Earthquake: ಚಿಲಿಯಲ್ಲಿ 7.3 ತೀವ್ರತೆಯ ಭೂಕಂಪ
ನವದೆಹಲಿ, ಜುಲೈ 19: ದಕ್ಷಿಣ ಅಮೆರಿಕಾದ ಚಿಲಿಯ ಆಂಟೊಫಾಗಸ್ಟಾದಲ್ಲಿ ತೀವ್ರ ಭೂಕಂಪ ಗುರುವಾರ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಮಾಹಿತಿ ನೀಡಿದೆ. ಭೂಕಂಪನ ಸ್ಥಳದಲ್ಲಿ ನಿವಾಸಿಗಳು ಭಯಬೀತರಾಗಿದ್ದಾರೆ.
ಚಿಲಿಯ ಆಂಟೊಫಾಗಸ್ಟಾದ ಸ್ಯಾನ್ ಪೆಡ್ರೊ ಡಿ ಅಟಕಾಮಾ ಬಳಿ 7.3 ತೀವ್ರತೆಯ ಭೂಕಂಪ ಸಂಭವಿಸಿದೆ.ಈ ಕಂಪನವು ಪಟ್ಟಣದ ಆಗ್ನೇಯಕ್ಕೆ 41 ಕಿಲೋಮೀಟರ್ ದೂರದಲ್ಲಿ 128 ಕಿಮೀ ಆಳದಲ್ಲಿ ಅಪ್ಪಳಿಸಿತು.ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೇ (USGS) ತಿಳಿಸಿದೆ.

ಇಂತಹ ಬೃಹತ್ ಭೂಕಂಪನ ಮಧ್ಯೆಯು ಯಾವುದೇ ಸುನಾಮಿಯಂತಹ ಎಚ್ಚರಿಕೆ, ಸಲಹೆ, ಗಡಿಯಾರ ಅಥವಾ ಅನಾಹುತಗಳ ಬಗ್ಗೆ ಯಾವ ಮುನ್ಸೂಚನೆ ಇಲ್ಲ. ಭೂಮಿಯ ಆಳಕ್ಕೆ ಕಂಪನಿಸಿದೆ. ಭೂಮಿ ಮೇಲ್ಮನಲ್ಲಿ ಈ ಕುರಿತು ಅನುಭವ ಆಗಿದೆ ಎಂದು ವರದಿ ಆಗಿದೆ.
ಅತೀ ತೀವ್ರ ಮತ್ತು ಆಳದ ಭೂಕಂಪನ
ಜನವರಿಯಲ್ಲಿ, ಉತ್ತರ ಚಿಲಿಯ ತಾರಪಾಕ ಪ್ರದೇಶದಲ್ಲಿ 5.3 ತೀವ್ರತೆಯ ಭೂಕಂಪವು 118 ಕಿಮೀ ಆಳದಲ್ಲಿ ಅಪ್ಪಳಿಸಿತು ಎಂದು ಯುರೋ-ಮೆಡಿಟರೇನಿಯನ್ ಭೂಕಂಪನ ಕೇಂದ್ರವು ತಿಳಿಸಿತ್ತು.

ಚಿಲಿಯ ನೌಕಾಪಡೆಯ ಹೈಡ್ರೋಗ್ರಾಫಿಕ್ ಮತ್ತು ಓಷಿಯಾನೋಗ್ರಾಫಿಕ್ ಸೇವೆಯು ಭೂಕಂಪದ ಗುಣಲಕ್ಷಣಗಳು ಚಿಲಿಯ ಕರಾವಳಿಯಲ್ಲಿ ಸುನಾಮಿಯ ಉತ್ಪಾದನೆಗೆ ಅಗತ್ಯವಾದ ಪರಿಸ್ಥಿತಿಗಳನ್ನು ಪೂರೈಸಿಲ್ಲ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಆಂಟೊಫಗಸ್ಟಾದಲ್ಲಿ 143.62 ಕಿ.ಮೀ ಆಳದಲ್ಲಿ 4.5 ತೀವ್ರತೆಯ ಭೂಕಂಪ ಘಟಸಿತ್ತು.
ವರ್ಲ್ಡ್ ಎಕನಾಮಿಕ್ ಫೋರಮ್ ಪ್ರಕಾರ, ಚಿಲಿ ವಿಶ್ವದ ಅತ್ಯಂತ ಭೂಕಂಪನ ಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ. ದೇಶವು ಪೆಸಿಫಿಕ್ ಮಹಾಸಾಗರದ "ರಿಂಗ್ ಆಫ್ ಫೈರ್" ನಲ್ಲಿದೆ. ಕೆಲವು ಹವಾಮಾನ ಬದಲಾವಣೆಗಳಿಂದ ಈ ಪ್ರದೇಶ ಆಗಾಗ ಭೂಕಂಪನ ಎದರಿಸುತ್ತಲೇ ಇದೆ ಎಂದು ವರದಿ ಆಗಿದೆ.
12ಕ್ಕೂ ಅಧಿಕ ಭೂಕಂಪ
ದಕ್ಷಿಣ ಅಮೆರಿಕಾದ ದೇಶವು ಕಳೆದ 50 ವರ್ಷಗಳಲ್ಲಿ ಕನಿಷ್ಠ 7ರ ತೀವ್ರತೆಯ ಸುಮಾರು 12ಕ್ಕೂ ಅಧಿಕ ಭೂಕಂಪನಗಳನ್ನು ಕಂಡಿದೆ. ಈ ಪ್ರದೇಶವು ಭೂಕಂಪನವನ್ನು ಆಗಾಗ ಎದುರಿಸುತ್ತಿದೆ.
ಇನ್ನೂ 2010 ರ ಫೆಬ್ರುವರಿಯಲ್ಲಿ ಸಹ 8.8 ತೀವ್ರತೆಯ ಭೂಕಂಪದಿಂದ ಚಿಲಿಯು ಅತ್ಯಂತ ಭೀಕರವಾದ ಭೂಕಂಪಗಳಲ್ಲಿ ಒಂದಾದ ನಂತರ 525 ಜನರು ಸಾವನ್ನಪ್ಪಿದ್ದರು. ಆಗ ಇಲ್ಲಿ ಸುಮಾರು $30 ಶತಕೋಟಿ ಮೌಲ್ಯದಷ್ಟು ಆಸ್ತಿ ಪಾಸ್ತಿ ಹಾನಿ ಆಗಿತ್ತು.
ಆಧುನಿಕ ತಂತ್ರಜ್ಞಾನ ಅಳವಡಿಕೆ
ಚಿಲಿಯ ಅಧಿಕಾರಿಗಳು ಅದರ ಭೂಕಂಪಕ್ಕೆ ಪರಿಹಾರವನ್ನು ಕಂಡುಕೊಳ್ಳಲು ನಿರಂತರವಾಗಿ ಶ್ರಮಿಸುತ್ತಲೇ ಇದ್ದಾರೆ. ಜನರ ಹಿತದೃಷ್ಟಿಯ ಸಂಬಂಧ ಭೂಕಂಪ, ಹವಾಮಾನ ನಿರ್ವಹಣೆಗಾಗಿ ನಿರ್ವಹಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದಾರೆ. ಅವರ ಒಂದಷ್ಟು ಸಂಶೋಧನೆ, ಹವಾಮಾನ ಮತ್ತು ಭೂಕಂಪ ಕುರಿತು ಅಧ್ಯಯನ ಮುಂದುವರಿದಿವೆ.












Click it and Unblock the Notifications