ಲಂಡನ್ ಕ್ಲಬ್ ನಲ್ಲಿ ಹನ್ನೆರಡು ಮಂದಿ ಮೇಲೆ Acid ದಾಳಿ

Posted By:
Subscribe to Oneindia Kannada

ಲಂಡನ್, ಏಪ್ರಿಲ್ 17: ಈಸ್ಟರ್ ಸಂಜೆಯಂದು ತುಂಬ ಜನ ಸೇರಿದ್ದ ಕ್ಲಬ್ ನಲ್ಲಿ ವ್ಯಕ್ತಿಯೊಬ್ಬ ಆಸಿಡ್ ನಂಥ ವಸ್ತು ಎರಚಿ ಕನಿಷ್ಠ ಹನ್ನೆರಡು ಮಂದಿಗೆ ಸುಟ್ಟ ಗಾಯಗಳಾಗಿವೆ. ಈ ಘಟನೆ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಎರಡು ಗುಂಪಿನ ಮಧ್ಯೆ ಜಗಳ ಅರಂಭವಾಗಿದೆ. ಆಗ ಇಬ್ಬರ ಮೇಲೆ ವ್ಯಕ್ತಿಯೊಬ್ಬ ಆಸಿಡ್ ಎರಚಿದ್ದಾನೆ.

ಆ ನಂತರ ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರನ್ನು ಸ್ಥಳಾಂತರಿಸಲಾಗಿದೆ. ಒಟ್ಟಾರೆ ಹನ್ನೆರಡು ಮಂದಿ ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹತ್ತು ಮಂದಿಯನ್ನು ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ದರೆ, ಇಬ್ಬರು ಸ್ವತಃ ದಾಖಲಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.[ಲಂಡನ್ ಉಗ್ರರ ದಾಳಿಗೆ ಪೊಲೀಸ್ ಅಧಿಕಾರಿ, ಮಹಿಳೆ ಸೇರಿ 4 ಬಲಿ]

Acid attack

ಆಸ್ಪತ್ರೆಗೆ ದಾಖಲಾದವರ ಪೈಕಿ ಇಬ್ಬರ ಪೈಕಿ ಸ್ಥಿತಿ ಗಂಭೀರವಾಗಿದೆ. ಆದರೆ ಸ್ಥಿರವಾಗಿದೆ. ಉಳಿದವರಿಗೆ ಸಣ್ಣ ಮಟ್ಟದ ಗಾಯಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. "ಪಾರ್ಟಿ ಜಾಗದಲ್ಲಿ ಎರಡು ಗುಂಪಿನ ಮಧ್ಯೆ ನಡೆದ ಜಗಳ ತಾರಕಕ್ಕೇರಿ ಆಸಿಡ್ ನಂಥ ಹಾನಿಕಾರಕ ವಸ್ತುವನ್ನು ಇಬ್ಬರ ಮೇಲೆ ಎರಚಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
At least 12 people suffered burns after a man sprayed a corrosive substance inside a packed club in east London on Easter evening, prompting authorities to launch an investigation into the incident.
Please Wait while comments are loading...