ಇಂಡೋನೇಷ್ಯಾವನ್ನು ಕಾಡಿರುವ ಅತಿ ಭಯಂಕರ 10 ಭೂಕಂಪಗಳ ಪಟ್ಟಿ

ಜಕಾರ್ತಾ, ಸೆಪ್ಟೆಂಬರ್ 28: ಇಂಡೋನೇಷ್ಯಾದಲ್ಲಿ ಇಂದು ಭಾರಿ ಭೂಕಂಪ ಮತ್ತು ಸುನಾಮಿ ಅಪ್ಪಳಿಸಿದೆ. ಕೆಲವು ತಿಂಗಳುಗಳ ಹಿಂದೆ ಸಹ ಇದೇ ಇಂಡೋನೇಶ್ಯಾದಲ್ಲಿ ಭೂಕಂಪದ ವರದಿ ಆಗಿತ್ತು. ಆದರೆ ಇಂದಾಗಿರುವುದು ಬಹಳ ದೊಡ್ಡ ಪ್ರಮಾಣದ ಭೂಕಂಪ.

ಇಂಡೋನೇಷ್ಯಾ ಹಲವು ಬಾರಿ ಭೂಕಂಪದಂತಹಾ ನೈಸರ್ಗಿಕ ವಿಕೋಪಗಳನ್ನು ಎದುರಿಸಿದೆ. ಪ್ರತಿ ಬಾರಿಯೂ ಪುಟಿದೆದ್ದಿದೆ ಆದರೆ ಪ್ರಕೃತಿಯ ಕೋಪ ಮಾತ್ರ ಆ ಪುಟ್ಟ ದ್ವೀಪ ದೇಶದ ಮೇಲೆ ಕಡಿಮೆ ಆಗುತ್ತಲೇ ಇಲ್ಲ.

 10 Biggest Earthquakes which hit Indonesia

ಇಂಡೋನೇಷ್ಯಾ ದ್ವೀಪಗಳ ರಾಷ್ಟ್ರ, ಹಲವು ದ್ವೀಪಗಳು ಒಟ್ಟಾಗಿ ದೇಶವಾಗಿದೆ. ಇಂಡೋನೇಷ್ಆ ಖ್ಯಾತವಾಗಿರುವುದೇ ಇಲ್ಲಿನ ಜ್ವಾಲಾಮುಖಿ ಹುದುಗಿಸಿಟ್ಟುಕೊಂಡಿರುವ ದ್ವೀಪಗಳಿಂದ.

ಇಲ್ಲಿ ಭೂಕಂಪ ಸ್ವಾಭಾವಿಕ. ಆಗಾಗ ಆಗುತ್ತಲೇ ಇರುತ್ತದೆ ಅದರಲ್ಲಿಯೂ ಸುಮಾತ್ರಾದಲ್ಲಿ ಅತಿ ಹೆಚ್ಚು ಭೂಕಂಪವಾಗುತ್ತದೆ. ಇಂಡೋನೇಷ್ಯಾದಲ್ಲಿ ಈವರೆಗೆ ಸಂಭವಿಸಿರುವ ಹಲವು ಭೂಕಂಪದಲ್ಲಿ ಅತಿ ದೊಡ್ಡ 10 ಭೂಕಂಪಗಳ ಪಟ್ಟಿ ಇಲ್ಲಿದೆ ನೋಡಿ.

1) 1995ರ ಕೆರಿಂಕಿ ಭೂಕಂಪ
ಸುಮಾತ್ರಾದ ದಕ್ಷಿಣ ಭಾಗದಲ್ಲಿ 1995ರ ಅಕ್ಟೋಬರ್ 7 ರಂದು ಸಂಭಿವಿಸಿತ್ತು ಭಾರಿ ಭೂಕಂಪ. ಭೂಕಂಪದಿಂದ ಅತಿ ಹೆಚ್ಚು ನಷ್ಟವಾಗಿದ್ದು ಕೆರಿಂಕಿ ಜಿಲ್ಲೆಗೆ ಹಾಗೂ ಅರ ರಾಜಧಾನಿ ಸೆಮುರುಪ್‌ಗೆ. ರಿಕ್ಟರ್‌ ಮಾಪನದಲ್ಲಿ 7 ಪ್ರಮಾಣದ ತೋರಿದ ಒಂದು ಹಾಗೂ 6ರ ಎರಡು ಭೂಕಂಪಗಳು ಒಂದರಹಿಂದೊಂದು ಅಪ್ಪಳಿಸಿತ್ತು. ಈ ಭೂಕಂಪದಲ್ಲಿ 73 ಜನ ಪ್ರಾಣ ಕಳೆದುಕೊಂಡಿದ್ದರು. 59 ಜನ ಅಂಗವಿಕಲರಾದರು. 190 ಜನ ಗಾಯಾಳುಗಳಾಗಿದ್ದರು.

