ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆರುವಿನಲ್ಲಿ ಕಣಿವೆಗುರುಳಿದ ಡಬಲ್ ಡೆಕ್ಕರ್ ಬಸ್ಸು: 44 ಜನ ದುರ್ಮರಣ

|
Google Oneindia Kannada News

ಲಿಮಾ, ಫೆಬ್ರವರಿ 22: ಡಬಲ್ ಡೆಕ್ಕರ್ ಬಸ್ ವೊಂದು ಕಣಿವೆಗುರುಳಿದ ಪರಿಣಾಮ 44 ಜನ ದುರ್ಮರಣ ಹೊಂದಿದ ಘಟನೆ ಅಮೆರಿಕದ ಪೆರು ಗಣರಾಜ್ಯದ ಲಿಮಾ ಎಂಬಲ್ಲಿ ಬುಧವಾರ (ಫೆ.21) ನಡೆದಿದೆ.

ಪರ್ವತ ಪ್ರದೇಶದಲ್ಲಿ ಚಲಿಸುತ್ತಿದ್ದ ಬಸ್ಸು ರಸ್ತೆಯ ತಿರುವಿನಲ್ಲಿ ವೇಗವಾಗಿ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ದೊಡ್ಡ ಪರ್ವತದಿಂದ ಬಸ್ಸು ಕಣಿವೆಗೆ ಉರುಳಿದೆ. ಬಸ್ಸಿನಲ್ಲಿ ಮೊದಲು 45 ಪ್ರಯಾಣಿಕರಿದ್ದರು, ನಂತರ ಮಾರ್ಗಮಧ್ಯೆ ಕೆಲವರು ಹತ್ತಿರಬಹುದು ಎಂದು ವರದಿಗಳು ತಿಳಿಸಿವೆ. 44 ಜನ ಮೃತರಾಗಿದ್ದು, ಇನ್ನುಳಿದವರ ಬಗ್ಗೆ ಮಾಹಿತಿ ದೊರೆತಿಲ್ಲ.

ಪೆರು: 100 ಅಡಿ ಪ್ರಪಾತಕ್ಕೆ ಬಿದ್ದ ಬಸ್, ಕನಿಷ್ಠ 46 ಮಂದಿ ಸಾವು ಪೆರು: 100 ಅಡಿ ಪ್ರಪಾತಕ್ಕೆ ಬಿದ್ದ ಬಸ್, ಕನಿಷ್ಠ 46 ಮಂದಿ ಸಾವು

ಘಟನೆಯಲ್ಲಿ ಯಾರೊಬ್ಬರೂ ಬದುಕಿರುವ ಸಾಧ್ಯತೆ ತೀರಾ ಕಡಿಮೆ ಎಂದು ಪೊಲೀಸರು ತಿಳಿಸಿದ್ದು, ಮೃತದೇಹವನ್ನು ಮೇಲಕ್ಕೆತ್ತುವ ಕಾರ್ಯ ನಡೆಯುತ್ತಿದೆ.

44 dead in Peru bus accident

ಕಳೆದ ತಿಂಗಳಷ್ಟೇ ಐದೇ ಹೆದ್ದಾರಿಯಲ್ಲಿ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ 52 ಜನ ದುರ್ಮರಣಕ್ಕೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
At least 44 people were killed when a double-decker busplunged down a cliff on the Panamericana Sur Highway in Arequipa in Ocona region on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X