• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಫ್ಘಾನ್: ನಟಿಯರು, ವರದಿಗಾರ್ತಿಯರಿಗೆ ತಾಲಿಬಾನ್ "ಧಾರ್ಮಿಕ ಮಾರ್ಗಸೂಚಿ"

|
Google Oneindia Kannada News

ಕಾಬೂಲ್, ನವೆಂಬರ್ 22: ಅಫ್ಘಾನಿಸ್ತಾನದಲ್ಲಿ ಮಹಿಳಾ ನಟಿಯರನ್ನೊಳಗೊಂಡ ನಾಟಕಗಳು, ಸೋಪ್ ಜಾಹೀರಾತು ಸೇರಿದಂತೆ ಎಲ್ಲ ರೀತಿಯ ಪ್ರದರ್ಶನಗಳನ್ನು ತಡೆಯುವಂತೆ ತಾಲಿಬಾನ್ ಸರ್ಕಾರ ಆದೇಶ ಹೊರಡಿಸಿದೆ. ಮಹಿಳಾ ನಟಿಯರು ಹಾಗೂ ಟಿವಿ ವರದಿಗಾರ್ತಿಯರಿಗಾಗಿ ಹೊಸ ಧಾರ್ಮಿಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ತಾಲಿಬಾನ್ ಮಹಿಳಾ ದೂರದರ್ಶನ ಪತ್ರಕರ್ತರು ತಮ್ಮ ವರದಿಗಳನ್ನು ಪ್ರಸ್ತುತಪಡಿಸುವಾಗ ಇಸ್ಲಾಮಿಕ್ ಹಿಜಾಬ್‌ಗಳನ್ನು ಧರಿಸುವಂತೆ ಕರೆ ನೀಡಲಾಗಿದೆ. ಇದರ ಜೊತೆಗೆ ಪ್ರವಾದಿ ಮೊಹಮ್ಮದ್ ಅಥವಾ ಇತರ ಪೂಜ್ಯ ವ್ಯಕ್ತಿಗಳನ್ನು ತೋರಿಸುವ ಚಲನಚಿತ್ರ ಅಥವಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಸಚಿವಾಲಯವು ತಿಳಿಸಿದೆ.

5 ಕಾರಣಗಳ ಗುಟ್ಟು: ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡ ಯುಎಸ್ ಯಡವಟ್ಟು!5 ಕಾರಣಗಳ ಗುಟ್ಟು: ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡ ಯುಎಸ್ ಯಡವಟ್ಟು!

ಇಸ್ಲಾಮಿಕ್ ಮತ್ತು ಅಫ್ಘಾನ್ ಮೌಲ್ಯಗಳಿಗೆ ವಿರುದ್ಧವಾದ ಚಲನಚಿತ್ರಗಳು ಅಥವಾ ಕಾರ್ಯಕ್ರಮಗಳನ್ನು ನಿಷೇಧಿಸುವಂತೆ ಕರೆ ನೀಡಲಾಗಿದೆ. "ಇವು ನಿಯಮಗಳಲ್ಲ ಆದರೆ ಧಾರ್ಮಿಕ ಮಾರ್ಗದರ್ಶಿಗಳು," ಎಂದು ಸಚಿವಾಲಯದ ವಕ್ತಾರ ಹಕೀಫ್ ಮೊಹಾಜಿರ್ ತಿಳಿಸಿದ್ದಾರೆ.

ಧಾರ್ಮಿಕ ನಿಯಮಗಳ ಪ್ರಸಾರ:

