ತಾಲಿಬಾನ್ ತಕ್ಕಡಿಯಲ್ಲಿ ಸಿಲುಕಿ ನರಳುತ್ತಿದೆ ಹೆಣ್ಣುಮಕ್ಕಳ ಬಾಳು...

ತಾಲಿಬಾನ್ ಉಗ್ರರ ಕೈಗೆ ಅಫ್ಘಾನಿಸ್ತಾನದ ಆಡಳಿತ ಸಿಕ್ಕ ನಂತರ ಪರಿಸ್ಥಿತಿ ಭೀಕರವಾಗಿದ್ದು, ಜನರು ನರಳಾಡುವ ಸ್ಥಿತಿ ಬಂದಿದೆ. ಅದರಲ್ಲೂ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದಲ್ಲಿ ಹೆಣ್ಣು ಮಕ್ಕಳ ಬಾಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿ ನರಳುವಂತಾಗಿದೆ. ಹೀಗಿದ್ದಾಗಲೇ ಉಗ್ರರ ಆಡಳಿತದ ಬಗ್ಗೆ ಇದೀಗ 'ಯುನೆಸ್ಕೊ' ಕೂಡ ರೊಚ್ಚಿಗೆದ್ದಿದೆ. ಹಾಗಾದರೆ ದಿಢೀರ್ ಯುನೆಸ್ಕೊ ರೊಚ್ಚಿಗೇಳಲು ಕಾರಣ ಏನು? ಬನ್ನಿ ತಿಳಿಯೋಣ.

ತಾಲಿಬಾನ್ ಉಗ್ರರ ಆಡಳಿತ ಶುರುವಾದ ನಂತರ ಅಫ್ಘಾನಿಸ್ತಾನ ಅಕ್ಷರಶಃ ನರಕವಾಗಿದೆ. ಅಲ್ಲಿನ ಪರಿಸ್ಥಿತಿ ಹೇಗಾಗಿದೆ ಎಂದರೆ ಅಫ್ಘಾನಿಸ್ತಾನ ದೇಶದಲ್ಲಿ ನೆಮ್ಮದಿಯಾಗಿ ಬದುಕುವುದು ಬಿಡಿ, ನೆಮ್ಮದಿಯಾಗಿ ಉಸಿರಾಡುವುದು ಕೂಡ ಕಷ್ಟವಾಗುತ್ತಿದೆ. ಅದರಲ್ಲೂ ಮಹಿಳೆಯರಿಗೆ ಅಲ್ಲಿ ಯಾವುದೇ ರೀತಿ ಬೆಲೆ ಕೂಡ ಇಲ್ಲ. ಚಿಕ್ಕ ಚಿಕ್ಕ ಹುಡುಗಿಯರನ್ನು ಜೈಲಿಗೆ ಹಾಕಿದಂತೆ ಈಗ ಅಫ್ಘಾನಿಸ್ತಾನ ದೇಶದಲ್ಲಿ ಬೆಳೆಸುತ್ತಿದ್ದಾರೆ. ಹೀಗಿದ್ದಾಗಲೇ, ತಾಲಿಬಾನ್ ಸರ್ಕಾರದ ವಿರುದ್ಧ 'ಯುನೆಸ್ಕೊ' ರೊಚ್ಚಿಗೆದ್ದಿದೆ.

14 Lakh Girls Are Now Suffering Without Education After Taliban New Rule

14 ಲಕ್ಷ ಹೆಣ್ಣು ಮಕ್ಕಳು...

ಅಂದಹಾಗೆ ಕೆಲವು ವರ್ಷಗಳ ಹಿಂದೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದನ್ನು ತಾಲಿಬಾನ್‌ ಸರ್ಕಾರ ಕಾನೂನು ಬಾಹೀರ ಎಂದು ಕರೆದಿತ್ತು. ಇದೇ ಕಾರಣಕ್ಕೆ ಅಫ್ಘಾನಿಸ್ತಾನ ದೇಶದಲ್ಲಿ ಇದೀಗ ಸುಮಾರು 14 ಲಕ್ಷ ಹೆಣ್ಣು ಮಕ್ಕಳು ಶಿಕ್ಷಣ ಇಲ್ಲದೆ ನರಳುವ ಪರಿಸ್ಥಿತಿ ಬಂದಿದೆ. ಈ ವಿಚಾರವಾಗಿ ಈಗ, ಸ್ವತಃ ವಿಶ್ವಸಂಸ್ಥೆಯ ಅಂಗ ಸಂಸ್ಥೆ 'ಯುನೆಸ್ಕೊ' ಆಕ್ರೋಶ ವ್ಯಕ್ತಪಡಿಸಿದೆ.

