ಢಾಕಾದ ವಾಣಿಜ್ಯ ಕಟ್ಟಡದಲ್ಲಿ ಸ್ಫೋಟ: ಕನಿಷ್ಠ 14 ಮಂದಿ ಬಲಿ, ನೂರಾರು ಜನರಿಗೆ ಗಾಯ- ವರದಿ, ವಿವರ
ಬಾಂಗ್ಲಾ ದೇಶದ ರಾಜಧಾನಿ ಢಾಕಾದಲ್ಲಿನ ವಾಣಿಜ್ಯ ಕಟ್ಟಡವೊಂದರಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಢಾಕಾ, ಮಾರ್ಚ್ 07: ಬಾಂಗ್ಲಾ ದೇಶದ ರಾಜಧಾನಿ ಢಾಕಾದಲ್ಲಿನ ವಾಣಿಜ್ಯ ಕಟ್ಟಡವೊಂದರಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಸಂಜೆ 4:45 ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ 'ಕ್ಸಿನ್ಹುವಾ' ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಬಸ್ ಕೌಂಟರ್ ಬಳಿ ಈ ಸ್ಪೋಟ ಸಂಭವಿಸಿದೆ.
'ಸ್ಫೋಟದ ಸ್ಥಳದಿಂದ ಏಳು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಅವರು ಹೇಳಿದರು.

ಆಸ್ಪತ್ರೆಯಲ್ಲಿ ಕನಿಷ್ಠ ನೂರಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವಾರು ಜನರು ತೀವ್ರ ನಿಗಾ ಘಟಕದಲ್ಲಿದ್ದಾರೆ ಎಂದು ಅವರು ಹೇಳಿದರು.
Bangladesh: At least four people were killed and close to 100 people injured in an explosion that took place near the BTRC bus counter in the Gulistan area of Old Dhaka. The incident took place around 5 p.m. local time in a multi-storied building in Gulistan area of #Dhaka. pic.twitter.com/pCddFgMsh2
— All India Radio News (@airnewsalerts) March 7, 2023
ಬ್ಯಾಂಕ್ ಶಾಖೆ, ಪಿಂಗಾಣಿ ಮತ್ತು ನೈರ್ಮಲ್ಯ ವಸ್ತುಗಳ ಅಂಗಡಿಗಳನ್ನು ಹೊಂದಿರುವ ಐದು ಅಂತಸ್ತಿನ ಕಟ್ಟಡದಲ್ಲಿ ಈ ಸ್ಪೋಟ ಸಂಭವಿಸಿದೆ. ದುರಂತದ ಸ್ಥಳದಲ್ಲಿ ಕನಿಷ್ಠ ಏಳು ಅಗ್ನಿಶಾಮಕ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿ ಹೇಳಿದರು.
ಸ್ಫೋಟದ ಕಾರಣವನ್ನು ತಕ್ಷಣವೇ ತಿಳಿಯಲು ಸಾಧ್ಯವಿಲ್ಲ ಎಂದು 'ಕ್ಸಿನ್ಹುವಾ' ಸುದ್ದಿ ಸಂಸ್ಥೆ ವರದಿ ಮಾಡಿದೆ.

ವರದಿಗಳ ಪ್ರಕಾರ, ಕಟ್ಟಡದ ನೆಲಮಾಳಿಗೆಯಲ್ಲಿ ಹಲವಾರು ಜನರು ಸಿಲುಕಿರುವ ಶಂಕೆ ಇದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಕ್ಷಿಪ್ರ ಕಾರ್ಯಾಚರಣೆ ಬೆಟಾಲಿಯನ್‌ನ ಬಾಂಬ್ ನಿಷ್ಕ್ರಿಯ ಘಟಕವು ಕಟ್ಟಡಗಳನ್ನು ಪರಿಶೀಲಿಸಲು ಸ್ಥಳಕ್ಕೆ ದಾವಿಸಿದೆ.
ಗಾಯಾಳುಗಳನ್ನು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಬಚ್ಚು ಮಿಯಾ ಹೇಳಿದ್ದಾರೆ. ಇವರೆಲ್ಲರೂ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸ್ಫೋಟದಿಂದ ಬ್ಯಾಂಕಿನ ಗಾಜಿನ ಗೋಡೆಗಳು ಒಡೆದು ಹೋಗಿವೆ. ರಸ್ತೆ ಎದುರುಬದಿಯಲ್ಲಿ ನಿಂತಿದ್ದ ಬಸ್‌ಗೂ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.












Click it and Unblock the Notifications