ್ಲೇ ಇಸ್ರೇಲ್ ಸೇನೆ ಹಾಕಿದ ಬಾಂಬ್ ಈಗ ನಿರಾಶ್ರಿತರ ಶಿಬಿರದ ಮೇಲೆ ಬಿದ್ದುಬಿಟ್ಟಿದೆ.

ಅಂದಹಾಗೆ ಇಸ್ರೇಲ್ ಸೇನೆ & ಹಮಾಸ್ ನಡುವೆ ನಡೆಯುತ್ತಿರುವ ತಿಕ್ಕಾಟದಲ್ಲಿ ಈಗ ಗಾಜಾ ಪಟ್ಟಿ ಪ್ರದೇಶ ಅಕ್ಷಶಃ ನರಕವಾಗಿ ಬದಲಾಗಿ ಹೋಗಿದೆ. ಅದರಲ್ಲೂ ಗಾಜಾ ಪಟ್ಟಿಯ ದಕ್ಷಿಣ ಪ್ರದೇಶ ರಫಾದ ನಿರಾಶ್ರಿತರ ಟೆಂಟ್‌ಗಳ ಮೇಲೆ ಇಸ್ರೇಲ್ ಸೇನೆ ವಾಯುದಾಳಿಯ ನಡೆಸಿದ್ದು, 35 ಜನ ಮೃತಪಟ್ಟಿದ್ದಾರೆ ಅಂತ ಪ್ಯಾಲೆಸ್ಟೀನ್‌ ಆರೋಗ್ಯ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಈ ಮೂಲಕ ಇಬ್ಬರ ನಡುವಿನ ತಿಕ್ಕಾಟ ಮತ್ತೊಂದು ಹಂತಕ್ಕೆ ಹೋಗಿದ್ದು, ಸಾಲು ಸಾಲು ಸಾವು ವರದಿಯಾಗಿವೆ. ಹಾಗೇ ಜೀವ ಬಿಡುತ್ತಿರುವ ನಿರಾಶ್ರಿತರಲ್ಲಿ ಮಕ್ಕಳು ಹಾಗೂ ಮಹಿಳೆಯರೆ ಹೆಚ್ಚಾಗಿದ್ದಾರೆ.

Allegedly 35 Has Been Killed In Israel Attack At Gaza

ಯುದ್ಧ ನಿಲ್ಲಿಸಲು ಹೇಳಿತ್ತು ಕೋರ್ಟ್

ಗಾಜಾ ಪಟ್ಟಿ ಪ್ರದೇಶದ ರಫಾ ಭಾಗದಲ್ಲಿ ಕಳೆದ 3 ವಾರದಿಂದ ತಿಕ್ಕಾಟ ತೀವ್ರವಾಗಿದೆ ಈ ಹಿನ್ನೆಲೆ ಇಸ್ರೇಲ್ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಯುದ್ಧವನ್ನ ತಕ್ಷಣ ನಿಲ್ಲಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಪ್ಯಾಲೆಸ್ತೀನ್‌ನ ಪ್ರಜೆಗಳನ್ನ ಇಸ್ರೇಲ್ ಸೇನೆ ಬಲವಂತಾಗಿ ಸ್ಥಳಾಂತರ ಮಾಡುತ್ತಿದೆ, ಹೀಗಾಗಿ ಲಕ್ಷಾಂತರ ಜನಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇಂಟರ್‌ನ್ಯಾಷನಲ್ ಕೋರ್ಟ್ ಇಸ್ರೇಲ್‌ಗೆ ಆಘಾತ ನೀಡಿದ್ದು, ಅಲ್ಲಿ ನಡೆಯುತ್ತಿರುವ ಕಾರ್ಚಾರಣೆ ನಿಲ್ಲಿಸಿ ಎಂದಿತ್ತು ಅಂತಾರಾಷ್ಟ್ರೀಯ ನ್ಯಾಯಾಲಯ.

ಟೆಂಟ್ ಒಳಗೆ ಸುಟ್ಟು ಹೋದ ಜೀವಗಳು?

ಆದರೆ ಹೀಗೆ ರಫಾ ಪ್ರದೇಶದಲ್ಲಿ ಯುದ್ಧ ನಿಲ್ಲಿಸಿ ಎಂದು ಇಸ್ರೇಲ್ ಸೇನೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ ನೀಡಿದ 2 ದಿನಗಳಲ್ಲಿ ಇಸ್ರೇಲ್ ಭೀಕರ ದಾಳಿ ನಡೆಸಿದೆ. ಹೀಗಾಗಿ, ಘಟನೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗಿದೆ. ಇದೀಗ ಇಸ್ರೇಲ್ ಸೇನೆ ನಿರಾಶ್ರಿತ ಶಿಬಿರದ ಮೇಲೆ ದಾಳಿ ನಡೆಸಿದ ನಂತರ, ಹೊತ್ತಿ ಉರಿಯುತ್ತಿರುವ ಅವಶೇಷಗಳ ಅಡಿಯಲ್ಲೂ ಜನ ಸಿಲುಕಿ ನರಳುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಇಸ್ರೇಲ್ ಸೇನೆಯಿಂದ ಮಹಾ ಎಡವಟ್ಟು?

ಒಟ್ನಲ್ಲಿ ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಕಾಳಗ ವಿನಾಶಕಾರಿ ಹಂತಕ್ಕೆ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ಹಿನ್ನೆಲೆ, ಇಸ್ರೇಲ್‌ನ ವಿರುದ್ಧ ಭಾರಿ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಈ ನಡುವೆ ಅಂತಾರಾಷ್ಟ್ರೀಯ ನ್ಯಾಯಾಲಯ ಯುದ್ಧದ ವಿಚಾರದಲ್ಲಿ ಎಂಟ್ರಿ ಕೊಟ್ಟಿದ್ದು ಒಂದಷ್ಟು ಆಶಾಭಾವ ಸೃಷ್ಟಿ ಮಾಡಿತ್ತು. ಆದರೆ ಈಗ ನೋಡಿದರೆ ದೊಡ್ಡದಾದ ಎಡವಟ್ಟು ಮಾಡಿದೆ ಇಸ್ರೇಲ್ ಸೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+