ಅಚ್ಚರಿ ಸುದ್ದಿ: ಡೆಡ್ಲಿ ಕೊರೊನಾ ವಿರುದ್ಧ ಹೋರಾಡಿ ಸಾವನ್ನೇ ಗೆದ್ದ 100ರ ಅಜ್ಜ!

ಮಾರಣಾಂತಿಕ ಕೊರೊನಾ ವೈರಸ್ ನಿಂದ ಚೀನಾದಲ್ಲಿ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ವಿಶ್ವದಾದ್ಯಂತ ಕೊರೊನಾ ಭೀತಿ ಆವರಿಸಿದೆ. ಹೀಗಿರುವಾಗಲೇ, ಒಂದು ಅಚ್ಚರಿ ಸುದ್ದಿ ಲಭಿಸಿದೆ.

''ಕೊರೊನಾ ವೈರಸ್ ಸೋಂಕು ತಗುಲಿದರೆ ಸಾವು ಖಚಿತ'' ಅಂತ ಆತಂಕ ಪಡುತ್ತಿರುವವರು ಒಮ್ಮೆ ಈ ಸುದ್ದಿಯನ್ನ ತಪ್ಪದೆ ಓದಿ. ಕೊರೊನಾ ವೈರಸ್ ಸೋಂಕಿತ 100 ವರ್ಷ ವಯಸ್ಸಿನ ಓರ್ವ ವೃದ್ಧ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.!

ಹೌದು, ವಯಸ್ಸಿನಲ್ಲಿ ಸೆಂಚುರಿ ದಾಟಿರುವ ಚೀನಾದ ಅಜ್ಜ ಕ್ಸಿಹುವಾ ಡೆಡ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಿ ಸಾವನ್ನೇ ಗೆದ್ದು ಬಂದಿದ್ದಾರೆ.

13 ದಿನಗಳ ಕಾಲ ಚಿಕಿತ್ಸೆ

13 ದಿನಗಳ ಕಾಲ ಚಿಕಿತ್ಸೆ

ಚೀನಾದ ವುಹಾನ್ ನಲ್ಲಿ 100 ವರ್ಷ ವಯಸ್ಸಿನ ವೃದ್ಧ ಕ್ಸಿಹುವಾ ರವರಿಗೆ ಡೆಡ್ಲಿ ಕೊರೊನಾ ವೈರಸ್ ಸೋಂಕು ತಗುಲಿತ್ತು. ಪರಿಣಾಮ, ಫೆಬ್ರವರಿ 24 ರಂದು ವುಹಾನ್ ನ ಹ್ಯುಬೇ ದಲ್ಲಿರುವ ಮೆಟರ್ನಿಟಿ ಆಂಡ್ ಚೈಲ್ಡ್ ಹೆಲ್ತ್ ಕೇರ್ ಆಸ್ಪತ್ರೆಗೆ ಅಜ್ಜ ಕ್ಸಿಹುವಾ ದಾಖಲಾಗಿದ್ದರು. ಒಟ್ಟು 13 ದಿನಗಳ ಕಾಲ ಚಿಕಿತ್ಸೆ ಪಡೆದ ಕ್ಸಿಹುವಾ ಸಂಪೂರ್ಣವಾಗಿ ಗುಣಮುಖರಾಗಿ ಮೊನ್ನೆ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಅಚ್ಚರಿಯೇ ಸರಿ

ಅಚ್ಚರಿಯೇ ಸರಿ

ಹಾಗ್ನೋಡಿದ್ರೆ, ಚೀನಾದ ವುಹಾನ್ ನಲ್ಲೇ ನೋವೆಲ್ ಕೊರೊನಾ ವೈರಸ್ ಮೊದಲು ವ್ಯಾಪಕವಾಗಿ ಹರಡಿ, ಹಲವು ಜನರನ್ನು ಬಲಿ ಪಡೆದಿದ್ದು. ಇದೀಗ ಅದೇ ಜಾಗದಲ್ಲೇ 100 ವರ್ಷ ವಯಸ್ಸಿನ ಅಜ್ಜ ಕ್ಸಿಹುವಾ ಕೊರೊನಾ ವೈರಸ್ ವಿರುದ್ಧ ಹೋರಾಡಿ ಸಾವಿನ್ನೇ ಗೆದ್ದಿರುವುದು ಅಚ್ಚರಿಯೇ ಸರಿ.

ಆಲ್ಝೈಮರ್ಸ್ ನಿಂದ ಬಳಲುತ್ತಿರುವ ಕ್ಸಿಹುವಾ

ಆಲ್ಝೈಮರ್ಸ್ ನಿಂದ ಬಳಲುತ್ತಿರುವ ಕ್ಸಿಹುವಾ

ಅಸಲಿಗೆ, 100 ವರ್ಷ ವಯಸ್ಸಿನ ಕ್ಸಿಹುವಾ ರವರಿಗೆ ಅಲ್ಝೈಮರ್ಸ್, ಹೈಪರ್ ಟೆನ್ಷನ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಕೂಡ ಇದೆ. ಹೀಗಿದ್ದರೂ, ನೋವೆಲ್ ಕೊರೊನಾ ವೈರಸ್ ಸೋಂಕಿನಿಂದ ಕ್ಸಿಹುವಾ ಚೇತರಿಸಿಕೊಂಡಿದ್ದಾರೆ. ಕ್ಸಿಹುವಾಗೆ ಆಂಟಿ-ವೈರಲ್ ಡ್ರಗ್ಸ್, ಪ್ಲಾಸ್ಮಾ ಟ್ರಾನ್ಸ್ ಫ್ಯೂಶನ್ಸ್ ಮತ್ತು ಸಾಂಪ್ರದಾಯಿಕ ಚೀನಾ ಔಷಧಿಗಳನ್ನು ಚಿಕಿತ್ಸೆ ವೇಳೆ ನೀಡಲಾಗಿತ್ತು.

ಹಲವರು ಚೇತರಿಸಿಕೊಂಡಿದ್ದಾರೆ

ಹಲವರು ಚೇತರಿಸಿಕೊಂಡಿದ್ದಾರೆ

ಇಲ್ಲಿಯವರೆಗೂ ಚೀನಾದಲ್ಲಿ 80,735 ಕೊರೊನಾ ವೈರಸ್ ಪ್ರಕರಣಗಳು ಪತ್ತೆ ಆಗಿವೆ. ಅದರಲ್ಲಿ 58,600 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ವಿಶ್ವದಾದ್ಯಂತ 62,278 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಆದ್ರೆ, ಗುಣಮುಖರಾದ ಕೆಲವರಲ್ಲಿ ಮಾತ್ರ ಕೊರೊನಾ ವೈರಸ್ ಸೋಂಕು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+