ಲೈಂಗಿಕ ದೌರ್ಜನ್ಯ: ಚೀನಾದಲ್ಲಿ ಶಿಕ್ಷಕನ ಬಂಧನ
ಬೀಜಿಂಗ್, ನ. 29: ಕರ್ನಾಟಕದಲ್ಲಿ ಶಾಲೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವುದು ವರದಿಯಾಗುತ್ತಿವೆ. ಈಗ ಚೀನಾದ ಸರದಿ.
ಝೌ ಜಿಯಾಮಿನ್ ಎಂಬ 60 ವರ್ಷ ವಯಸ್ಸಿನ ವೃದ್ಧ ಶಿಕ್ಷಕನೋರ್ವನನ್ನು ಪ್ರಾಥಮಿಕ ಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ಚೀನಾ ಸರ್ಕಾರ ಶನಿವಾರ ಪ್ರಕರಣ ಕುರಿತು ವರದಿ ಬಿಡುಗಡೆ ಮಾಡಿದೆ. ಆರೋಪಿ ಶಿಕ್ಷಕ 19 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ. [ಶಿಕ್ಷಕಿಯಿಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ]
ಈತ ಕೇಂದ್ರ ಚೀನಾದ ಹ್ಯೂಮನ್ ಪ್ರಾಂತದ ಯಿಯಾಂಗ್ ನಗರದ ಹೆಶಾನ್ ಜಿಲ್ಲೆಯ ಬಾಜಿಶಾವೋ ಟೌನ್‌ಶಿಪ್ ಶಾಲೆಯಲ್ಲಿ ಮೂರು ಮತ್ತು ನಾಲ್ಕನೇ ವರ್ಗಗಳ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯ ಕಲಿಸುತ್ತಿದ್ದ. [ಲೈಂಗಿಕ ದೌರ್ಜನ್ಯ: ಶಿಕ್ಷಕ ಪೊಲೀಸ್ ವಶಕ್ಕೆ]

ಪ್ರಕರಣದ ಹಿನ್ನೆಲೆಯಲ್ಲಿ ಶಾಲೆಯ ಪ್ರಾಂಶುಪಾಲ ಜೆಂಗ್ ಗ್ಸಿನ್ಯು ಎಂಬುವರನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾ ಶಿಕ್ಷಣ ಇಲಾಖೆ ಆದೇಶ ಜಾರಿಗೊಳಿಸಿದೆ. 8ರಿಂದ 11 ವರ್ಷ ವಯಸ್ಸಿನ 26 ಬಾಲಕಿಯರ ಗುಪ್ತಾಂಗದಲ್ಲಿ ಉರಿಯೂತ ಕಂಡುಬಂದಿದೆ. ಈ ಮಕ್ಕಳಿಗೆ ಮನಃಶಾಸ್ತ್ರಜ್ಞರಿಂದ ಚಿಕಿತ್ಸೆ ಕೊಡಿಸಲು ಸರ್ಕಾರ ಆದೇಶ ನೀಡಿದೆ ಎಂದು ಸರ್ಕಾರಿ ಸ್ವಾಮಿತ್ವದ ಗ್ಸಿನ್ಹುವಾ ನ್ಯೂಸ್ ವರದಿ ಮಾಡಿದೆ. [ವಿಬ್ ಗಯಾರ್ ಪ್ರಕರಣ: ಆರೋಪಿ ಮುಸ್ತಫಾ ಬಂಧನ]
ಚೀನಾದಲ್ಲಿ ಹೆಚ್ಚುತ್ತಿದೆ ಮಕ್ಕಳಿಗೆ ಲೈಂಗಿಕ ಕಿರುಕುಳ: ಚೀನಾದಲ್ಲಿಯೂ ಈಚೆಗೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ. ಇದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 61 ವರ್ಷದ ಪ್ರಾಥಮಿಕ ಶಾಲೆ ಶಿಕ್ಷಕನೋರ್ವ ಕೇಂದ್ರ ಹುಬೈ ಪ್ರಾಂತದಲ್ಲಿ ಅನೇಕ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತನಾಗಿದ್ದ. [ಬಾಲಕಿ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ]
ಅನೇಕ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಏಪ್ರಿಲ್ ತಿಂಗಳಲ್ಲಿ ಪೂರ್ವ ಅನ್ಹುಯಿ ಪ್ರಾಂತದಲ್ಲಿ ಓರ್ವ ಶಿಕ್ಷಕನಿಗೆ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು.
ಚೀನಾದಲ್ಲಿ 2010ರಿಂದ 2013ರ ಅವಧಿಯಲ್ಲಿ 8,069 ಜನರನ್ನು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ.












Click it and Unblock the Notifications