Russia Blast: ಪೆಟ್ರೋಲ್ ಬಂಕ್ ಬ್ಲಾಸ್ಟ್, 35 ಜನರ ಭೀಕರ ಸಾವು!

ಮಾಸ್ಕೋ: ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾಗೆ ಭೀಕರ ಆಘಾತ ಎದುರಾಗಿದೆ. ಪೆಟ್ರೋಲ್ ಬಂಕ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಸುಮಾರು 35 ಜನ ಮೃತಪಟ್ಟು, 100 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ರಷ್ಯಾದ ಪ್ರಾಂತ್ಯ ಡಾಗೆಸ್ತಾನ್‌ನ ರಾಜಧಾನಿ ಮಖಚ್ಕಲಾ ನಗರದಲ್ಲಿ ಹೀಗೆ ಭೀಕರ ಸ್ಫೋಟ ಸಂಭವಿಸಿದೆ.

ಇನ್ನು ಸ್ಫೋಟ ಸಂಭವಿಸಿದ ಮಖಚ್ಕಲಾ ನಗರದಲ್ಲಿ 6 ಲಕ್ಷಕ್ಕೂ ಹೆಚ್ಚು ಜನ ವಾಸವಿದ್ದು, ಚೆಚೆನ್ಯಾದ ಗಡಿಗೆ ಹೊಂದಿಕೊಂಡಿದೆ. ಬ್ಲಾಸ್ಟ್ ಬಳಿಕ ಬೆಂಕಿ ಸುತ್ತಮುತ್ತಲೂ ವ್ಯಾಪಿಸಿದ್ದು, ಈ ವೇಳೆ ಸುಮಾರು 35 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಗಾಯಗೊಂಡವರಿಗೆ ತಕ್ಷಣ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ, ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿಯೂ ಇದೆ. ಘಟನೆಗೆ ಕಾರಣವನ್ನ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟಿದ್ದು, ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಬಂಕ್‌ಗೆ ವ್ಯಾಪಿಸಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.

blast-in-a-petrol-bunk-at-russia

ಉಕ್ರೇನ್ ಮೇಲೆ ದಾಳಿಗೆ 3 ಮಂದಿ ಬಲಿ

ಅತ್ತ ಪೆಟ್ರೋಲ್ ಬಂಕ್ ಸ್ಫೋಟವಾಗಿ 35 ಜನ ಪ್ರಾಣ ಕಳೆದುಕೊಂಡಿದ್ದರೆ ಇತ್ತ ರಷ್ಯಾ & ಉಕ್ರೇನ್ ಮಧ್ಯೆ ಯುದ್ಧ ಮತ್ತಷ್ಟು ಭೀಕರವಾಗಿದೆ. ಹೀಗೆ ರಷ್ಯಾ ಸೇನೆ ಉಕ್ರೇನ್ ಪ್ರದೇಶ ಲುಟ್ಸ್ಕ್ ಮೇಲೆ ದಾಳಿ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಈ ದಾಳಿಗೆ ಒಟ್ಟು ಮೂವರು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಮೂಲಕ ರಷ್ಯಾ ಹಾಗೂ ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಘೋರವಾಗುತ್ತಿದೆ. ಉಕ್ರೇನ್ ಸರ್ವನಾಶಕ್ಕೆ ರಷ್ಯಾ ಪಡೆಗಳು ತೊಡೆತಟ್ಟಿ ನಿಂತಂತೆ ದಾಳಿ ನಡೆಸುತ್ತಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ.

ಯುರೋಪ್ ಸುತ್ತಲೂ ಆವರಿಸುತ್ತಿದೆ ಯುದ್ಧ

ಅತ್ತ ರಷ್ಯಾ ಮತ್ತು ಉಕ್ರೇನ್ ಜಗಳದ ನಡುವೆ ಪೋಲ್ಯಾಂಡ್ ಹಾಗೂ ಬೆಲಾರಸ್ ತಿಕ್ಕಾಟ ಕೂಡ ಶುರುವಾಗಿದೆ. ಇಬ್ಬರು ಒಬ್ಬರ ಮೇಲೆ ಒಬ್ಬರು ಕೆಂಡ ಕಾರುತ್ತಿದ್ದಾರೆ. ಪೋಲ್ಯಾಂಡ್ ಹಾಗೂ ಬೆಲಾರಸ್ ಸಂಬಂಧ ಈ ಮೊದಲಿನಿಂದ ಹಾವು & ಮುಂಗುಸಿ ರೀತಿ ಇದೆ. ಈಗ ರಷ್ಯಾ ಮತ್ತು ಉಕ್ರೇನ್ ಮಧ್ಯೆ ಬೆಂಕಿ ಧಗಧಗಿಸುವ ಹೊತ್ತಲ್ಲಿ ಬೆಲಾರಸ್ ವಿರುದ್ಧ ಪೋಲ್ಯಾಂಡ್ ಕೆಂಡಕಾರಿದೆ ಯುದ್ಧ ಸಂದೇಶ ಕಳಿಸುತ್ತಿದೆ. 10 ಸಾವಿರ ಸೈನಿಕರನ್ನು ಹೆಚ್ಚುವರಿಯಾಗಿ ನಿಯೋಜಿಸಲು ಪೋಲ್ಯಾಂಡ್ ಸೇನೆ ಮುಂದಾಗಿದ್ದು, ಪೋಲ್ಯಾಂಡ್ & ಬೆಲಾರಸ್ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

blast-in-a-petrol-bunk-at-russia

ಪೋಲ್ಯಾಂಡ್‌ಗೆ ಇಂತಹ ಕೋಪ ಏಕೆ?

ಬೆಲಾರಸ್ ದೇಶ ರಷ್ಯಾ ಪರ ನಿಂತಿದ್ದಕ್ಕೆ ಪೋಲ್ಯಾಂಡ್ ಈ ರೀತಿ ತಕರಾರು ತೆಗೆಯುತ್ತಿದೆ ಎಂಬ ಆರೋಪ ಇದೆ. ಇಂತಹ ಆರೋಪಗಳ ನಡುವೆ ರಷ್ಯಾ ಕೂಡ ರೊಚ್ಚಿಗೆದ್ದು ಬೆಲಾರಸ್‌ಗೆ ತನ್ನ ಅಧಿಕೃತ ಬೆಂಬಲ ಘೋಷಿಸಿದೆ. ಈ ಮೊದಲೇ ರಷ್ಯಾ ಅಧ್ಯಕ್ಷ ಪುಟಿನ್ ವಾರ್ನಿಂಗ್ ಕೊಟ್ಟಿದ್ದು ಅಪ್ಪಿತಪ್ಪಿ ಬೆಲಾರಸ್‌ ತಂಟೆಗೆ ಹೋದ್ರೆ ನಿಮಗೆ ಉತ್ತರ ಸಿಗಲಿದೆ ಎಂದಿದ್ದರು ಪುಟಿನ್. ಇದೀಗ ರಷ್ಯಾ ಮಾತಿಗೆ ವಿರುದ್ಧವಾಗಿ ಬೆಲಾರಸ್ ಗಡಿಯಲ್ಲಿ ಮತ್ತಷ್ಟು ಸೈನಿಕರನ್ನು ನಿಯೋಜನೆ ಮಾಡುತ್ತಿದೆ ಪೋಲ್ಯಾಂಡ್. ಹೀಗಾಗಿ ಮತ್ತೊಂದು ಮಹಾಯುದ್ಧದ ಭೀತಿಯೂ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+