 10 Biggest Earthquakes which hit Indonesia

2) ಮೆಂಟವಿ ಭೂಕಂಪ- 2010
ಎಂಟು ವರ್ಷಗಳ ಹಿಂದೆ ಅಕ್ಟೋಬರ್ 10ರಂದು ಇಂಡೋನೇಷ್ಯಾವನ್ನು ಭಾರಿ ಭೂಕಂಪ ಅಪ್ಪಳಿಸಿತ್ತು, 7.2 ತೀವ್ರತೆಯ ಈ ಭೂಕಂಪನದಿಂದ ಒಟ್ಟು 256 ಮಂದಿ ಪ್ರಾಣ ಕಳೆದುಕೊಂಡಿದ್ದರು. ಭೂಕಂಪನದಿಂದ ಆಗಿದ್ದ ನಷ್ಟ 1916 ಬಿಲಿಯನ್ ಡಾಲರ್‌.

3) ಬೆಂಕುಲು ಭೂಕಂಪ- 2000
2000 ದ ಜೂನ್‌ನಲ್ಲಿ ಬೆಂಕುಲು ಎಂಬಲ್ಲಿ ಸಂಭವಿಸಿದ 7.3 ತೀವ್ರತೆಯ ಈ ಭೂಕಂಪ ಭಾರಿ ಆಸ್ತಿ ಹಾನಿ ಉಂಟು ಮಾಡಿತ್ತು. ಈ ಭೂಕಂಪನದಿಂದ 15000 ಕ್ಕೂ ಹೆಚ್ಚು ಮನೆಗಳು ನೆಲಸಮವಾದವು. 12000 ಮನೆಗಳಿಗೆ ಹಾನಿಯಾಯಿತು. ಸಾವಿರಾರು ಶಾಲೆಗಳು, ಸರ್ಕಾರಿ ಕಟ್ಟಡಗಳು ನೆಲಸಮವಾದವು, 377 ಮಸೀದಿಗಳು ಧರೆಗುರುಳಿದವು.

4) ಬೆಂಕುಲು ಭೂಕಂಪ-2007
2007ರ ಸೆಪ್ಟೆಂಬರ್ 12ರಂದು ಮತ್ತೆ ಬೆಂಕುಲು ಎಂಬಲ್ಲಿಯೇ ಸಂಭವಿಸಿತ್ತು ಭೀಕರ ಭೂಕಂಪ. 7.9 ತೀವ್ರತೆಯ ಈ ಭೂಕಂಪದಿಂದ 35 ಮಂದಿ ಪ್ರಾಣ ಪಕ್ಷಿ ಹಾರಿಹೋಯಿತು. 200 ಮಂದಿ ಗಾಯಾಳುಗಳಾದರು. ಸಾವಿರಾರು ಕೋಟಿ ಆಸ್ತಿ ಹಾನಿಯಾಯಿತು. ಭೂಕಂಪದ ತೀವ್ರತೆ ದೃಷ್ಠಿಯಿಂದ ಇದು ಅತಿ ದೊಡ್ಡ ಭೂಕಂಪ.

