ಫ್ರಾನ್ಸ್ : ಬಾರ್ ನಲ್ಲಿ ಬೆಂಕಿ, 13 ಮಂದಿ ಸಾವು

Posted By:
Subscribe to Oneindia Kannada

ಪ್ಯಾರೀಸ್, ಆಗಸ್ಟ್ 06: ಹುಟ್ಟುಹಬ್ಬ ಸಮಾರಂಭ ಆಚರಿಸುತ್ತಿದ್ದ ಬಾರ್ ವೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ 13 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ನೊರ್ಮಾಂಡಿಯ ರೊಯಿನ್ ನಲ್ಲಿರುವ ಕ್ಯೂಬಾ ಲಿಬ್ರೆ ಕ್ಲಬ್ ನಲ್ಲಿ ಸ್ಥಳೀಯ ಕಾಲಮಾನ ಮಧ್ಯರಾತ್ರಿ ವೇಳೆಗೆ ಬೆಂಕಿ ಆಕಸ್ಮಿಕ ಸಂಭವಿಸಿದೆ ಎಂದು ಎನ್ ಬಿಸಿ ನ್ಯೂಸ್ ವರದಿ ಮಾಡಿದೆ. [ಫ್ರಾನ್ಸ್‌ನಲ್ಲಿ ಚರ್ಚ್‌ಗೆ ನುಗ್ಗಿದ ಶಂಕಿತ ಉಗ್ರರು]

13 Dead After Fire at Bar in Rouen, France: Police

ಮೃತರೆಲ್ಲರೂ 18 ರಿಂದ 25 ವರ್ಷ ವಯಸ್ಸಿನ ಆಸುಪಾಸಿನವರು ಎಂದು ತಿಳಿದು ಬಂದಿದೆ.

ಈ ದುರ್ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ.ಫ್ರಾನ್ಸ್​ನ ಗೃಹ ಸಚಿವ ಬೆರ್ನಾಡ್ ಕ್ಯಾಜೆನಿಯುವೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಪರಿಶೀಲನೆ ನಡೆಸಿದ್ದಾರೆ. 50ಕ್ಕೂ ಅಗ್ನಿಶಾಮಕ ಸಿಬ್ಬಂದಿ ಶ್ರಮಿಸಿ ಕೂಡಲೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. [ದಾಳಿ ಮಾಡಲು ವಾಹನಗಳ ಬಳಕೆ, ಉಗ್ರರ ಹೊಸ ತಂತ್ರ?]

ಮೂಲಗಳ ಪ್ರಕಾರ ಬರ್ತ್​ಡೇ ಪಾರ್ಟಿಯಲ್ಲಿ ಬಳಸಲಾದ ಬ್ಲೇಜ್​ನ ಬೆಂಕಿಯ ಕಿಡಿಯಿಂದಾಗಿ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
At least 13 people were killed after a fire broke out in bar in France, police said early Saturday local time. The cause of the fire at the Cuba Libre club in Rouen, Normandy, is believed is have been accidental, a Rouen police commander told NBC News.
Please Wait while comments are loading...