ಬುರ್ಕಿನಾ ಪಾಸೋ ಜೈಲಿನಲ್ಲೇ ಸತ್ತರು 12 ಐಸಿಸ್ ಉಗ್ರರು
ಬುರ್ಕಿನಾ ಪಾಸೋ, ಮೇ 14: ಆಫ್ರಿಕಾ ಖಂಡದ ದೇಶವಾದ ಬುರ್ಕಿನಾ ಪಾಸೋದಲ್ಲಿ ಸೇನಾ ಪಡೆಗಳಿಂದ ಬಂಧನಕ್ಕೊಳಗಾಗಿದ್ದ 12 ಉಗ್ರರು ಜೈಲಿನಲ್ಲಿಯೇ ಮೃತಪಟ್ಟಿದ್ದಾರೆ.
ಇತ್ತೀಚೆಗೆ ಬುರ್ಕಿನಾ ಪಾಸೋದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಹಾಗೂ ಅಲ್ ಕೈದಾ ಉಗ್ರರು ಉಪಟಳವನ್ನುಂಟು ಮಾಡುತ್ತಿದ್ದು, ಉಗ್ರರ ಮಟ್ಟಹಾಕಲು ಅಲ್ಲಿನ ಸೇನಾಪಡೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ.
ಈ ಎರಡು ಉಗ್ರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂಬ ಆರೋಪದ ಮೇಲೆ ಕಳೆದ ಸೋಮವಾರ 31 ಉಗ್ರರನ್ನು ಬಂಧಿಸಿ, ಜೈಲಿನಲ್ಲಿ ಇಡಲಾಗಿತ್ತು. ಅದರಲ್ಲಿ ಬುಧವಾರ ರಾತ್ರಿ 12 ಉಗ್ರರು ಏಕಾಏಕಿ ಜೈಲಿನಲ್ಲಿ ಮೃತಪಟ್ಟಿದ್ದಾರೆ. ಉಗ್ರರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಬಿಬಿಸಿ ವರದಿ ಮಾಡಿದೆ.

ಇತ್ತೀಚೆಗೆ ಬುರ್ಕಿನಾ ಪಾಸೋದಲ್ಲಿ ಐಎಸ್ ಬೆಂಬಲಿತ ಉಗ್ರರು ಸುಮಾರು 300 ಕ್ಕೂ ಹೆಚ್ಚು ನಾಗರಿಕರನ್ನು ಹತ್ಯೆ ಮಾಡಿದ್ದು, ಸೇನಾ ಪಡೆಯೂ 100 ಕ್ಕೂ ಹೆಚ್ಚು ಉಗ್ರರನ್ನು ಹಾಗೂ ಅವರಿಗೆ ಬೆಂಬಲ ನೀಡುತ್ತಿರರನ್ನು ಹತ್ಯೆಗೈದಿದೆ. ದಕ್ಷಿಣ ಆಫ್ರಿಕಾಕ್ಕೆ ಹೊಂದಿಕೊಂಡಿರುವ ಈ ಪುಟ್ಟ ರಾಷ್ಟ್ರಕ್ಕೆ ಐಎಸ್ ಉಗ್ರರ ಕರಿನೆರಳು ಬಿದ್ದಿದೆ.












Click it and Unblock the Notifications