ಫ್ಲೋರಿಡಾದಲ್ಲಿ ಐವರನ್ನು ಹತ್ಯೆಗೈದ ಬಂದೂಕುಧಾರಿ
ಮಾನಸಿಕ ಅಸ್ವಸ್ಥನೆಂದು ಹೇಳಲಾದ ವ್ಯಕ್ತಿಯೋರ್ವ ಫ್ಲೋರಿಡಾದ ಏರ್ಪೋರ್ಟ್ ನಲ್ಲಿ ಗುಂಡಿನ ಸುರಿಮಳೆಗರೆದಿದ್ದು ಐವರು ಹತ್ಯೆಗೀಡಾಗಿದ್ದು, 8 ಜನ ಗಾಯಗೊಂಡಿದ್ದಾರೆ. ಹಂತಕನನ್ನು ಬಂಧಿಸಲಾಗಿದೆ.
ಫ್ಲೋರಿಡಾ, ಜನವರಿ, 07 : ಫ್ಲೋರಿಡಾದ ಹಾಲಿವುಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓರ್ವ ಗುಂಡಿನ ದಾಳಿ ನಡೆಸಿದ ಪರಿಣಾಮ 5 ಜನರು ಅಸುನೀಗಿ, 8 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಗಾಯಗೊಂಡ 8 ಜನರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ. ಹಂತಕನನ್ನು 26 ವರ್ಷದ ಎಸ್ಟೆಬಾನ್ ಸ್ಯಾಂಟಿಯಾಗೋ ಎಂದು ಗುರುತಿಸಲಾಗಿದೆ.

ಆತ ಇರಾಕ್ ನಲ್ಲಿ ನ್ಯಾಷನಲ್ ಗಾರ್ಡ್ ಆಗಿ ಕೆಲಸ ಮಾಡಿದ್ದ. ಆದರೆ ಆತನ ಕೆಲಸ ತೃಪ್ತಿದಾಯಕವಾಗಿಲ್ಲದಿದ್ದರಿಂದ ಆತನನ್ನು ಕೆಲಸದಿಂದ ತೆಗುದುಹಾಕಲಾಗಿತ್ತು. ಹಂತಕ ಮಾನಸಿಕ ತಜ್ಞರಿಂದ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದ ಎಂದು ಆತನ ಸಹೋದರ ಹೇಳಿಕೆ ನೀಡಿದ್ದಾನೆ.
ಟರ್ಮಿನಲ್ 2 ಬ್ಯಾಗ್ ಗಳನ್ನು ತೆಗೆದುಕೊಳ್ಳುವ ಸ್ಥಳದಲ್ಲಿ ಈ ಹತ್ಯಾಕಾಂಡ ನಡೆದಿದೆ. ಈ ಘಟನೆಯ ನಂತರ ನಿಲ್ದಾಣದಲ್ಲಿ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಘಟನೆಯ ಹಿಂದೆ ಉಗ್ರರ ಕೃತ್ಯವಿದೆಯೆ ಎಂಬುದು ತಿಳಿದುಬಂದಿಲ್ಲ.
ಇನ್ನೊಂದು ವರದಿಯ ಪ್ರಕಾರ, 37 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಿಎಚ್ಎಂಸಿ ಮತ್ತು ಮೆಮೋರಿಯಲ್ ರೀಜನಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications