ಪಾಕಿಸ್ತಾನವಾಯ್ತು, ಇನ್ನು ಪ್ಯಾಲೆಸ್ತೇನ್ ಗೂ ನೆರವು ನೀಡೋಲ್ಲ: ಟ್ರಂಪ್

ವಾಷಿಂಗ್ಟನ್ ಡಿಸಿ, ಜನವರಿ 03: ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿದ್ದ ಆರ್ಥಿಕ ನೆರವನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದೇ ಒಂದೇ ದಿನದಲ್ಲಿ ಇದೀಗ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದಿದ್ದಾರೆ.

ಪ್ಯಾಲೆಸ್ತೇನ್ ಗೂ ಆರ್ಥಿಕ ನೆರವನ್ನು ನಿಲ್ಲಿಸಲು ಅವರು ಚಿಂತಿಸಿದ್ದಾರೆ. ಇಸ್ರೇಲ್ ನೊಂದಿಗೆ ಶಾಂತಿ ಕಾಯ್ದುಕೊಳ್ಳಲು ಪ್ಯಾಲೆಸ್ತೇನ್ ಸಿದ್ಧವಿಲ್ಲದ ಕಾರಣ ಅಮೆರಿಕ ಈ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದೆ ಎಂದಿದ್ದಾರೆ.

After stopping aid for Pakistan, Trump threatens same action against Palestinians

"ಕೇವಲ ಪಾಕಿಸ್ತಾನಕ್ಕಷ್ಟೇ ಅಲ್ಲ, ನಾವು ಹಲವು ದೇಶಗಳಿಗೆ ಕೋಟಿ ಕೋಟಿ ಡಾಲರ್ ನೀಡಿ, ಹಿಂತಿರುಗಿ ಏನನ್ನೂ ಪಡೆದಿಲ್ಲ. ಉದಾಹರಣೆಗೆ ನಾವು ಪ್ಯಾಲೆಸ್ತೇನ್ ಗೆ ನೂರಾರು ದಶಕೋಟಿ ಡಾಲರ್ ಗಳನ್ನು ಪ್ರತಿವರ್ಷ ನೆರವಿನ ರೂಪದಲ್ಲಿ ನೀಡುತ್ತೇವಾದರೂ, ಪ್ಯಾಲೆಸ್ತೇನ್ ಕಡೆಯಿಂದ ನಮಗೆ ಯಾವುದೇ ಮೆಚ್ಚುಗೆಯಾಗಲೀ, ಗೌರವವಾಗಲಿ ಸಿಕ್ಕಿಲ್ಲ. ಅವರು ನಮ್ಮಿಂದ ಪಡೆದ ಸಾಲವನ್ನು ವಾಪಸ್ ಮಾಡುವ ಮನಸ್ಸನ್ನೂ ಮಾಡಿಲ್ಲ" ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡುವ ಮೂಲಕ ತಮ್ಮ ಮುಂದಿನ ಗುರಿ ಪ್ಯಾಲೆಸ್ತೇನ್ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

'ಭಯೋತ್ಪಾದನೆಗೆ ಕುಮ್ಮಕ್ಕುನೀಡುವ, ಭಯೋತ್ಪಾದಕರನ್ನು ಸಲಹುವ ಪಾಕಿಸ್ತಾನಕ್ಕೆ ಇನ್ನು ಮೇಲೆ ಆರ್ಥಿಕ ನೆರವು ನೀಡುವುದಿಲ್ಲ' ಎಂದು ಹೊಸ ವರ್ಷದ ಮೊದಲ ದಿನವೇ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+