Get Updates
Get notified of breaking news, exclusive insights, and must-see stories!

ಅಫ್ಘಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಫೇಸ್‌ಬುಕ್ ಪುಟ ಹ್ಯಾಕ್

ಕಾಬೂಲ್, ಸೆಪ್ಟೆಂಬರ್ 27: ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಘನಿಯವರಿಗೆ ಸಂಬಂಧಿಸಿದ ಫೇಸ್‌ಬುಕ್ ಅಕೌಂಟ್ ಅನ್ನು ಹ್ಯಾಕ್ ಮಾಡಿರುವ ಬಗ್ಗೆ ಸ್ವತಃ ಅವರೇ ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

"ತುರ್ತು: ಡಾ ಮೊಹಮ್ಮದ್ ಅಶ್ರಫ್ ಘನಿ ಅವರ ಅಧಿಕೃತ ಫೇಸ್ಬುಕ್ ಪುಟವನ್ನು ನಿನ್ನೆಯಿಂದ ಹ್ಯಾಕ್ ಮಾಡಲಾಗಿದೆ. ಪುಟವನ್ನು ಹಿಂಪಡೆಯುವವರೆಗೂ ಈ ಪುಟದಲ್ಲಿ ಪ್ರಕಟಿಸಿದ ಯಾವುದೇ ವಿಷಯವು ಮಾನ್ಯವಾಗಿಲ್ಲ," ಎಂದು ಟ್ವೀಟ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

"ಅಫ್ಘಾನಿಸ್ತಾನದ ಹೊಸ ತಾಲಿಬಾನ್ ಸರ್ಕಾರವನ್ನು ಕಾನೂನುಬದ್ಧಗೊಳಿಸುವಂತೆ ಅಂತಾರಾಷ್ಟ್ರೀಯ ಸಮುದಾಯವನ್ನು ಕೇಳುವ ಸಂದೇಶವನ್ನು ಅಶ್ರಫ್ ಘನಿಯ ಫೇಸ್‌ಬುಕ್ ಪ್ರೊಫೈಲ್ ನಿಂದ ಹ್ಯಾಕರ್ ಪೋಸ್ಟ್ ಮಾಡಿದ್ದಾರೆ," ಎಂದು ಅಶ್ವಕ ನ್ಯೂಸ್ ವರದಿ ಮಾಡಿದೆ.

Afghanistan Former President Ashraf Ghanis Facebook page hacked

ತಮ್ಮ ಆಡಳಿತದ ದುರಂತ ಅಂತ್ಯದ ಉಲ್ಲೇಖ:

ಅಫ್ಘಾನಿಸ್ತಾನದದಲ್ಲಿ ತಾಲಿಬಾನ್ ಸರ್ಕಾರ ಘೋಷಣೆಯಾದ ಬೆನ್ನಲ್ಲೇ ಮಾಜಿ ಅಧ್ಯಕ್ಷ ಅಶ್ರಫ್ ಘನಿ, ತನ್ನ "ಸ್ವಂತ ಅಧ್ಯಾಯ" ಹಿಂದಿನವರ ರೀತಿಯಲ್ಲೇ ದುರಂತ ಅಂತ್ಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದರು. ಕಳೆದ ಆಗಸ್ಟ್ 15ರಂದು ಕಾಬೂಲ್ ನಗರದಲ್ಲಿ ತಾಲಿಬಾನ್ ಉಗ್ರರು ಲಗ್ಗೆ ಇಡುತ್ತಿದ್ದಂತೆ ತಮ್ಮ 15 ಸಚಿವರೊಂದಿಗೆ ಮಾಜಿ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ್ದರು. ಅಫ್ಘಾನಿಸ್ತಾನವನ್ನು ತೊರೆದ ಎರಡ್ಮೂರು ಗಂಟೆಗಳಲ್ಲೇ ತಮ್ಮ ಪಲಾಯನಕ್ಕೆ ಕಾರಣವನ್ನು ತಿಳಿಸಿದ್ದರು. ದೇಶವನ್ನು ತೊರೆಯುವಂತೆ ನನಗೆ ಒತ್ತಾಯಿಸಲಾಗಿತ್ತು, ಅಫ್ಘಾನಿಸ್ತಾನದಲ್ಲಿ ರಕ್ತಪಾತವನ್ನು ತಪ್ಪಿಸುವುದಕ್ಕಾಗಿ ನಾನು ದೇಶದಿಂದ ಹೊರ ಬಂದಿದ್ದೇನೆ ಎಂದು ಅಶ್ರಫ್ ಘನಿ ಹೇಳಿಕೊಂಡಿದ್ದರು.