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಹೊಸ ಧಾರ್ಮಿಕ ಮಾರ್ಗಸೂಚಿಗಳನ್ನು ಭಾನುವಾರ ಹೊರಡಿಸಲಾಗಿದ್ದು, ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಪ್ರಸಾರ ಮಾಡಲಾಗಿದೆ. ಈ ಬಾರಿ ತಾಲಿಬಾನಿಗಳು ಸಮಾನತೆ ಆಧಾರದಲ್ಲಿ ಆಡಳಿತ ನಡೆಸುವುದಾಗಿ ಒತ್ತಾಯಿಸಲಾಗಿತ್ತು. ಹಾಗಿದ್ದರೂ, ತಾಲಿಬಾನ್ ಈಗಾಗಲೇ ವಿಶ್ವವಿದ್ಯಾನಿಲಯದಲ್ಲಿ ಮಹಿಳೆಯರು ಏನು ಧರಿಸಬಹುದು ಎಂಬ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಭರವಸೆಯ ಹೊರತಾಗಿಯೂ ಹಲವಾರು ಆಫ್ಘನ್ ಪತ್ರಕರ್ತರನ್ನು ಹೊಡೆದು ಕಿರುಕುಳ ನೀಡಲಾಗಿದೆ.

ಮಾಧ್ಯಮಗಳಿಗೆ ಕಡಿವಾಣ ಹಾಕಿದ ತಾಲಿಬಾನ್:

2001 ರಲ್ಲಿ ತಾಲಿಬಾನ್ ಅನ್ನು ಉರುಳಿಸಿದ ಕೂಡಲೇ ಪಾಶ್ಚಿಮಾತ್ಯ ನೆರವು ಮತ್ತು ಖಾಸಗಿ ಹೂಡಿಕೆಯೊಂದಿಗೆ ಡಜನ್‌ಗಟ್ಟಲೆ ದೂರದರ್ಶನ ಚಾನೆಲ್‌ಗಳು ಮತ್ತು ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಕಳೆದ ಆಗಸ್ಟ್ 15ರವರೆಗೂ ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರಗಳ ಅಡಿಯಲ್ಲಿ ಎರಡು ದಶಕಗಳ ಕಾಲ ಸ್ವತಂತ್ರ್ಯವಾಗಿದ್ದ ಮಾಧ್ಯಮಗಳಿಗೆ ತಾಲಿಬಾನ್ ಸರ್ಕಾರ ಕಡಿವಾಣ ಹಾಕಿದೆ.

ಷರಿಯಾ ಕಾನೂನಿನ ಹೆಸರಿನಲ್ಲಿ ಕ್ರೌರ್ಯ:

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಈ ಹಿಂದೆ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಇದೇ ಷರಿಯಾ ಕಾನೂನುಗಳನ್ನು ಪಾಲನೆ ಮಾಡಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಸಾರ್ವಜನಿಕರ ಮರಣ ದಂಡನೆ, ಕೋಲುಗಳಿಂದ ಬಲವಾಗಿ ಹೊಡೆಯುವುದು, ಕೈ-ಕಾಲುಗಳನ್ನು ಛಿದ್ರಗೊಳಿಸುವುದು, ಹೀಗೆ ಒಂದಕ್ಕಿಂತ ಒಂದು ಶಿಕ್ಷೆಯ ವಿಧಾನ ಘೋರವಾಗಿತ್ತು. ಜನರನ್ನು ತಿದ್ದುವುದಕ್ಕಾಗಿ ಇರುವ ಇಸ್ಲಾಮಿಕ್ ಕಾನೂನುಗಳನ್ನು ಉಲ್ಲಂಘಿಸಿ ಅತಿರೇಕದ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಚಿಕ್ಕದಾಗಿ ಗಡ್ಡ ಬಿಟ್ಟ ಪುರುಷರಿಗೆ ಶಿಕ್ಷೆ ನೀಡುವುದು ಒಂದು ವಿಧಾನವಾಗಿತ್ತು. ಆದರೆ ಮಹಿಳೆಯರಿಗೆ ತೀರಾ ಮುಜುಗರ ಉಂಟು ಮಾಡುವಂತಾ ಶಿಕ್ಷೆಗಳನ್ನು ಈ ಕಾನೂನುಗಳಡಿಯಲ್ಲಿ ನೀಡಲಾಗುತ್ತಿತ್ತು. ಮಹಿಳೆಯರು ಧರಿಸುವ ಬಟ್ಟೆಯಿಂದ ಹಿಡಿದು ನಡವಳಿಕೆವರೆಗೂ ಪ್ರತಿಯೊಂದಕ್ಕೂ ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದ್ದು, ಉಲ್ಲಂಘಿಸಿದವರಿಗೆ ಸಾರ್ವಜನಿಕವಾಗಿ ಹಿಂಸೆ ನೀಡಲಾಗುತ್ತಿತ್ತು.

