25 ಜನರನ್ನು ಬಲಿಪಡೆದ ಪೆಟ್ರೋಲ್ ಟ್ಯಾಂಕರ್ ಅಪಘಾತ
ನೈಜೀರಿಯಾದಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡು 25 ಜನರು ಸ್ಥಳದಲ್ಲೇ ಸುಟ್ಟು ಬೂದಿಯಾಗಿದ್ದಾರೆ. ಭೀಕರ ಘಟನೆಯಲ್ಲಿ ಶಾಲಾ ಮಕ್ಕಳು ಕೂಡ ಬೆಂಕಿಗೆ ಆಹುತಿಯಾಗಿದ್ದಾರೆ.
ಪೆಟ್ರೋಲ್ ಟ್ಯಾಂಕರ್ ಬ್ರೇಕ್ ಫೇಲ್ ಆಗಿದ್ದರಿಂದ ಅಪಘಾತ ಸಂಭವಿಸಿದೆ. ಬ್ರೇಕ್ ಫೇಲ್ ಆಗಿರುವುದು ಚಾಲಕನ ಗಮನಕ್ಕೆ ಬರುತ್ತಿದ್ದಂತೆ ಟ್ಯಾಂಕರ್ ನಿಲ್ಲಿಸಲು ಸರ್ಕಸ್ ಮಾಡಿದ್ದಾನೆ. ಆದರೆ ಈ ಹೊತ್ತಲ್ಲಿ ಎದುರು ಬರುತ್ತಿದ್ದ ವಾಹನಕ್ಕೆ ಟ್ಯಾಂಕರ್ ಗುದ್ದಿದೆ. ಈ ಸಂದರ್ಭದಲ್ಲಿ ಟ್ಯಾಂಕರ್ ಮಗುಚಿ ಬಿದ್ದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲ ವಾಹನಗಳು ಭಸ್ಮವಾಗಿವೆ.
ಹಲವು ಗಂಟೆಗಳ ಕಾಲ ಬೆಂಕಿ ಹೊತ್ತಿ ಉರಿದಿದ್ದು, ದಟ್ಟ ಹೊಗೆ ಆವರಿಸಿತ್ತು. ಬೆಂಕಿ ಹತೋಟಿಗೆ ತರಲು ನೈಜೀರಿಯಾದ ಅಗ್ನಿಶಾಮಕ ಸಿಬ್ಬಂದಿ ಪರದಾಡಿದರು. ಹಲವು ಗಂಟೆಗಳ ಕಾಲ ಸರ್ಕಸ್ ಮಾಡಿದ ನಂತರ ಬೆಂಕಿ ಹಿಡಿತಕ್ಕೆ ಬಂತು. ಅಷ್ಟರಲ್ಲಾಗಲೇ ಹತ್ತಾರು ಮಂದಿಯ ಪ್ರಾಣಪಕ್ಷಿ ಹಾರಿಹೋಗಿತ್ತು.
ನೂರಾರು ಜನರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಹಲವರು ಬದುಕುಳಿಯುವ ಸಾಧ್ಯತೆ ಕಡಿಮೆ ಇದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. (ಸಾಂದರ್ಭಿಕ ಚಿತ್ರಗಳು; ಪಿಟಿಐ)

ಶಾಲೆಗೆ ಹೋಗುತ್ತಿದ್ದ ಕಂದಮ್ಮಗಳು ಬಲಿ
ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡಿರುವುದು ಬೆಳಗಿನ ಹೊತ್ತಲ್ಲಿ. ನೈಜೀರಿಯಾದ ಕೇಂದ್ರ ಭಾಗದಲ್ಲಿನ ಲೋಕೋಜಾ ಎಂಬಲ್ಲಿ ಟ್ಯಾಂಕರ್ ಬ್ಲಾಸ್ಟ್ ಆಗಿದೆ. ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ರಸ್ತೆ ದಾಟುತ್ತಿದ್ದರು. ಸ್ಫೋಟದ ತೀವ್ರತೆಗೆ ಇವರೆಲ್ಲಾ ಸುಟ್ಟು ಭಸ್ಮವಾಗಿದ್ದಾರೆ. ನೋಡ ನೋಡುತ್ತಿದ್ದಂತೆ ಬೆಂಕಿ ಕೆನ್ನಾಲಿಗೆ ಹಿಡಿತಕ್ಕೆ ಸಿಗದಷ್ಟು ವೇಗವಾಗಿ ಹಬ್ಬಿದ್ದು, ಜನ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ರಸ್ತೆ ಅಕ್ಕಪಕ್ಕ ನಿಲ್ಲಿಸಿದ್ದ ಕಾರುಗಳು ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿ ಹೋಗಿವೆ.