ಅಫ್ಘಾನ್ ಪ್ರಜೆಗಳನ್ನು ತೊರೆಯುವ ಉದ್ದೇಶವಿರಲಿಲ್ಲ:

ಕಳೆದ ಆಗಸ್ಟ್ 15ರ ಘಟನೆಗಳನ್ನು ಉಲ್ಲೇಖಿಸುತ್ತಾ ಹೇಳಿರುವ ಅಶ್ರಫ್ ಘನಿ ತಮ್ಮ ಇತ್ತೀಚಿನ ಹೇಳಿಕೆಯಲ್ಲಿ, "ಅರಮನೆ ಭದ್ರತೆಯ ಒತ್ತಾಯದ ಮೇರೆಗೆ ಅಫ್ಘಾನಿಸ್ತಾನವನ್ನು ತೊರೆದಿರುವುದಾಗಿ ಹೇಳಿದ್ದಾರೆ. ನಾವು ಅಂದು ದೇಶದಲ್ಲೇ ಉಳಿದುಕೊಂಡಿದ್ದರೆ 1990ರಲ್ಲಿ ನಡೆದ ಅಂತರ್ಯುದ್ಧವು ಮತ್ತೆ ಮರುಕಳಿಸುತ್ತಿತ್ತು. ಕಾಬೂಲ್ ನಗರದ ಬೀದಿ ಬೀದಿಗಳಲ್ಲಿ ನೆತ್ತರು ಹರಿಯುತ್ತಿತ್ತು. ಕಾಬೂಲ್ ಅನ್ನು ತೊರೆಯುವುದು ನನ್ನ ಜೀವನದಲ್ಲೇ ನಾನು ತೆಗೆದುಕೊಂಡ ಒಂದು ಕಠಿಣ ನಿರ್ಧಾರವಾಗಿತ್ತು. ಆದರೆ 60 ಲಕ್ಷ ಜನರ ಜೀವವನ್ನು ಕಾಪಾಡುವುದಕ್ಕೆ ಮತ್ತು ಬಂದೂಕುಗಳು ಸದ್ದು ಮಾಡದಂತೆ ತಡೆಯಲು ಅದೊಂದೇ ಮಾರ್ಗ ಎಂದು ನಾನು ಅಂದುಕೊಂಡಿದ್ದೆನು," ಎಂದು ಅಶ್ರಫ್ ಘನಿ ಹೇಳಿದ್ದಾರೆ.

Afghanistan Former President Ashraf Ghanis Facebook page hacked

"ಹೆಲಿಕಾಪ್ಟರ್ ತುಂಬ ಹಣ ತೆಗೆದುಕೊಂಡು ಹೋಗಿಲ್ಲ":

