ಸ್ವಿಟ್ಜರ್ ಲೆಂಡ್ ನಲ್ಲಿ ವಿಮಾನ ಅಪಘಾತ, ಇಪ್ಪತ್ತು ಮಂದಿ ಸಾವು
ಎರಡನೇ ಪ್ರಪಂಚ ಯುದ್ಧ ಕಾಲದಲ್ಲಿ ನಿರ್ಮಾಣವಾಗಿದ್ದ ವಿಮಾನವೊಂದು ಸ್ವಿಟ್ಜರ್ ಲೆಂಡ್ ನ ಪರ್ವತವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಪ್ಪತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ. ವಿಮಾನದಲ್ಲಿದ್ದ ಇಪ್ಪತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಮಾನದಲ್ಲಿ ಹನ್ನೊಂದು ಪುರುಷರು ಹಾಗೂ ಒಂಬತ್ತು ಮಹಿಳೆಯರು ಇದ್ದರು. ಆ ಪೈಕಿ ಆಸ್ಟ್ರಿಯಾದ ದಂಪತಿ ಮತ್ತು ಅವರ ಮಗ ಕೂಡ ಇದ್ದ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ದಕ್ಷಿಣಕ್ಕೆ ನೂರೆಂಬತ್ತು ಡಿಗ್ರಿಗೆ ತಿರುಗಿದ ವಿಮಾನವು ನೆಲಕ್ಕೆ ಕಲ್ಲಿನಂತೆ ಅಪ್ಪಳಿಸಿದೆ. ಆ ನಂತರ ಅಪ್ಪಳಿಸಿದ ರಭಸಕ್ಕೆ ಅವಶೇಷಗಳು ಚೆಲ್ಲಾಪೆಲ್ಲಿಯಾಗಿವೆ.

ಅಪಘಾತಕ್ಕೆ ಈಡಾದ ವಿಮಾನವು ಜೆಯು-ಏರ್ ಕಂಪೆನಿಯು ಸ್ವಿಸ್ ವಾಯು ಸೇನೆಯ ಜತೆಗೆ ನಂಟು ಹೊಂದಿದೆ. 1939ರಲ್ಲಿ ನಿರ್ಮಾಣವಾಗಿದ್ದ ನಾಲ್ಕೇ ನಾಲ್ಕು ವಿಮಾನಗಳನ್ನು ಸದ್ಯಕ್ಕೆ ಜೆಯು-ಏರ್ ಕಂಪೆನಿಯು ಬಾಡಿಗೆ ಆಧಾರದಲ್ಲಿ ನಡೆಸುತ್ತಿದೆ. ಅದರ ಪೈಲಟ್ ಗಳು ನಿವೃತ್ತ ಸೇನಾ ಸಿಬ್ಬಂದಿ ಹಾಗೂ ವೃತ್ತಿಪರ ಪೈಲಟ್ ಗಳು ಹಾಗೂ ಎಲ್ಲರೂ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುವವರು.
ಶನಿವಾರ ಮತ್ತೊಂದು ಸ್ವಿಸ್ ವಿಮಾನ ಅಪಘಾತಕ್ಕೆ ಈಡಾಗಿದ್ದು, ಅದರಲ್ಲಿ ಪ್ರವಾಸಿಗರಿದ್ದರು. ದಂಪತಿ ಮತ್ತು ಇಬ್ಬರು ಮಕ್ಕಳಿದ್ದ ವಿಮಾನವು ಕಾಡಿನಲ್ಲಿ ಅಪಘಾತವಾಗಿ ಬೆಂಕಿ ಹೊತ್ತಿಕೊಂಡಿತ್ತು. ಈ ದುರ್ಘಟನೆಯಲ್ಲಿ ಯಾರೂ ಉಳಿದಿರಲಿಲ್ಲ.












Click it and Unblock the Notifications