* ಕಲೆ ಮತ್ತು ಮನೋರಂಜನೆ ನಿಷೇಧ:

ಫೋಟೋಗ್ರಫಿ, ಸಿನಿಮಾ, ಮಹಿಳೆಯರ ಚಿತ್ರ ಪ್ರದರ್ಶನ ಸೇರಿದಂತೆ ಕಲೆ ಹಾಗೂ ಮನೋರಂಜನೆಯನ್ನು ನಿಷೇಧಿಸಲಾಗುವುದರ ಜೊತೆಗೆ ಪಾದ್ರಿಗಳಿಗೆ ಆಡಳಿತದ ಹೊಣೆ ವಹಿಸಲಾಗುತ್ತದೆ. ತಾಲಿಬಾನ್ ವಿದ್ಯಾರ್ಥಿಗಳಿಗೆ ಪಾಷ್ಟೋ ಮತ್ತು ಗುಂಪಿನ ಹೆಚ್ಚಿನ ನಾಯಕತ್ವ ವಹಿಸಿದವರಿಗೆ ಧಾರ್ಮಿಕ ವಿದ್ವಾಂಸರೆಂದು ಹೇಳಿಕೊಳ್ಳಲಾಗುತ್ತಿದೆ.

* ಮಹಿಳೆಯರಿಗೆ ಕಟ್ಟುನಿಟ್ಟಿನ ನಿಯಮಗಳು:

ಬಾಲಕಿಯರ ಹೊರತಾಗಿ ವಯಸ್ಸಿಗೆ ಬಂದ ಯುವತಿಯರ ಶಿಕ್ಷಣಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಮಹಿಳೆಯರ ಚಟುವಟಿಕೆಗಳಿಗೆ ಕಠಿಣ ಷರತ್ತುಗಳನ್ನು ವಿಧಿಸಿರುವುದರಿಂದ ಅವರು ಗೃಹಬಂಧನಕ್ಕೆ ಒಳಗಾದರು. ಸಾರ್ವಜನಿಕವಾಗಿ ಮಹಿಳೆಯರು ಒಬ್ಬರೇ ಓಡಾಡುವಂತಿಲ್ಲ ಹಾಗೂ ಕಡ್ಡಾಯವಾಗಿ ಒಬ್ಬ ಪುರುಷನ ನೆರಳಿನಲ್ಲಿರಬೇಕು. ಬುರ್ಖಾದ ಮೂಲಕ ಮಹಿಳೆಯರು ಕಡ್ಡಾಯವಾಗಿ ತಲೆಯಿಂದ ಪಾದದವರೆಗೂ ಮುಚ್ಚಿಕೊಂಡಿರಬೇಕು ಎಂಬ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಜಾರಿಗೊಳಿಸಲಾಗಿತ್ತು.

* ಕಳ್ಳತನ, ವ್ಯಭಿಚಾರಕ್ಕೆ ಕಠಿಣ ಶಿಕ್ಷೆ:

ವ್ಯಭಿಚಾರ ನಡೆಸುವವರಿಗೆ ಕಲ್ಲಿನಲ್ಲಿ ಹೊಡೆಯುವುದು. ಕಳ್ಳತನ ಮತ್ತು ಲೂಟಿ ಮಾಡುವ ಅಪರಾಧಕ್ಕೆ ಶಸ್ತ್ರಾಸ್ತ್ರಗಳಿಂದ ಅಪರಾಧಿಗಳ ಕೈಗಳನ್ನೇ ಕತ್ತರಿಸುವಂತಾ ಕ್ರೌರ್ಯ ನಿಯಮಗಳನ್ನು ಪಾಲನೆ ಮಾಡಲಾಗುತ್ತಿತ್ತು.

   ರಾಹುಲ್ ದ್ರಾವಿಡ್ ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada
   English summary
   Afghanistan: Taliban Govt's New Religious Guidelines For Women Actress And TV Reporters.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X