• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈರಲ್ ವಿಡಿಯೋ: ಭೂಕಂಪ-ಸುನಾಮಿ ನಂತರ ಹೇಗಾಗಿದೆ ನೋಡಿ ಇಂಡೋನೇಷ್ಯಾ

|

ಪಲು(ಇಂಡೋನೇಷ್ಯಾ), ಅಕ್ಟೋಬರ್ 03: ಅಲ್ಲಿ ಯಾವುದೂ ಮೊದಲಿದ್ದಂತಿಲ್ಲ, ಎಲ್ಲವೂ ಅಸ್ತವ್ಯಸ್ಥ! ಮನೆ, ರಸ್ತೆ, ಕಟ್ಟಡಗಳು, ವಾಹನಗಳು ಎಲ್ಲವೂ ಕುಸಿದು ಮಕಾಡೆ ಮಲಗಿವೆ... ಬದುಕೂ ಸಹ!

ಇದು ಇಂಡೋನೇಷ್ಯಾದ ಸದ್ಯದ ಚಿತ್ರಣ. ಕಳೆದ ಶುಕ್ರವಾರ(ಸೆ.26)ದಂದು ಇಂಡೋನೇಷ್ಯಾದ ಪಲು ಪ್ರಾಂತ್ಯದಲ್ಲಿ ಕಂಡು ಬಂದ 7.5 ತೀವ್ರತೆಯ ಭೀಕರ ಭೂಕಂಪ ಇಲ್ಲಿನ ಜನರ ಬದುಕನ್ನೇ ತಲೆಕೆಳಗು ಮಾಡಿದೆ.

ಚರ್ಚಿನಲ್ಲಿ 34 ಮಕ್ಕಳ ದುರಂತ ಸಾವು, ಬಗೆದಷ್ಟೂ ಸಿಗುತ್ತಿವೆ ಶವಗಳು!

ಇದುವರೆಗೆ ಸುಮಾರು 1400 ಜನ ಸಾವಿಗೀಡಾಗಿದ್ದು, ಲಕ್ಷಾಂತರ ಜನ ಗಾಯಗೊಂಡಿದ್ದಾರೆ, ನಿರಾಶ್ರಿತರಾಗಿದ್ದಾರೆ. ಭೂಕಂಪ ಮತ್ತು ಸುನಾಮಿಯಿಂದ ಆಗಷ್ಟೇ ಚೇತರಿಸಿಕೊಳ್ಳುತ್ತಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಮತ್ತೆ ಮಂಗಳವಾರ ಸಹ 5.6, 6.0 ತೀವ್ರತೆಯ ಭೂಕಂಪ ಉಂಟಾಗಿದ್ದು, ಜನಸಾಮಾನ್ಯನ ಬದುಕು ಮೂರಾಬಟ್ಟೆಯಾಗಿದೆ.

ವಿಡಿಯೋ : ಇಂಡೋನೇಷ್ಯಾದಲ್ಲಿ ಭೂಕಂಪದ ನಂತರ ಸುನಾಮಿಯ ಅಟ್ಟಹಾಸ

ಅಷ್ಟಕ್ಕೂ ಸುಂದರ ಪ್ರವಾಸೀ ತಾಣಗಳನ್ನು ಹೊಂದಿರುವ ಇಂಡೋನೇಷ್ಯಾ ಭೂಕಂಪ ಮತ್ತು ಸುನಾಮಿಯ ಹೊಡೆತಕ್ಕೆ ಸಿಕ್ಕು ಹೇಗಾಗಿದೆ ಗೊತ್ತಾ? ಭೂಕಂಪ ಮತ್ತು ಸುನಾಮಿಗೂ ಮೊದಲು ಮತ್ತು ನಂತರ ಇಂಡೋನೇಷ್ಯಾ ಹೇಗಿತ್ತು, ಹೇಗಾಗಿದೆ ಎಂಬ ಉಪಗ್ರಹ ಚಿತ್ರವೊಂದು ಬಿಡುಗಡೆಯಾಗಿದ್ದು, ನಿಸರ್ಗದ ಮುನಿಸಿನ ತೀವ್ರತೆಗೆ ಕನ್ನಡಿ ಹಿಡಿದಿದೆ.