ತಮ್ಮವರನ್ನು ಗುರುತಿಸಲು ಪರದಾಟ
ಸ್ಫೋಟದ ತೀವ್ರತೆ ಹೇಗಿತ್ತು ಎಂದರೆ ಹಲವು ಮೃತದೇಹಗಳು ಗುರುತು ಸಿಗದಷ್ಟು ಸುಟ್ಟು ಹೋಗಿದ್ದವು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಮೃತರ ಸಂಬಂಧಿಕರು ತಮ್ಮವರ ಮೃತದೇಹವನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಅಸಹಾಯಕರಾಗಿ ಗೋಳಾಡುತ್ತಿದ್ದರು. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಪೆಟ್ರೋಲ್ ಟ್ಯಾಂಕರ್ ಚಾಲಕ ವೇಗವಾಗಿ ಟ್ಯಾಂಕರ್ ಚಾಲನೆ ಮಾಡುತ್ತಿದ ಪರಿಣಾಮ ಈ ಘಟನೆ ಸಂಭವಿಸಿದೆ. ಇದರ ಜೊತೆಗೆ ಟ್ಯಾಂಕರ್‌ನ ಬ್ರೇಕ್ ಕೂಡ ಕಟ್ ಆಗಿ ಹೋಗಿತ್ತು. ಆದರೆ ಇದೆಲ್ಲಾ ಟ್ಯಾಂಕರ್ ಚಾಲಕನ ಗಮನಕ್ಕೆ ಬರುವಷ್ಟರಲ್ಲಿ ಭೀಕರ ಸ್ಫೋಟವೊಂದು ಸಂಭವಿಸಿ, ಕನಿಷ್ಠ 25 ಜನರನ್ನು ಬಲಿಪಡೆದಿದಾಗಿತ್ತು.

ಬೆಚ್ಚಿಬಿದ್ದ ಲೋಕೋಜಾ ನಿವಾಸಿಗಳು
ಕೊರೊನಾ ಸಂಕಷ್ಟದ ನಡುವೆ ನೈಜೀರಿಯಾ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಇತ್ತೀಚೆಗೆ ನೈಜೀರಿಯಾ ಸಹಜ ಸ್ಥಿತಿಗೆ ಮರಳುತ್ತಿದೆ. ದಶಕದಲ್ಲೇ ಮಹಾಕುಸಿತ ಕಂಡಿರುವ ನೈಜೀರಿಯಾ ಲಾಕ್‌ಡೌನ್ ನಂತರ ಈಗ ತಾನೆ ವ್ಯಾಪಾರ, ವಹಿವಾಟು ಪುನಾರಂಭಿಸಿದೆ. ಆದರೆ ಈ ಹೊತ್ತಲ್ಲೇ ಪೆಟ್ರೋಲ್ ಟ್ಯಾಂಕರ್ ಸ್ಫೋಟ ಜನರನ್ನು ಕಂಗಾಲಾಗಿಸಿದೆ. ಈ ಘಟನೆ ಸಂಭವಿಸಿದಾಗ ನೈಜೀರಿಯಾದ ಲೋಕೋಜಾ ಪ್ರದೇಶ ಜನರಿಂದ ತುಂಬಿ ತುಳುಕುತ್ತಿತ್ತು. ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಮಕ್ಕಳು ರಸ್ತೆ ದಾಟುತ್ತಿದ್ದರು. ಆದರೆ ಎಲ್ಲಿಂದಲೋ ಟ್ಯಾಂಕರ್ ರೂಪದಲ್ಲಿ ಬಂದ ಜವರಾಯ ಪುಟಾಣಿ ಕಂದಮ್ಮಗಳನ್ನು ಬಲಿಪಡೆದಿದ್ದಾನೆ.

ನೈಜೀರಿಯಾದಲ್ಲಿ ಇಂತಹ ಘಟನೆಗಳು ಮಾಮೂಲಿ
ನೈಜೀರಿಯಾದಲ್ಲಿ ಸರಿಯಾದ ಸಾರಿಗೆ ನಿಯಮ ಇಲ್ಲ. ಇಲ್ಲಿ ಮನಸೋಯಿಚ್ಛೆ ವಾಹನ ಚಲಾಯಿಸುತ್ತಾರೆ. ಬ್ರೇಕ್ ಇಲ್ಲದ, ಸುಸ್ಥಿತಿಯಲ್ಲಿ ಇಲ್ಲದ ವಾಹನಗಳ ಸವಾರಿ ಮಾಮೂಲಿ. ಕಠಿಣ ಸಾರಿಗೆ ನಿಯಮ ಇಲ್ಲದ ಹಿನ್ನೆಲೆಯಲ್ಲಿ ಚಾಲಕರಿಗೂ ಕಾನೂನಿನ ಭಯವಿಲ್ಲ. ಹೀಗಾಗಿಯೇ ಪದೇ ಪದೆ ಅಪಘಾತಗಳು ಸಂಭವಿಸಿ, ವರ್ಷಕ್ಕೆ ಸಾವಿರಾರು ಜನ ಬಲಿಯಾಗುತ್ತಿದ್ದಾರೆ. ಕಳೆದ ಜೂನ್‌ನಲ್ಲೂ ಇಂತಹದ್ದೇ ಘಟನೆ ಸಂಭವಿಸಿತ್ತು. ಆಗಲೂ ಪೆಟ್ರೋಲ್ ಟ್ಯಾಂಕರ್ ಉರುಳಿ ಬಿದ್ದು, ಹತ್ತಾರು ಮಂದಿ ಭಸ್ಮವಾಗಿದ್ದರು.
-
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ? -
Chandrika Dixit: ಒಂದು ರಾತ್ರಿ ನನ್ನ ಜೊತೆ ಮಲಗಿದ್ರೆ 50 ಲಕ್ಷ ಕೊಡ್ತೇನೆ; ಚಂದ್ರಿಕಾಗೆ ಖ್ಯಾತ ಉದ್ಯಮಿ ಆಫರ್












Click it and Unblock the Notifications