Tsunami: ಟೊಂಗಾ ದ್ವೀಪದಲ್ಲಿ 7.1 ತೀವ್ರತೆ ಭೂಕಂಪ; ಸುನಾಮಿ ಎಚ್ಚರಿಕೆ
ಟೊಂಗಾ ದ್ವೀಪದ ಬಳಿ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಪೆಸಿಫಿಕ್ ದ್ವೀಪ ರಾಷ್ಟ್ರಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಮಾಹಿತಿ ನೀಡಿದೆ. ಸ್ಥಳೀಯ ಸಮಯ ಸೋಮವಾರ ಮುಂಜಾನೆ ಟೊಂಗಾದ ಮುಖ್ಯ ದ್ವೀಪದ ಈಶಾನ್ಯಕ್ಕೆ ಸುಮಾರು 100 ಕಿಲೋಮೀಟರ್ (62 ಮೈಲುಗಳು) ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿ ಮಾಡಿದೆ.
ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಎಚ್ಚರಿಕೆಯನ್ನು ನೀಡಲಾಗಿದ್ದು, ಅಪಾಯಕಾರಿ ಅಲೆಗಳು ಕೇಂದ್ರಬಿಂದುವಿನಿಂದ 300 ಕಿಲೋಮೀಟರ್ (185 ಮೈಲುಗಳು) ಒಳಗೆ ಕರಾವಳಿಯ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದೆ. ಪ್ರಬಲ ಭೂಕಂಪದಿಂದ ಟೊಂಗಾ ಕರಾವಳಿಯಲ್ಲಿ ಕೇಂದ್ರಬಿಂದುವಿನಿಂದ 300 ಕಿಲೋಮೀಟರ್ ಅಪಾಯಕಾರಿ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಿದೆ.

ತಕ್ಷಣಕ್ಕೆ ಯಾವುದೇ ಹಾನಿಯ ವರದಿಯಲ್ಲ
ಭೂಕಂಪವು 10 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಜರ್ಮನ್ ಭೂವಿಜ್ಞಾನ ಸಂಶೋಧನಾ ಕೇಂದ್ರವು ಹೇಳಿದೆ. ಟೊಂಗಾ 171 ದ್ವೀಪಗಳನ್ನು ಒಳಗೊಂಡಿರುವ ಪಾಲಿನೇಷ್ಯನ್ ದೇಶವಾಗಿದೆ. ಇದು 1,00,000 ಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು, ಇದರಲ್ಲಿ ಹೆಚ್ಚಿನ ಜನಸಂಖ್ಯೆ ಟೊಂಗಾಟಪುದಲ್ಲಿ ವಾಸಿಸುತ್ತಿದ್ದಾರೆ. ಇದು ಆಸ್ಟ್ರೇಲಿಯಾದ ಕರಾವಳಿಯ ಪೂರ್ವಕ್ಕೆ 3,500 ಕಿಲೋಮೀಟರ್ ಕ್ಕಿಂತ ಹೆಚ್ಚು ದೂರದಲ್ಲಿದೆ.
ಹೆಚ್ಚಿನ ದ್ವೀಪಗಳು ಬಿಳಿ ಮರಳಿನ ಕಡಲತೀರಗಳು, ಹವಳದ ಬಂಡೆಗಳು ಮತ್ತು ದಟ್ಟವಾದ ಉಷ್ಣವಲಯದ ಮಳೆಕಾಡುಗಳನ್ನು ಒಳಗೊಂಡಿವೆ. ಮುಖ್ಯ ದ್ವೀಪವಾದ ಟೊಂಗಾಟಪು, ಲಗೂನ್‌ಗಳು ಮತ್ತು ಸುಣ್ಣದ ಬಂಡೆಗಳಿಂದ ಆವೃತವಾಗಿದೆ.












Click it and Unblock the Notifications