ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧ ಹೋರಾಡಲು ಭಾರತಕ್ಕೆ ಕೋಟಿ ಕೊಟ್ಟ ಅಮೆರಿಕಾ!

|
Google Oneindia Kannada News

ನವದೆಹಲಿ, ಏಪ್ರಿಲ್.17: ಇಡೀ ವಿಶ್ವವೇ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಇದೀಗ ಭಾರತದ ನೆರವಿಗೆ ಧಾವಿಸಿದೆ. ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸಲಾಗು ಕೋಟಿ ಕೋಟಿ ಆರ್ಥಿಕ ನೆರವು ನೀಡಿದೆ.

ಭಾರತದಲ್ಲಿ ಸೃಷ್ಟಿಯಾಗಿರುವ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸಲು ಅಮೆರಿಕಾ 5.9 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ನೀಡಿದೆ. ಈ ಕುರಿತು ಅಮೆರಿಕಾ ಸ್ಟೇಟ್ ಡಿಪಾರ್ಟ್ ಮೆಂಟ್ ಪ್ರಕಟಣೆಯನ್ನು ಹೊರಡಿಸಿದೆ.

ಅಮೆರಿಕಾದಿಂದ WHOಗೆ ಪ್ರಶ್ನೆಗಳ ಸರಮಾಲೆ: ಕಾಸು ಕೊಡದಿರಲು ಕಾರಣ? ಅಮೆರಿಕಾದಿಂದ WHOಗೆ ಪ್ರಶ್ನೆಗಳ ಸರಮಾಲೆ: ಕಾಸು ಕೊಡದಿರಲು ಕಾರಣ?

ಕಳೆದ 20 ವರ್ಷಗಳಲ್ಲಿ ಭಾರತಕ್ಕೆ ಅಮೆರಿಕಾ 2.8 ಬಿಲಿಯನ್ ಡಾಲರ್ ಆರ್ಥಿಕ ನೆರವನ್ನು ನೀಡಿದ್ದು, ಇದರಲ್ಲಿ 1.4 ಬಿಲಿಯನ್ ಡಾಲರ್ ಹಣವು ಆರೋಗ್ಯ ವಲಯಕ್ಕೆ ನೀಡಲಾಗಿದೆ ಎಂದು ಅಮೆರಿಕಾ ತಿಳಿಸಿದೆ.

$5.9 Million Health Assistance To India From America For Fight Against Coronavirus

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಆರ್ಥಿಕ ನೆರವು:

ಭಾರತವಷ್ಟೇ ಅಲ್ಲದೇ ವಿಶ್ವವೇ ಕೊರೊನಾ ವೈರಸ್ ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿದೆ. ಇಂಥ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲು ಹಲವು ರಾಷ್ಟ್ರಗಳಿಗೆ ಅಮೆರಿಕಾ ಆರ್ಥಿಕ ನೆರವನ್ನು ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಪೈಕಿ ಅಫ್ಘಾನಿಸ್ತಾನಕ್ಕೆ 18 ಮಿಲಿಯನ್ ಡಾಲರ್, ಬಾಂಗ್ಲಾದೇಶಕ್ಕೆ 9.6 ಮಿಲಿಯನ್ ಡಾಲರ್, ಭೂತಾನ್ ಗೆ 5 ಲಕ್ಷ ಡಾಲರ್, ನೇಪಾಳ್ ಗೆ 1.8 ಮಿಲಿಯನ್ ಡಾಲರ್, ಪಾಕಿಸ್ತಾನಕ್ಕೆ 9.4 ಮಿಲಿಯನ್ ಡಾಲರ್, ಶ್ರೀಲಂಕಾಗೆ 1.3 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ನೀಡಲಾಗಿದೆ.

English summary
$5.9 Million Health Assistance To India From America For Fight Against Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X