ಕೊರೊನಾ ವರದಿ ವೇಳೆ ನಾಪತ್ತೆಯಾಗಿದ್ದ ವುಹಾನ್ ಪತ್ರಕರ್ತ ಪತ್ತೆ
ಬೀಜಿಂಗ್, ಏಪ್ರಿಲ್ 22: ಕೊರೊನಾ ವರದಿಗೆ ತೆರಳಿ ನಾಪತ್ತೆಯಾಗಿದ್ದ ಪತ್ರಕರ್ತ ಎರಡು ತಿಂಗಳ ಬಳಿಕ ಪತ್ತೆಯಾಗಿದ್ದಾರೆ.
ಚೀನಾದ ವುಹಾನ್ ನಗರದಲ್ಲಿ ಕೊರೊನಾ ತೀವ್ರವಾಗಿದ್ದ ಸಂದರ್ಭದಲ್ಲಿ ವರದಿಗೆಂದು ತೆರಳಿದ್ದ ಪತ್ರಕರ್ತರೊಬ್ಬರು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಬಳಿಕ ನಾಪತ್ತೆಯಾಗಿದ್ದರು.
ಇದೀಗ ಪತ್ತೆಯಾಗಿದ್ದು, ವರದಿಗೆಂದು ಹೋದಾಗ ಪೊಲೀಸರು ಬಂಧಿಸಿ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಕಳುಹಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ. ಲೀ ಜೆಹು ಸೇರಿ ಮೂವರು ಪತ್ರಕರ್ತರು ಕಾಣೆಯಾಗಿದ್ದರು.
ನಾನು ಸುಮ್ಮನಿರುವುದಿಲ್ಲ, ನನ್ನ ಕಣ್ಣು, ಕಿವಿಯನ್ನು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇದೆಲ್ಲಾ ಮಾಡುತ್ತಿದ್ದೀನಿ ಎಂದರೆ ನನಗೆ ಒಳ್ಳೆಯ ಬದುಕಿಲ್ಲ, ಹೆಂಡತಿ ಮಕ್ಕಳಿಲ್ಲ ಎಂದು ಅರ್ಥವಲ್ಲ. ನನ್ನನ್ನು ನೋಡಿ ಯುವ ಪೀಳಿಕೆಯು ಕೂಡ ಸಾಮಾಜಿಕ ಕಾರ್ಯಗಳಲ್ಲಿ ಮುಂದೆ ಬರಲಿ ಎನ್ನುವುದು ನನ್ನ ಆಶಯ ಎಂದು ಲೀ ಹೇಳಿದ್ದಾರೆ.
ವುಹಾನ್ ನಗರದಲ್ಲಿನ ಪರಿಸ್ಥಿತಿ ಬಗ್ಗೆ ಸಾಲು ಸಾಲು ವರದಿಗಳನ್ನು ಮಾಡಿದ ಪತ್ರಕರ್ತ ಲೀ ಜೆಹು ಸಾಂಕ್ರಾಮಿಕರ ರೋಗಶಾಸ್ತ್ರಜ್ಞರ ಇನ್ಸ್ ಟಿಟ್ಯೂಟ್ ಗೆ ಒಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದರಿಂದ ಚೀನಾ ಗುಪ್ತಚರ ಇಲಾಖೆ ಪೊಲೀಸರ ಕೆಂಗಣ್ಣಿಗೆ ಲೀ ಜೆಹು ಗುರಿಯಾದರಾ ಎಂಬ ಶಂಕೆಯು ವ್ಯಕ್ತವಾಗಿತ್ತು.
ಫೆಬ್ರವರಿ 26ರ ಬಳಿಕ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ, ಚೀನಾದ ಪ್ರಸಿದ್ಧ ಯುವ ಪತ್ರಕರ್ತರಲ್ಲಿ ಒಬ್ಬರಾದ 25 ವರ್ಷದ ಲೀ ಜೆಹು ಕೂಡಾ ಫೆಬ್ರವರಿ.26ರಿಂದ ಇಲ್ಲಿಯವರೆಗೂ ನಾಪತ್ತೆಯಾಗಿದ್ದಾರೆ.