ಹೆಣ್ಣು ಮಕ್ಕಳು ಪ್ರೌಢ & ಉನ್ನತ ಶಿಕ್ಷಣ ಪಡೆಯುವುದಕ್ಕೆ ತಾಲಿಬಾನಿ ಉಗ್ರರು ನಿಷೇಧ ಕೂಡ ಹೇರಿದ್ದಾರೆ. 2021 ರಲ್ಲಿ ಅಮೆರಿಕ ಮಿಲಿಟರಿ ಓಡಿ ಹೋದ ನಂತರ, ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ದೇಶದಲ್ಲಿ ಅಧಿಕಾರ ಸ್ಥಾಪನೆ ಮಾಡಿದರು. ಆ ನಂತರ ಶುರುವಾಗಿದ್ದೇ ನಿಜವಾದ ನರಕ. ದಿನಕ್ಕೊಂದು ವಿಚಿತ್ರ & ಉಗ್ರ ಕಾನೂನು ತರುತ್ತಿರುವ ತಾಲಿಬಾನಿಗಳು, ಹೆಣ್ಣು ಮಕ್ಕಳು ಪಾರ್ಕ್‌ಗೆ ಬರುವಂತಿಲ್ಲ, ಸಿನಿಮಾ ನೋಡುವಂತೆ ಇಲ್ಲ, ಬ್ಯೂಟಿ ಪಾರ್ಲರ್‌ಗೆ ಹೋಗುವಂತೆ ಇಲ್ಲ ಎಂಬ ಕಾನೂನುಗಳನ್ನು ಜಾರಿಗೆ ತಂದಿದ್ದರು. ಇದೆಲ್ಲಕ್ಕಿಂತ ಹೆಚ್ಚಾಗಿ ಹೆಣ್ಣು ಮಕ್ಕಳ ಶಿಕ್ಷಣ ಮೇಲೆ ಈ ರೀತಿ ತಾಲಿಬಾನಿಗಳು ಹೇರಿದ ನಿಷೇಧ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಉಗ್ರರ ವಿರುದ್ಧ ರೊಚ್ಚಿಗೆದ್ದ ಜಗತ್ತು!

ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ದೇಶದ ಅಧಿಕಾರ ಹಿಡಿದ ತಕ್ಷಣ, ಮೊದಲು ಮಾಡಿದ್ದ ಕೆಲಸ ಅಂದ್ರೆ ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನ ಟಾರ್ಗೆಟ್ ಮಾಡಿದ್ದು. ಆರಂಭದಲ್ಲೇ ಮಹಿಳೆಯರನ್ನು ಟಾರ್ಗೆಟ್ ಮಾಡಿದ್ದರು ತಾಲಿಬಾನಿಗಳು. ಆ ನಂತರ ಕೂಡ, ತಾಲಿಬಾನ್ ಅರ್ಭಟ ಕಡಿಮೆ ಮಾಡಲಿಲ್ಲ. ಹೀಗೆ ತಾಲಿಬಾನ್ ಉಗ್ರರು ಕೈಗೊಂಡ ನಿರ್ಧಾರಗಳ ಫಲವಾಗಿ ಇದೀಗ ಅಫ್ಘಾನಿಸ್ತಾನ ಶೈಕ್ಷಣಿಕವಾಗಿ ತೀರಾ ಹಿಂದೆ ಉಳಿಯುವ ಪರಿಸ್ಥಿತಿ ಬಂದಿದೆ. ಅಲ್ಲದೆ ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ಕೂಡ ವ್ಯಕ್ತವಾಗುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂದು ಆಗ್ರಹಿಸುತ್ತಿದ್ದಾರೆ ಜನ. ಆದರೆ ತಾಲಿಬಾನ್ ಉಗ್ರರ ಸರ್ಕಾರ ಮಾತ್ರ ಯಾರ ಮಾತನ್ನೂ ಕೇಳುತ್ತಿಲ್ಲ, ಕೇರ್ ಕೂಡ ಮಾಡುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+