'ಡಿಜಿಟಲ್ ತೆರಿಗೆ ವ್ಯವಸ್ಥೆಗೆ ಜಿಎಸ್ಟಿ, ಆಧಾರ್ ಭದ್ರ ಅಡಿಪಾಯ'
ಲಂಡನ್, ಜೂನ್ 20: ಲಂಡನ್ ನಲ್ಲಿ ನಡೆಯುತ್ತಿರುವ ಯುಕೆ-ಇಂಡಿಯಾ ಲೀಡರ್ ಶಿಪ್ ಕಾನ್ಕ್ಲೇವ್ ನಲ್ಲಿ ಮಾತನಾಡಿದ ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ, ಭಾರತ ಮತ್ತಷ್ಟು ದೊಡ್ಡ ಸವಾಲುಗಳನ್ನು ಸ್ವೀಕರಿಸಬೇಕು ಎಂದಿದ್ದಾರೆ.
ಇದೇ ವೇಳೆ ಅವರು, ದೇಶದ ಡಿಜಿಟಲ್ ತೆರಿಗೆ ವ್ಯವಸ್ಥೆಗೆ ಆಧಾರ್, ಯುಐಪಿ ಮತ್ತು ಜಿಎಸ್ಟಿ ಭದ್ರ ಅಡಿಪಾಯವಾಗಿದೆ ಎಂದು ವಿಶ್ಲೇಷಿಸಿದರು.
"ಭಾರತ ಮತ್ತಷ್ಟು ದೊಡ್ಡ ಸವಾಲು ಸ್ವೀಕರಿಸುವ ಅಗತ್ಯವಿದೆ. ಎಐ, ಆಟೋಮೊಬೈಲ್ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಭವಿಷ್ಯದ ಅವಕಾಶಗಳಿದ್ದು ಬ್ರಿಟನ್ ವಿಶ್ವವಿದ್ಯಾಲಯಗಳಲ್ಲಿ ಈ ಸಂಬಂಧ ನಿರ್ಣಾಯಕ ಕೆಲಸಗಳು ನಡೆಯುತ್ತಿವೆ," ಎಂದವರು ಹೇಳಿದರು.

ಇದಕ್ಕೂ ಮೊದಲು ಕಾರ್ಯಕ್ರದಲ್ಲಿ ಮಾತನಾಡಿದ ಇಂಡಿಯಾ ಇನ್ ಕಾರ್ಪ್ ಸಂಸ್ಥಾಪಕ ಮತ್ತು ಸಿಇಒ ಮನೋಜ್ ಲಡ್ವಾ, ಭಾರತ-ಯುಕೆ ಸಂಬಂಧ ಗಟ್ಟಿಗೊಳಿಸಲು ಕರೆ ನೀಡಿದರು.
"ಯುಕೆ - ಭಾರತವು ವಿಶ್ವದ ಅತ್ಯುತ್ತಮ ಪ್ರತಿಭೆಗಳನ್ನು ಹೊಂದಲು ಸ್ಪರ್ಧೆಯಲ್ಲಿವೆ. ನಾವು ವಹಿವಾಟು ಮಾದರಿಯಲ್ಲಿ ಉಳಿಯಲು ಸಾಧ್ಯವಿಲ್ಲ. ನಮ್ಮ ನಡುವಿನ ಸಂಬಂಧವನ್ನು ಹೇಗೆ ನಾವು ಉನ್ನತೀಕರಿಸಿ ನಿಜವಾಗಿಯೂ ರೂಪಾಂತರ ಮಾಡಬಹುದು ಎಂಬುದಕ್ಕೆ ಈ ಕಾನ್ಕ್ಲೇವ್ ಹಮ್ಮಿಕೊಂಡಿದ್ದೇವೆ," ಎಂದು ಮಾಹಿತಿ ನೀಡಿದರು.











Click it and Unblock the Notifications