ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದ ಸಲ್ಮಾ ಅಣೆಕಟ್ಟಿನ ಮೇಲೆ ಉಗ್ರರ ದಾಳಿ, 10 ಸೈನಿಕರು ಬಲಿ

By Sachhidananda Acharya
|
Google Oneindia Kannada News

ಅಫ್ಘಾನಿಸ್ತಾನ, ಜೂನ್ 25: ಇಲ್ಲಿನ ಹೆರಾತ್ ಪ್ರಾಂತ್ಯದಲ್ಲಿರುವ ಸಲ್ಮಾ ಅಣೆಕಟ್ಟಿನ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿ 10 ಅಫ್ಘಾನಿಸ್ತಾನ ಸೈನಿಕರನ್ನು ಕೊಂದು ಹಾಕಿದ್ದಾರೆ.

ಸಲ್ಮಾ ಡ್ಯಾಂ ಚೆಕ್ ಪೋಸ್ಟ್ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದರು. ಇದನ್ನು ತಡೆಯಲು ಸೈನಿಕರು ಮುಂದಾದಾಗ 10 ಸೈನಿಕರನ್ನು ಉಗ್ರರು ಕೊಂದಿದ್ದಾರೆ. ಘಟನೆಯಲ್ಲಿ 4 ಉಗ್ರರೂ ಸಾವನ್ನಪ್ಪಿದ್ದಾರೆ. 4 ಪೊಲೀಸರೂ ಘಟನೆಯಲ್ಲಿ ಗಾಯಗೊಂಡಿದ್ದಾರೆ.

Afghanistan: 10 Security persons killed in an attack at Salma Dam

2016ರಲ್ಲಿ 1900 ಕೋಟಿ ವೆಚ್ಚದಲ್ಲಿ ಈ ಸಲ್ಮಾ ಡ್ಯಾಂ ನಿರ್ಮಿಸಲಾಗಿತ್ತು. ಇದನ್ನು ಗುರಿಯಾಗಿಸಿ ಹಲವು ಬಾರಿ ಉಗ್ರರು ದಾಳಿ ನಡೆಸಿದ್ದರು. ಹೀಗಾಗಿ ಈ ಅಣೆಕಟ್ಟಿಗೆ ಭಾರೀ ಭದ್ರತೆ ನೀಡಲಾಗಿತ್ತು. ಹೀಗಿದ್ದೂ ನಿನ್ನೆ ಪುನಃ ಉಗ್ರರು ದಾಳಿ ನಡೆಸಿ 10 ಸೈನಿಕರನ್ನು ಕೊಂದಿದ್ದಾರೆ.

ಡ್ಯಾಂ 100ಮೀಟರ್ ಗಿಂತಲೂ ಹೆಚ್ಚು ಎತ್ತರವಾಗಿದ್ದು 540 ಮೀಟರ್ ಅಗಲವಿದೆ. 42 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿರುವ ಈ ಅಣೆಕಟ್ಟು 75,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ನೀಡುತ್ತದೆ.

English summary
Afghan officials said 10 security forces were killed by Taliban militants in an attack on a checkpoint at the Salma Dam in the Herat province.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X