ಕಟ್ಟಡಕ್ಕೆ ಡಿಕ್ಕಿ ಹೊಡೆದ ಏರ್ ಇಂಡಿಯಾ: 179 ಪ್ರಯಾಣಿಕರು ಬಚಾವ್
ಸ್ಟಾಕ್‌ಹೋಮ್, ನವೆಂಬರ್ 29: ಏರ್ ಇಂಡಿಯಾ ವಿಮಾನ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದಿದ್ದು, ಸಂಭವಿಸಬಹುದಾಗಿದ್ದ ಭಾರಿ ಅನಾಹುತ ಅದೃಷ್ಟವಶಾತ್ ತಪ್ಪಿಹೋಗಿದೆ.
179 ಪ್ರಯಾಣಿಕರಿದ್ದ ವಿಮಾನ, ಸ್ವೀಡನ್ ರಾಜಧಾನಿ ಸ್ಟಾಕ್‌ಹೋಮ್‌ನ ಅರ್ಲಾಂಡಾ ವಿಮಾನ ನಿಲ್ದಾಣದಲ್ಲಿ ಬುಧವಾರ ಅವಘಡಕ್ಕೆ ಒಳಗಾಗಿದೆ. ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನದ ಹೊರಭಾಗದ ರೆಕ್ಕೆ ಗೇಟ್‌ಗೆ ಬಡಿದು ಈ ಅಪಘಾತ ಸಂಭವಿಸಿದೆ. ನಿಲ್ದಾಣ ಪ್ರವೇಶಿಸಿದ ಬಳಿಕ ಪ್ರಯಾಣಿಕರನ್ನು ಸಂಚಾರಿ ಮೆಟ್ಟಿಲಿನ ಸಹಾಯದಿಂದ ಸುರಕ್ಷಿತವಾಗಿ ಕೆಳಕ್ಕೆ ಇಳಿಸಲಾಯಿತು.

ಬುಧವಾರ ಸಂಜೆ 5.45ರ ವೇಳೆಗೆ ಅಂತಾರಾಷ್ಟ್ರೀಯ ವಿಮಾನಗಳ ಮುಖ್ಯ ನಿಲ್ದಾಣವಾದ ಐದನೇ ನಿಲ್ದಾಣದಿಂದ 50 ಮೀಟರ್ ದೂರದಲ್ಲಿ ಈ ಅವಘಡ ನಡೆದಿದ್ದು, ಇದಕ್ಕೆ ಕಾರಣ ಏನು ಎಂಬುದು ಇನ್ನೂ ದೃಢಪಟ್ಟಿಲ್ಲ.
ಬೋಯಿಂಗ್ ವಿಮಾನವನ್ನು ಎನ್‌ವೇನಲ್ಲಿ ನಿಲ್ಲಿಸಲಾಗಿದ್ದು, ಅದರ ಎಡ ರೆಕ್ಕೆಯ ತುದಿ ಒಂದು ಕಟ್ಟಡದ ಒಳಗೆ ಸಿಲುಕಿಕೊಂಡಿದೆ.
ಮೂಲಗಳ ಪ್ರಕಾರ ಈ ವಿಮಾನ ದೆಹಲಿಯಿಂದ ಹೊರಟಿತ್ತು.












Click it and Unblock the Notifications