ಮನಿಲಾದಲ್ಲಿ ಭತ್ತದ ತಳಿಗೆ ಪ್ರಧಾನಿ ಮೋದಿ ಹೆಸರು!

Posted By:
Subscribe to Oneindia Kannada

ಮನಿಲಾ(ಫಿಲಿಪೈನ್ಸ್), ನವೆಂಬರ್ 13: ಆಸಿಯಾನ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮನಿಲಾಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಂದು ಲಾಸ್ ಬನೊಸ್ ನಲ್ಲಿರುವ ಅಂತಾರಾಷ್ಟ್ರೀಯ ಭತ್ತದ ಕೃಷಿ ಸಂಶೋಧನಾ ಕೇಂದ್ರ(IRRI)ಗೆ ಭೇಟಿ ನೀಡಿದ್ದಾರೆ.

ಈ ಸಂಶೋಧನಾ ಕೇಂದ್ರದಲ್ಲಿ ಹೊಸದಾಗಿ ಸಂಶೋಧಿಸಿರುವ ಹೊಚ್ಚ ಹೊಸ ಭತ್ತದ ತಳಿಯೊಂದಕ್ಕೆ ಭಾರತದ ಪ್ರಧಾನಿ ಮೋದಿ ಅವರ ಹೆಸರಿಡಲು ಸಂಶೋಧನಾ ಕೇಂದ್ರ ಮುಂದಾಗಿದೆ. ಈ ಭತ್ತದ ತಳಿ ಅತ್ಯಂತ ಬಲಿಷ್ಠವಾಗಿದ್ದು, ಪ್ರವಾಹ ಪರಿಸ್ಥಿತಿಯಲ್ಲಿ ಕೆಲವು ವಾರಗಳ ಕಾಲ(14 ರಿಂದ 18 ದಿನಗಳು) ನೀರಿನಲ್ಲಿ ಮುಳುಗಿದ್ದರೂ ಈ ತಳಿಯ ಭತ್ತಗಳು ಹಾಳಾಗುವುದಿಲ್ಲ ಎಂದು ಸಂಶೋಧನಾ ಕೇಂದ್ರದ ವಕ್ತಾರರು ಹೇಳಿದ್ದಾರೆ.

ಸುಮಾರು 40 ಲಕ್ಷಕ್ಕೂ ಅಧಿಕ ರೈತರು ಬಳಸುತ್ತಿರುವ ಈ ತಳಿ ಪ್ರತಿ ಹೆಕ್ಟೇರಿಗೆ 1 ರಿಂದ 3 ಟನ್ ಗಳಷ್ಟು ಇಳುವರಿ ನೀಡುತ್ತದೆ. ಮುಖ್ಯವಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೇಳಿ ಮಾಡಿಸಿದ ತಳಿ ಇದಾಗಿದೆ.

ಅಂತಾರಾಷ್ಟ್ರೀಯ ಭತ್ತದ ಕೃಷಿ ಸಂಶೋಧನಾ ಕೇಂದ್ರ

ಅಂತಾರಾಷ್ಟ್ರೀಯ ಭತ್ತದ ಕೃಷಿ ಸಂಶೋಧನಾ ಕೇಂದ್ರ

ಆಸಿಯಾನ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮನಿಲಾಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಂದು ಲಾಸ್ ಬನೊಸ್ ನಲ್ಲಿರುವ ಅಂತಾರಾಷ್ಟ್ರೀಯ ಭತ್ತದ ಕೃಷಿ ಸಂಶೋಧನಾ ಕೇಂದ್ರ(IRRI)ಗೆ ಭೇಟಿ ನೀಡಿದರು.

ಹಸಿವು ನೀಗಿಸಲು ತಂತ್ರಜ್ಞಾನದ ನೆರವು

ಮನಿಲಾದಿಂದ 80 ಕಿ.ಮೀ ದೂರದಲ್ಲಿರುವ ಈ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮೋದಿ ಅವರು ಈ ಕೇಂದ್ರದಲ್ಲಿರುವ ಭಾರತೀಯ ವಿಜ್ಞಾನಿಗಳನ್ನು ಕಂಡು ಮಾತನಾಡಿಸಿದರು. ವಿಜ್ಞಾನಿಗಳು, ವಿದ್ಯಾರ್ಥಿಗಳು ಹಾಗೂ ಭಾರತೀಯ ಪರಿವಾರದೊಡನೆ ಮಾತುಕತೆ ನಡೆಸಲಾಯಿತು. ನಾಲ್ಕು ದಶಕಗಳ ಕಾಲ ICAR ಹಾಗೂ IRRI ಜತೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ಹಸಿವು ನೀಗಿಸಲು ತಂತ್ರಜ್ಞಾನದ ನೆರವು ಪಡೆಯಲಾಗುತ್ತಿದ್ದು, ಉತ್ತಮ ತಳಿಗಳು ಹೊರ ಬರುತ್ತಿವೆ ಎಂದು ಮೋದಿ ಹೇಳಿದರು.

ಸಂಶೋಧನೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಮೋದಿ

ಆಹಾರ ಕ್ಷಾಮವನ್ನು ನೀಗಿಸಲು ಕೈಗೊಂಡಿರುವ ಸಂಶೋಧನೆಯನ್ನು ಕೂಲಂಕುಷವಾಗಿ ಮೋದಿ ಅವರು ಪರಿಶೀಲಿಸಿದರು. ಇದೇ ರೀತಿ ಸಂಶೋಧನಾ ಕೇಂದ್ರವನ್ನು ಮೋದಿ ಅವರ ಕ್ಷೇತ್ರ ವಾರಣಾಸಿಯಲ್ಲಿ ಕೂಡಾ ನಿರ್ಮಿಸಲಾಗಿದೆ. ಆದರೆ, ವಾರಣಾಸಿ ಕೇಂದ್ರವು ರೈತರ ಕಾರ್ಯಕ್ಷಮತೆ ಹೆಚ್ಚಿಸುವುದು, ಉತ್ಪಾದನೆ, ವೈವಿಧ್ಯತೆ, ಕೌಶಲ್ಯ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಿದೆ.

ಮೂರು ದಿನಗಳ ಫಿಲಿಪೈನ್ಸ್ ಪ್ರವಾಸದಲ್ಲಿರುವ ಮೋದಿ

ಮೂರು ದಿನಗಳ ಫಿಲಿಪೈನ್ಸ್ ಪ್ರವಾಸದಲ್ಲಿರುವ ಮೋದಿ ಅವರು ಭಾನುವಾರದಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಚೀನಾ ಪ್ರಧಾನಿ ಲಿ ಕೆಕಿಯಾಂಗ್‌ ಅವರನ್ನು ಭೇಟಿ ಮಾಡಿದರು.
ಸೋಮವಾರದಂದು ಡೊನಾಲ್ಡ್‌ ಟ್ರಂಪ್‌ ಮತ್ತು ನರೇಂದ್ರ ಮೋದಿ ಅವರ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಮಂಗಳವಾರದಂದು ನಡೆಯುವ 31ನೇ ಆಸಿಯಾನ್‌- ಇಂಡಿಯಾ ಮತ್ತು 15ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
leaders. A small plot of land where a new rice variety is being cultivated at a rice research centre(IRRI) that is around 80 km from Manila, may be named after PM Modi today

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