ಭೂಕಂಪದ ಮೊದಲು ಮತ್ತು ನಂತರ

ಇಂಡೊನೇಷ್ಯಾದ ಭೀಕರ ಭೂಕಂಪ ಮತ್ತು ಕರಾಳ ಸುನಾಮಿಯ ನಂತರ ಇಲ್ಲಿನ ಚಿತ್ರಣ ಹೇಗಾಗಿದೆ ಎಂಬುದನ್ನು ಉಪಗ್ರಹವೊಂದು ಚಿತ್ರಿಸಿದ್ದು, ಈ ವಿಡಿಯೋವನ್ನು ಎಬಿಸಿ ನ್ಯೂಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿದೆ. ಭೂಕಂಪಕ್ಕೂ ಮೊದಲು ಸುಂದರ ಸ್ವರ್ಗದಂತಿದ್ದ ಇಂಡೋನೇಷ್ಯಾ, ಕಂಪಿಸಿದ ಭೂಮಿಗೆ, ಅಲೆಗಳ ಹೊಡೆತಕ್ಕೆ ಸಿಕ್ಕು ಹೇಗಾಗಿದೆ ಎಂಬುದನ್ನು ಈ ಚಿತ್ರದಲ್ಲಿ ನೀವೇ ನೋಡಿ.

ಎಲ್ಲವನ್ನೂ ಕೊಚ್ಚಿಕೊಂಡ ಹೋದ ರಕ್ಕಸ ಅಲೆ

ಭೀಕರ ಸುನಾಮಿಯ ನಂತರ ಇಂಡೋನೇಷ್ಯಾದ ಕಡಲ ತಡಿಯಲ್ಲಿರುವ ಮನೆಗಳು, ಹೊಟೇಲ್ ಗಳು, ರಸ್ತೆಗಳು ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋವನ್ನು ಪ್ರತ್ಯಕ್ಷದರ್ಶಿಯೊಬ್ಬರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ರಕ್ಕಸ ಅಲೆಯ ಪ್ರಚಂಡ ಶಕ್ತಿಗೆ ಈ ವಿಡಿಯೋ ಉದಾಹರಣೆ.

ವಿಧಿಬರಹ ಎಂಥ ಘೋರ... ತಾತನ ಕೈಯಲ್ಲಿ ಮೊಮ್ಮಗನ ಕಳೇಬರ!

ರಸ್ತೆಗಳೇ ಮಾಯ!

ವ್ಯಕ್ತಿಯೊಬ್ಬ ಅರೆಬರೆ ಕುಸಿದ ರಸ್ತೆಯಲ್ಲಿ ಚಲಿಸುತ್ತಿರುವ ಚಿತ್ರವೊಂದನ್ನು ಜೆನ್ ಹಾರ್ಡಿ ಎಂಬುವವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸಹ ಇಂಡೋನೇಷ್ಯಾ ಭೂಕಂಪದ ನಂತರ ಪರಿಣಾಮಕ್ಕೆ ತಾಜಾ ಉದಾಹರಣೆ ಎನ್ನಿಸಿದೆ.

ಪಲುವಿನ ದುರಂತ ಕತೆ

ಭೂಕಂಪ ಮತ್ತು ಸುನಾಮಿಯ ಮರುದಿನದ ಬೆಳಿಗ್ಗೆ ಪಲು ಕಾಣುತ್ತಿದ್ದುದು ಹೀಗೆ... ಈ ವಿಡಿಯೋವನ್ನು ವರ್ಲ್ಡ್ ವಿಷನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

21 ವರ್ಷದ ಅಗಂಗ್ ರನ್ನು ನೆನೆದು ಹೆಮ್ಮೆ ಪಡುತ್ತಿದೆ ಇಂಡೋನೇಷ್ಯಾ

ಡ್ರೋಣ್ ಕಣ್ಣಲ್ಲಿ ಇಂಡೋನೇಷ್ಯಾ

ನೈಸರ್ಗಿಕ ವಿಕೋಪದ ನಂತರ ಇಂಡೋನೇಷ್ಯಾ ಡ್ರೋನ್ ಕ್ಯಾಮರಾ ಕಣ್ಣಲ್ಲಿ ಹೇಗೆ ಕಾಣುತ್ತಿದೆ ಎಂಬುದನ್ನು ಪ್ರೆಸ್ ಟಿವಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಇನ್ನಷ್ಟು international news ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A satellite image of Indonesia earthquake has become viral now. The picture shows condition of many parts of Indonesia before and after the devastating Earthquake and tsunami.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more