Breaking: 7.1 ತೀವ್ರತೆಯ ಭೂಕಂಪಕ್ಕೆ ನಡುಗಿದ ಉತ್ತರ ಫಿಲಿಪೈನ್ಸ್‌

ಉತ್ತರ ಫಿಲಿಪೈನ್ಸ್‌ನಲ್ಲಿ ಬುಧವಾರ ಭಾರಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ, ಭೂಕಂಪನದ ತೀವ್ರತೆಗೆ ಹಲವು ಕಟ್ಟಡಗಳ ಕಿಟಕಿಗಳು ಒಡೆದು ಹೋಗಿವೆ. ಭೂ ಕಂಪನ ಕೇಂದ್ರ ಬಿಂದುವಿನಿಂದ 300 ಕಿಲೋ ಮೀಟರ್ ದೂರದಲ್ಲಿರುವ ರಾಜಧಾನಿ ಮನಿಲಾದಲ್ಲಿ ಎತ್ತರದ ಕಟ್ಟಡಗಳು ಕಂಪಿಸಿವೆ.

ಆಳವಿಲ್ಲದ ಆದರೆ ಶಕ್ತಿಯುತವಾದ ಭೂಕಂಪವು ಲುಜಾನ್ ಮುಖ್ಯ ದ್ವೀಪದಲ್ಲಿ ಬೆಳಗ್ಗೆ 8:43 ರ ಸುಮಾರಿಗೆ ಪರ್ವತ ಪ್ರಾಂತ್ಯದ ಅಬ್ರಾವನ್ನು ಅಪ್ಪಳಿಸಿತು, ಆರಂಭದಲ್ಲಿ ಭೂಕಂಪನೆ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.8 ಇರುವುದು ದಾಖಲಾಗಿದೆ.

ಡೊಲೊರೆಸ್‌ನಲ್ಲಿ ಭೂಕಂಪನದ ಅನುಭವವಾದ ನಂತರ ಭಯಭೀತರಾದ ಜನರು ತಮ್ಮ ಕಟ್ಟಡಗಳ ಹೊರಗೆ ಓಡಿಹೋದರು ಮತ್ತು ಸ್ಥಳೀಯ ಮಾರುಕಟ್ಟೆಯ ಕಿಟಕಿಗಳು ಒಡೆದುಹೋದವು ಎಂದು ಪೊಲೀಸ್ ಮೇಜರ್ ಎಡ್ವಿನ್ ಸೆರ್ಗಿಯೊ ತಿಳಿಸಿದರು.

7.1 Magnitude Powerful Earth Quake Hit The Northern Philippines

"ಭೂಕಂಪವು ತುಂಬಾ ಪ್ರಬಲವಾಗಿದೆ" ಎಂದು ಸೆರ್ಗಿಯೋ ಹೇಳಿದರು, ಪೊಲೀಸ್ ಠಾಣೆಯ ಕಟ್ಟಡದಲ್ಲಿ ಸಣ್ಣ ಬಿರುಕುಗಳಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಭೂಕಂಪನದಿಂದ ಇಲ್ಲಿಯವರೆಗೆ ಯಾವುದೇ ಸಾವು-ನೋವು ಅಥವಾ ಹೆಚ್ಚಿನ ಹಾನಿ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.

ಜಪಾನ್‌ನಿಂದ ಆಗ್ನೇಯ ಏಷ್ಯಾದ ಮೂಲಕ ಮತ್ತು ಪೆಸಿಫಿಕ್ ಜಲಾನಯನ ಪ್ರದೇಶದಾದ್ಯಂತ ವ್ಯಾಪಿಸಿರುವ ತೀವ್ರವಾದ ಭೂಕಂಪನ ಚಟುವಟಿಕೆಯ ಚಾಪವಾದ ಪೆಸಿಫಿಕ್ "ರಿಂಗ್ ಆಫ್ ಫೈರ್" ನಲ್ಲಿರುವ ಸ್ಥಳದಿಂದಾಗಿ ಫಿಲಿಪೈನ್ಸ್‌ನಲ್ಲಿ ನಿಯಮಿತವಾಗಿ ಭೂಕಂಪಗಳು ಸಂಭವಿಸುತ್ತವೆ.

Recommended Video

      David Or Dravid?? ತಮ್ಮ ಹೆಸರಿನ ಬಗ್ಗೆ ಇದ್ದ ಗೊಂದಲದ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು? | OneIndia

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+