ವುಹಾನ್‌ನಗರದಲ್ಲಿ ವರದಿಗೆಂದು ತೆರಳಿದ್ದರು
ಚೀನಾದಲ್ಲಿ ಇರುವ ಸಿಸಿಟಿವಿ ಸುದ್ದಿ ವಾಹಿನಿಯ ಪತ್ರಕರ್ತರಾಗಿದ್ದ ಲೀ ಜೆಹು, ವುಹಾನ್ ನಗರದಲ್ಲಿ ಸ್ವತಂತ್ರ್ಯ ವರದಿ ಮಾಡುವುದಕ್ಕಾಗಿ ತೆರಳಿದ್ದರು. ನಾಪತ್ತೆಯಾಗುವ ಮೊದಲು ನಗರದಲ್ಲಿ ಕೊರೊನಾ ವೈರಸ್ ಸೋಂಕಿತರನ್ನು ಹೇಗೆಲ್ಲ ನಡೆಸಿಕೊಳ್ಳಲಾಗುತ್ತದೆ. ಮೃತರ ಅಂತ್ಯ ಸಂಸ್ಕಾರದ ಪ್ರಕ್ರಿಯೆಗಳು ಹೇಗೆ ನಡೆಸುತ್ತಿವೆ ಎಂಬುದರ ಬಗ್ಗೆ ವರದಿ ಮಾಡಿದ್ದರು.

ಚೀನೀ ಪತ್ರಕರ್ತ ಚೆನ್ ಕ್ಯುಶಿ ಕೂಡ ಕಣ್ಮರೆಯಾಗಿದ್ದರು
ಕೊರೊನಾ ವೈರಸ್ ಪೀಡಿತ ಚೀನಾದ ಹುಬೈ ಪ್ರಾಂತ್ಯದಲ್ಲಿ ವರದಿ ಮಾಡುತ್ತಿದ್ದ ಚೀನೀ ಪತ್ರಕರ್ತ ಚೆನ್ ಕ್ಯುಶಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದರು.ಚೀನಾದಲ್ಲಿ ಕೊರೊನಾ ವೈರಸ್ ಸ್ಫೋಟಗೊಂಡ ಡಿಸೆಂಬರ್ 31ರಿಂದಲೂ ಸತತವಾಗಿ ಈ ಕುರಿತಂತೆ ಹುಬೈ ಪ್ರಾಂತ್ಯದಿಂದ ವರದಿ ಮಾಡುತ್ತಿದ್ದ ಪತ್ರಕರ್ತ ಚೆನ್ ಕ್ಯುಶಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ.

ನೇರ ವರದಿಗೆ ತೆರಳಿದ್ದಾಗ ನಾಪತ್ತೆ
ಚೆನ್ ಕ್ಯುಶಿ ಮತ್ತು ಫಾಂಗ್ ಬಿನ್ ಸ್ವತಂತ್ರ್ಯ ಪತ್ರಕರ್ತರು ಚೀನಾದ ಹುಬೈ ಪ್ರಾಂತ್ಯದಿಂದ ನೇರವಾಗಿ ಸಾಮಾಜಿಕ ಜಾಲತಾಣಗಳ ಮುಖಾಂತರ ವರದಿ ಮಾಡುತ್ತಿದ್ದರು. ಇದೀಗ ಈ ಇಬ್ಬರ ಪೈಕಿ ಚೆನ್ ಕ್ಯುಶಿ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದಾರೆ. ವುಹಾನ್ ನಲ್ಲಿರುವ ಖಾಸಗಿ ಆಸ್ಪತ್ರೆಯ ಶವಾಗಾರದಿಂದ ಲೈವ್ ಮಾಡಿದ್ದ ಲಿಜೆಹು ಆ ಬಳಿಕ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಶವಗಳ ವಿಲೇವಾರಿ ಕುರಿತ ವರದಿ
ಲೀಜೆಹು ಈ ಹಿಂದೆ ಕೊರೊನಾ ವೈರಸ್ ಪೀಡಿತ ಶವಗಳ ಅವೈಜ್ಞಾನಿಕ ವಿಲೇವಾರಿ ಕುರಿತು ವಿಡಿಯೋ ಮಾಡುತ್ತಿದ್ದಾಗ ಅಲ್ಲಿನ ಅಧಿಕಾರಿಗಳು ಈತನಿಗೆ ಎಚ್ಚರಿಕೆ ನೀಡಿದ್ದರು. ಅದನ್ನೂ ಮೀರಿ ಈತ ವಿಡಿಯೋ ಮಾಡಿದ್ದಾಗ ಅವರನ್ನುಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪತ್ರಕರ್ತ ಚೆನ್ ಕ್ಯುಶಿ ಬಿಡುಗಡೆಗೆ ಚೀನಿ ಜನತೆ ಆಗ್ರಹಿಸಿದ್ದರು.












Click it and Unblock the Notifications