ಡ್ಯಾನ್ಸ್‌ ಕ್ಲಾಸ್‌ಗೆ ನುಗ್ಗಿ ಚೂರಿ ಇರಿತ: ಇಬ್ಬರು ಮಕ್ಕಳು ಸಾವು, 11 ಮಂದಿಗೆ ತೀವ್ರ ಗಾಯ

ಡಾನ್ಸ್‌ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಬಾಲಕನೊಬ್ಬ ಏಕಾಏಕಿ ನುಗ್ಗಿ ನೃತ್ಯ ತರಗತಿಯಲ್ಲಿಯೇ ಚಾಕು ಇರಿದ ಘಟನೆ ಬ್ರಿಟನ್‌ನಲ್ಲಿ ಸಂಭವಿಸಿದೆ. ಬ್ರಿಟನ್‌ ದೇಶದ ಲಿವರ್‌ಪೂಲ್‌ನಲ್ಲಿ ಈ ಘಟನೆ ನಡೆದಿದ್ದು, ಚಾಕು ಇರಿತದ ತೀವ್ರತೆಗೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 11 ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದು, ಈ ಪ್ರಕರಣದಲ್ಲಿ ಲಿವರ್‌ಪೂಲ್ ಬಳಿಯ ಗ್ರಾಮದ ಬಾಲಕನೊಬ್ಬನನ್ನು ಬಂಧಿಸಲಾಗಿದೆ. ಆರೋಪಿತ ಬಂಧಿತ ಬಾಲಕ ಅಪ್ರಾಪ್ತನಾಗಿದ್ದು, ಆತನ ವಿರುದ್ಧ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2 Children Dead And 11 Students Injured In Stabbing At Northwest Britain

ಬ್ರಿಟನ್‌ ಕಾಲಮಾನದ ಪ್ರಕಾರ ಸೋಮವಾರ ಈ ನೃತ್ಯ ಶಾಲೆಯ ವಿದ್ಯಾರ್ಥಿಗಳು ನೃತ ಪ್ರದರ್ಶನವೊಂದಕ್ಕೆ ವಿದ್ಯಾರ್ಥಿಗಳೆಲ್ಲಾ ಸೇರಿ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಶಾಲಾ ಕೊಠಡಿಗೆ ಧಾವಿಸಿದ ಆರೋಪಿ ಬಾಲಕ ನೋಡನೋಡುತ್ತಿದ್ದಂತೆ ಬಾಲಕಿಯರಿಗೆ ಚಾಕುವಿನಿಂದ ದಾಳಿ ಮಾಡಿ ಇರಿಯಲು ಆರಂಭಿಸಿದ್ದಾನೆ. ಬಾಲಕನ ವರ್ತನೆ ಕಂಡು ಗಾಬರಿಗೊಂಡ ಸ್ಥಳದಲ್ಲಿದ್ದ ವಯಸ್ಕರು ಮಕ್ಕಳನ್ನು ರಕ್ಷಣೆ ಮಾಡಲು ಮುಂದಾಗಿದ್ದು, ಅವರು ಕೂಡ ಗಾಯಗೊಂಡಿದ್ದಾರೆ.

ಕೊನೆಯಲ್ಲಿ ಹರಸಾಹಸಪಟ್ಟು ಬಾಲಕನನ್ನು ಹಿಡಿಯಲಾಗಿದ್ದು, ಘಟನೆಯಲ್ಲಿ ಗಾಯಗೊಂಡ ಎಲ್ಲಾ ಮಕ್ಕಳನ್ನೂ ಕೂಡಲೇ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಇಬ್ಬರು ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆ ತಲುಪುವ ಮುನ್ನವೇ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಇನ್ನುಳಿದ 11 ಮಕ್ಕಳಿಗೆ ಚಿಕಿತ್ಸೆ ನಡೆಯುತ್ತಿದ್ದು, ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆ ನಡೆದ ವೇಳೆ ವಿದ್ಯಾರ್ಥಿಗಳು ರಕ್ತಸಿಕ್ತರಾಗಿ ಶಾಲೆಯಿಂದ ಹೊರಗೆ ಓಡಿ ಬಂದರು. ಇದೊಂದು ಸಿನಿಮಾ ಚಿತ್ರೀಕರಣದಂತೆ ಕಾಣುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಘಟನೆಯ ಭಯಾನಕತೆಯನ್ನು ವಿವರಿಸಿದ್ದಾರೆ.

ಸದ್ಯ ಬಂಧಿತ ಬಾಲಕನನ್ನು ಬ್ರಿಟನ್‌ನ ಮರ್ಸಿಸೈಡ್ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಈ ಬಾಲಕ ಮೂಲತಃ ಬ್ರಿಟನ್‌ನ ವೇಲ್ಸ್‌ ರಾಜ್ಯದವನು ಎಂದು ತಿಳಿದು ಬಂದಿದೆ. ಈ ಕೃತ್ಯಕ್ಕೆ ಕಾರಣ ಏನು ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದೇ ವೇಳೆ, ಈ ಕೃತ್ಯದ ಹಿಂದೆ ಭಯೋತ್ಪಾದಕ ಉದ್ದೇಶ ಇರಲಿಲ್ಲ ಎಂದು ಪೊಲೀಸರು ಸ್ಥಳೀಯರಿಗೆ ಸ್ಪಷ್ಟನೆ ನೀಡಿದ್ದಾರೆ. ವಿದ್ಯಾರ್ಥಿಗಳ ಪೋಷಕರು ಬಾಲಕನಿಗೆ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+