ಇರ್ಮಾ ಚಂಡಮಾರುತಕ್ಕೆ ಸಿಲುಕಿದ್ದ 170 ಭಾರತೀಯರ ರಕ್ಷಣೆ
ಕುರಾಕೊವೊ, ಸೆಪ್ಟೆಂಬರ್ 13: ಭಯಂಕರ ಇರ್ಮಾ ಚಂಡಮಾರುತಕ್ಕೆ ಸಿಂಟ್ ಮಾರ್ಟಿನ್ ದ್ವೀಪದಲ್ಲಿ ಸಿಲುಕಿದ್ದ 170 ಭಾರತೀಯರನ್ನು ರಕ್ಷಿಸಲಾಗಿದೆ. ವಿಶೇಷ ವಿಮಾನಗಳ ಮೂಲಕ ಇವರನ್ನು ಕೆರಿಬಿಯನ್ ದ್ವೀಪ ಕುರಾಕೊವೊಗೆ ಕರೆತರಲಾಗಿದೆ.
ಈ ಸಂತಸದ ಸುದ್ದಿಯನ್ನು ವೆನಿಜುವೆಲಾದ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿ ಹಂಚಿಕೊಂಡಿದೆ.
ಮೊದಲ ತಂಡದಲ್ಲಿ 110 ಜನರನ್ನು ರಕ್ಷಣೆ ಮಾಡಲಾಗಿತ್ತು. ಇದೀಗ ಮತ್ತೊಂದು ತಂಡದಲ್ಲಿ 60 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಕರೆತರಲಾಗಿದ್ದು ಒಟ್ಟು 170 ಭಾರತೀಯರನ್ನು ಇರ್ಮಾ ಚಂಡಮಾರುತದಿಂದ ರಕ್ಷಿಸಲಾಗಿದೆ.

ಭಾರತೀಯರ ಜತೆ ಇತರರ ರಕ್ಷಣೆ
ಭಾರತೀಯ ರಾಯಭಾರ ಕಚೇರಿ ವಿಶೇಷ ವಿಮಾನದಲ್ಲಿ ಭಾರತೀಯರನ್ನು ಮಾತ್ರ ರಕ್ಷಣೆ ಮಾಡಿಲ್ಲ. ಭಾರತೀಯರ ಜತೆ ಎರಡನೇ ತಂಡದಲ್ಲಿ ಬೇರೆ ದೇಶದ 30 ಪ್ರಯಾಣಿಕರನ್ನೂ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದೆ.
Persons evacuated by Gol from St. Maarten arrive in Curaçao @SushmaSwaraj @Gen_VKSingh @MEAIndia pic.twitter.com/3rv7R1T8TI
— India in Venezuela (@IndiaVenezuela) September 12, 2017
ಸಿಂಟ್ ಮಾರ್ಟಿನ್ ದ್ವೀಪದ ಆಡಳಿತವನ್ನು ಫ್ರಾನ್ಸ್ ಮತ್ತು ನೆದರ್ಲೆಂಡ್ ಜಂಟಿಯಾಗಿ ನೋಡಿಕೊಳ್ಳುತ್ತಿವೆ. ಇದು ಇರ್ಮಾ ಚಂಡಮಾರುತದ ದಾರಿಗೆ ಅಡ್ಡಲಾಗಿದ್ದು, ಭಾರೀ ಹಾನಿಗೆ ಒಳಗಾಗಿತ್ತು. ಇಲ್ಲಿನ ನಾಗರಿಕರು ನಿರಾಶ್ರಿತರಾಗಿ ಬೀದಿಗೆ ಬಂದಿದ್ದರು.












Click it and Unblock the Notifications