ನೊಬೆಲ್ ಪ್ರಶಸ್ತಿ ಹಂಚಿಕೊಂಡ 3 ಸಂಶೋಧಕರು
ಸ್ಟಾಕ್ ಹೋಮ್, ಅಕ್ಟೋಬರ್, 05 : ಐರೀಷ್ ನ ವಿಲಿಯಮ್ ಚಾಪೆಲ್, ಚೀನಾದ ತುಯೂಯು ಮತ್ತು ಜಪಾನಿನ ಸತೋಷಿ ಒಮುರಾ ಈ ಮೂವರಿಗೆ ವೈದ್ಯ ವಿಜ್ಞಾನದಲ್ಲಿ 2015ನೇ ಸಾಲಿನ ನೊಬೆಲ್ ಪುರಸ್ಕಾರ ಲಭಿಸಿದೆ.
ಸ್ವೀಡನ್ ನ ಕೆರೊಲಿನಸ್ಕಾ ಸಂಸ್ಥೆಯು ಅಕ್ಟೋಬರ್ 5ರ ಸೋಮವಾರ ದಂದು ಏರ್ಪಡಿಸಿದ್ದ ಸಮಾರಂಭದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರನ್ನು ಘೋಷಿಸಲಾಯಿತು. ಮೂವರು ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.[ಮೆದುಳಿನ 'ಜಿಪಿಎಸ್ ' ಶೋಧಕರಿಗೆ ವೈದ್ಯ ನೊಬೆಲ್ ]

ಚೀನಾದ ತುಯೂಯು ಇವರು ಮಲೇರಿಯಾ ರೋಗ ನಿವಾರಣೆಯ ಚಿಕಿತ್ಸೆ ಕುರಿತಾಗಿ ಸಂಶೋಧನೆ ಕೈಗೊಂಡಿದ್ದಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. ಚಾಪೆಲ್ ಹಾಗೂ ಸತೋಷಿ ಒಮುರಾ 'ಅವೆರ್ ಮೆಕಟಿನ್' ಎಂಬ ಹೊಸ ಔಷಧಿ ಕಂಡು ಹಿಡಿದಿದ್ದರಿಂದ ಈ ಪುರಸ್ಕಾರ ದೊರೆತಿದೆ.
ಕಳೆದ ಬಾರಿ ವೈದ್ಯ ವಿಜ್ಞಾನದಲ್ಲಿ ಬ್ರಿಟನ್ ಅಮೆರಿಕಾ ಮೂಲದ ಸಂಶೋಧಕ ಜಾನ್ ಒ ಕೀಫ್, ನಾರ್ವೆ ಮೂಲದ ದಂಪತಿ ಮೋಜರ್ ಹಾಗೂ ಮೇ- ಬ್ರೀಟ್ ಮೋಜರ್ ಅವರು ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದರು.
ನೊಬೆಲ್ ಶಾಂತಿ ಪ್ರಶಸ್ತಿಯನ್ನು ಕಳೆದ ವರ್ಷ ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ ಪಾಕಿಸ್ತಾನದ ಯೂಸೂಫ್ ಮಲಾಲ ಹಾಗೂ ಭಾರತದ ಮಕ್ಕಳ ಹಕ್ಕುಗಳ ಆಂದೋಲನಕಾರ ಕೈಲಾಶ್ ಸತ್ಯಾರ್ಥಿ ಪಡೆದುಕೊಂಡಿದ್ದರು.
LIVE STREAM Announcement of the 2015 #NobelPrize #Medicine – join the excitement in Stockholm! https://t.co/HHbVGAdwSi
— The Nobel Prize (@NobelPrize) October 5, 2015 











Click it and Unblock the Notifications