ನಾಲ್ಕು ಕಾರು ಮತ್ತು ಒಂದು ಹೆಲಿಕಾಪ್ಟರ್ ತುಂಬ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಕಾಬೂಲ್ ನಗರದ ರಷ್ಯಾದ ರಾಯಭಾರಿ ಮಾಡಿರುವ ಗಂಭೀರ ಆರೋಪವನ್ನು ಅಶ್ರಫ್ ಘನಿ ತಳ್ಳಿ ಹಾಕಿದ್ದಾರೆ. ಈ ಆರೋಪವು ಸಂಪೂರ್ಣ ಮತ್ತು ಸ್ಪಷ್ಟ ಸುಳ್ಳು ಎಂದಿರುವ ಅವರು, ಕಳೆದೊಂದು ದಶಕಗಳಿಂದ ಅಫ್ಘಾನಿಸ್ತಾನದಲ್ಲಿ ಭ್ರಷ್ಟಾಚಾರ ಎಂಬ ಪಿಡುಗನ್ನು ದುರ್ಬಲಗೊಳಿಸಲಾಗಿತ್ತು. ನನ್ನ ಬಳಿ ಅನುವಂಶೀಯವಾಗಿ ಪಡೆದುಕೊಂಡಿರುವ ಸಾಕಷ್ಟು ಹಣವಿದೆ ಎಂದಿರುವ ಅಶ್ರಫ್ ಘನಿ, ತಮ್ಮ ಪತ್ನಿಯ ಕುಟುಂಬದ ಪಿತ್ರಾರ್ಜಿತ ಮತ್ತು ಅವರ ತಾಯ್ನಾಡಿನ ಲೆಬನಾನ್‌ನಲ್ಲಿ ಪಟ್ಟಿ ಮಾಡಲಾದ ಎಲ್ಲಾ ಆಸ್ತಿಗಳ ವಿವರವನ್ನು ಸಾರ್ವಜನಿಕವಾಗಿ ಘೋಷಿಸಿದರು. ಅಲ್ಲದೇ "ನನ್ನ ಆಪ್ತ ಸಹಾಯಕರು ತಮ್ಮ ಹಣಕಾಸನ್ನು ಸಾರ್ವಜನಿಕ ಲೆಕ್ಕಪರಿಶೋಧನೆಗೆ ಸಲ್ಲಿಸಲು ಸಿದ್ಧರಾಗಿದ್ದಾರೆ, ಮತ್ತು ನಾನು ಇತರ ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ವ್ಯಕ್ತಿಗಳನ್ನು ಹಾಗೆ ಮಾಡಲು ಪ್ರೋತ್ಸಾಹಿಸುತ್ತೇನೆ ಮತ್ತು ಒತ್ತಾಯಿಸುತ್ತೇನೆ," ಎಂದು ಘನಿ ಬರೆದಿದ್ದಾರೆ.

ಯಾರು ಈ ಅಶ್ರಫ್ ಘನಿ?:

ಶೈಕ್ಷಣಿಕ ತಕ್ಷ ಹಾಗೂ ಅರ್ಥಶಾಸ್ತ್ರಜ್ಞರಾದ ಅಶ್ರಫ್ ಘನಿ ಅಫ್ಘಾನಿಸ್ತಾನದ 14ನೇ ಅಧ್ಯಕ್ಷರಾಗಿದ್ದರು. 2014ರ ಸೆಪ್ಟೆಂಬರ್ 20ರಲ್ಲಿ ಮೊದಲ ಬಾರಿಗೆ ಅಫ್ಘಾನಿಸ್ತಾನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2019ರ ಸಪ್ಟೆಂಬರ್ 28ರಂದು ಎರಡನೇ ಬಾರಿಗೆ ಅಫ್ಘಾನ್ ಅಧ್ಯಕ್ಷ ಸ್ಥಾನದ ಗದ್ದುಗೆ ಏರಿದ್ದರು. ಸುದೀರ್ಘ ಪ್ರಕ್ರಿಯೆಯ ನಂತರ ಕಳೆದ ಫೆಬ್ರವರಿ 2020ರಲ್ಲಿ ಅವರನ್ನು ವಿಜೇತರೆಂದು ಘೋಷಿಸಲಾಗಿದ್ದು, ಕಳೆದ ವರ್ಷ ಮಾರ್ಚ್ 9ರಂದು ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಶ್ರಫ್ ಘನಿ ಪ್ರಮಾಣವಚನ ಸ್ವೀಕರಿಸಿದರು. ಶಿಕ್ಷಣದಿಂದ ಮಾನವಶಾಸ್ತ್ರಜ್ಞರಾಗಿದ್ದ ಅವರು ಈ ಹಿಂದೆ ಹಣಕಾಸು ಸಚಿವರಾಗಿ ಮತ್ತು ಕಾಬೂಲ್ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+