Earthquake: ನೇಪಾಳದಲ್ಲಿ 6.1 ತೀವ್ರತೆಯ ಭೂಕಂಪನ: ಭಾರತ, ಪಾಕಿಸ್ತಾನ, ಟಿಬೆಟ್‌ನಲ್ಲಿಯೂ ಕಂಪನ

ನೇಪಾಳದಲ್ಲಿ ಶುಕ್ರವಾರ ಬೆಳಗಿನ ಜಾವ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.1 ರಷ್ಟು ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಸಿಂಧುಪಾಲ್ಚೋಕ್ ಜಿಲ್ಲೆಯ ಭೈರವಕುಂಡ. ಈ ಸ್ಥಳ ರಾಜಧಾನಿ ಕಠ್ಮಂಡುವಿನಿಂದ ಪೂರ್ವಕ್ಕೆ ಸುಮಾರು 65 ಕಿ.ಮೀ ದೂರದಲ್ಲಿದೆ.

ಸ್ಥಳೀಯ ಸಮಯ ಬೆಳಗ್ಗೆ 2:51ಕ್ಕೆ ಭೂಕಂಪ ಸಂಭವಿಸಿದೆ. ಈ ಸಮಯದಲ್ಲಿ ಜನರು ನಿದ್ರಿಸುತ್ತಿದ್ದರು. ಭೂಕಂಪದ ಬಲವಾದ ಕಂಪನಗಳಿಂದಾಗಿ ನೇಪಾಳದ ಮಧ್ಯ ಮತ್ತು ಪೂರ್ವ ಪ್ರದೇಶಗಳಲ್ಲಿ ಭೀತಿ ಹರಡಿದೆ. ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಬಿಹಾರ ಸೇರಿದಂತೆ ಭಾರತದ ಹಲವಾರು ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ. ಟಿಬೆಟ್‌ನ ಗಡಿ ಪ್ರದೇಶಗಳಲ್ಲಿಯೂ ಭೂಕಂಪದ ಅನುಭವವಾಗಿದೆ.

6 1 Magnitude earthquake in nepal tremors in india pakistan tibet too

ಅಲ್ಲದೆ ಚೀನಾದ ಕೆಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದೆ. ಈವೆರೆಗೂ ಯಾವುದೇ ಸಾವುನೋವುಗಳು ಅಥವಾ ದೊಡ್ಡ ಹಾನಿಯ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ. ನೇಪಾಳದಲ್ಲಿ ಭೂಕಂಪ ಸಂಭವಿಸಿದ ಕೆಲವು ಗಂಟೆಗಳ ನಂತರ ಪಾಕಿಸ್ತಾನದಲ್ಲಿಯೂ ಭೂಕಂಪನದ ಅನುಭವವಾಗಿದೆ.

ನೇಪಾಳದ ನಂತರ, ಪಾಕಿಸ್ತಾನದಲ್ಲಿಯೂ ಭೂಕಂಪನ

ನೇಪಾಳದ ನಂತರ, ಪಾಕಿಸ್ತಾನದಲ್ಲಿಯೂ ಭೂಕಂಪನದ ಅನುಭವವಾಗಿದೆ. ಪಾಕಿಸ್ತಾನದಲ್ಲಿ ಬೆಳಿಗ್ಗೆ 05.14 ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಇದು ನೇಪಾಳಕ್ಕಿಂತ ಕಡಿಮೆ ಅಪಾಯಕಾರಿಯಾಗಿತ್ತು. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.5 ರಷ್ಟು ದಾಖಲಾಗಿದೆ. ಇದರ ಕೇಂದ್ರ ಪಾಕಿಸ್ತಾನದಲ್ಲಿತ್ತು. ಪಾಕಿಸ್ತಾನದಲ್ಲೂ ಭೂಕಂಪದಿಂದ ಯಾವುದೇ ಹಾನಿಯಾದ ಬಗ್ಗೆ ಯಾವುದೇ ಸುದ್ದಿ ಇಲ್ಲ. ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಭೂಕಂಪನವು ಭಾರತ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ಜನರಲ್ಲಿ ಭಯವನ್ನುಂಟುಮಾಡಿದೆ.

ಮನೆಯಿಂದ ಓಡಿ ಹೊರಬಂದ ಜನ

ನೇಪಾಳದ ಸಿಂಧುಪಾಲ್ಚೋಕ್‌ನ ಹಿರಿಯ ಅಧಿಕಾರಿ ಗಣೇಶ್ ಈ ಬಗ್ಗೆ ಮಾತನಾಡಿ, 'ಭೂಕಂಪನದಿಂದ ಭಯಗೊಂಡ ಜನರನ್ನು ನಿದ್ರೆಯಿಂದ ಎದ್ದು ಓಡಿ ಹೊರ ಬಂದಿದ್ದಾರೆ. ನಾವು ಅವಸರದಲ್ಲಿ ನಮ್ಮ ಮನೆಗಳಿಂದ ಹೊರಗೆ ಓಡಿ ಬಂದೆವು. ನಮಗೆ ಇನ್ನೂ ಯಾವುದೇ ಹಾನಿ ಅಥವಾ ಗಾಯಗಳ ವರದಿಗಳು ಬಂದಿಲ್ಲ' ಎಂದು ಅವರು ಹೇಳಿದರು. ಭೂಕಂಪನದ ಬಗ್ಗೆ ಜನರು ಎಚ್ಚರದಿಂದಿರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಪ್ರಮುಖ ಭೂಕಂಪನ ಘಟನೆಗಳ ನಂತರ ಉತ್ತರಾಘಾತಗಳು ಸಾಮಾನ್ಯ. ಇಂತಹ ಪರಿಸ್ಥಿತಿಯಲ್ಲಿ, ನೇಪಾಳಿ ಅಧಿಕಾರಿಗಳು ಜನರು ಮುನ್ನೆಚ್ಚರಿಕೆ ವಹಿಸುವಂತೆ ಕೇಳಿಕೊಂಡಿದ್ದಾರೆ.

ನೇಪಾಳ ವಿಶ್ವದ ಅತ್ಯಂತ ಸಕ್ರಿಯ ಭೂಕಂಪ ವಲಯಗಳಲ್ಲಿ ಒಂದಾಗಿದೆ. ಇದನ್ನು ಭೂಕಂಪ ವಲಯಗಳು IV ಮತ್ತು V ಎಂದು ವರ್ಗೀಕರಿಸಲಾಗಿದೆ. ಆದ್ದರಿಂದ ಭೂಕಂಪಗಳು ಇಲ್ಲಿ ನಿರಂತರ ಬೆದರಿಕೆಯನ್ನುಂಟು ಮಾಡುತ್ತಲೇ ಇರುತ್ತವೆ. 2015 ರಲ್ಲಿ ಇಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ 9,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಒಂದು ದಶಲಕ್ಷಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿ ನಾಶವಾದವು. ಈ ಇತಿಹಾಸವನ್ನು ಗಮನಿಸಿದರೆ ಮಧ್ಯಮ ಭೂಕಂಪಗಳು ಸಹ ಹಾನಿಯ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+