ಜಪಾನ್‌ನಲ್ಲಿ ಸಾಮೂಹಿಕ ಚೂರಿ ಇರಿತ : 2 ಸಾವು
ಟೋಕಿಯೋ, ಮೇ28: ಜಪಾನ್‌ನಲ್ಲಿ ಮಂಗಳವಾರ ಸಾಮೂಹಿಕ ಚೂರಿ ಇರಿತ ನಡೆದಿದ್ದು, ದಷ್ಕರ್ಮಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ವಿದ್ಯಾರ್ಥಿಗಳು ಶಾಲೆಗೆ, ಸಾರ್ವಜನಿಕರು ಕಚೇರಿಗೆ ತೆರಳುತ್ತಿರುವಾಗ ದುಷ್ಕರ್ಮಿಯೊಬ್ಬ ಹಠಾತ್ ಆಗಿ ದಾಳಿ ನಡೆಸಿದ್ದಾನೆ, ಈ ದಾಳಿಗೆ ಓರ್ವ ಬಾಲಕಿ ಬಲಿಯಾಗಿದ್ದಾಳೆ, 19 ಮಂದಿ ಗಾಯಗೊಂಡಿದ್ದಾರೆ,.
ಕೊನೆಯಲ್ಲಿ ಶಂಕಿತ ದಾಳಿಕೋರ ಕೂಡ ತನಗೆ ತಾನೇ ತಿವಿದುಕೊಂಡು ಮೃತಪಟ್ಟಿದ್ದಾನೆ. ಇನ್ನೋರ್ವ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಶ್ವದಲ್ಲೇ ಅತಿ ಕಡಿಮೆ ಅಪರಾಧ ಪ್ರಮಾಣ ಹೊಂದಿರುವ ಜಪಾನ್‌ನಲ್ಲಿ ಈ ಘಟನೆ ಆತಂಕಕ್ಕೆ ಕಾರಣವಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಪಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲೇ ಈ ಘಟನೆ ನಡೆದಿದೆ.

ಮಂಗಳವಾರ ಬೆಳಗಿನ ಜಾವ ಘಟನೆ ನಡೆದಿದೆ. ಆರು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಎನ್ನುವ ಮಾಹಿತಿ ತಿಳಿದುಬಂದಿದೆ. ಓರ್ವ ವ್ಯಕ್ತಿ ಕೈಯಲ್ಲಿ ಚಾಕು ಹಿಡಿದು ಹೋಗುತ್ತಿದುದನ್ನು ನಾನು ನೋಡಿದ್ದೆ, ಆತ ಏಕಾಏಕಿ ತನ್ನ ಕುತ್ತಿಗೆಯನ್ನು ಕೊಯ್ದುಕೊಂಡು ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.












Click it and Unblock the Notifications