 10 Biggest Earthquakes which hit Indonesia

5) ದಕ್ಷಿಣ ಸುಮಾತ್ರಾ- 2009
ದಕ್ಷಿಣ ಸುಮಾತ್ರಾದಲ್ಲಿ 2009ರ ಸೆಪ್ಟೆಂಬರ್ 30ರಂದು 7.9 ತೀವ್ರತೆಯ ಭಾರಿ ಭೂಕಂಪ ಸಂಭವಿಸಿತ್ತು. ಈ ಭೂಕಂಪದಲ್ಲಿ ಕನಿಷ್ಟ 1100 ಮಂದಿ ಪ್ರಾಣ ಕಳೆದುಕೊಂಡರು. 2500 ಕ್ಕೂ ಹೆಚ್ಚು ಜನ ಗಾಯಾಳುಗಳಾದರು. 65,380 ಮನೆಗಳು ನೆಲಕ್ಕುರುಳಿದವು, 75,000 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಯಿತು.

6) ಮೆಂಟವೈ ಭೂಕಂಪ- 2016
ಎರಡು ವರ್ಷದ ಹಿಂದೆ ಫೆಬ್ರವರಿ 3ರಂದು ಮೆಂಟವೈ ದ್ವೀಪದಲ್ಲಿ ಭಾರಿ ಭೂಕಂಪ ಸಂಭವಿಸಿತು. 8.3 ತೀವ್ರತೆಯ ಈ ಭೂಕಂಪ ಬಹಳ ಹೊತ್ತಿನವರೆಗೆ ಭೂಮಿಯನ್ನು ಅಲುಗಿಸಿತ್ತು. ಮಾಮೂಲಿನಂತೆ ಭಾರಿ ಆಸ್ತಿ ಪಾಸ್ತಿ ಹಾನಿ ಮಾಡಿತ್ತು. ತೀವ್ರತೆಯ ದೃಷ್ಟಿಯಿಂದ ಇದು ದೊಡ್ಡ ಭೂಕಂಪಗಳಲ್ಲಿ ಒಂದು.

7) ಉತ್ತರ ಸುಮಾತ್ರಾ ಭೂಕಂಪ-2005

2008 ರ ಮಾರ್ಚ್‌ನಲ್ಲಿ ಉತ್ತರ ಸುಮಾತ್ರಾದಲ್ಲಿ ಭಾರಿ ಭೂಕಂಪ ಸಂಭವಿಸಿತ್ತು. 8.6 ತೀವ್ರತೆಯ ಈ ಭೂಕಂಪದಲ್ಲಿ 450 ಕ್ಕೂ ಹೆಚ್ಚು ಜನ ಅಸುನೀಗಿದ್ದರು.

 10 Biggest Earthquakes which hit Indonesia

8) 1833ರ ದಕ್ಷಿಣ ಸುಮಾತ್ರಾ ಭೂಕಂಪ
1833 ರಲ್ಲಿ ದಕ್ಷಿಣ ಸುಮಾತ್ರಾ ಭಾರಿ ದೊಡ್ಡ ಭೂಕಂಪವನ್ನು ಕಂಡಿತ್ತು. 8.8 ತೀವ್ರತೆಯ ಒಂದು ಅದರ ಹಿಂದೆಯೇ 9.2 ತೀವ್ರತೆಯ ಎರಡು ಭೂಕಂಪನಗಳು ಒಂದರ ಹಿಂದೆ ಒಂದು ದಕ್ಷಿಣಾ ಸುಮಾತ್ರಾವನ್ನು ಅಪ್ಪಳಿಸಿತ್ತು. ಈ ಭೂಕಂಪ ಸುನಾಮಿಯನ್ನು ಸಹ ಸೃಷ್ಠಿಸಿತ್ತು. ಆಗ ಸತ್ತವರ ಸಂಖ್ಯೆ ಲೆಕ್ಕ ಸಹ ಸಿಗಲಿಲ್ಲ.

9) ಬೆಂಕುಲು ಭೂಕಂಪ 2012
2012ರ ಏಪ್ರಿಲ್‌ 11ರಂದು ಬೆಂಕುಲದಲ್ಲಿ ಸಂಭವಿಸಿದ ಭೂಕಂಪ ಈ ವರೆಗಿನ ಇಂಡೋನೇಷ್ಯಾದ ಅತಿ ಸುಧೀರ್ಘ ಭೂಕಂಪ. 8.9 ತೀವ್ರತೆಯ ಈ ಭೂಕಂಪ ಸತತವಾಗಿ 10 ನಿಮಿಷ ಭೂಮಿಯನ್ನು ನಡುಗಿಸಿತ್ತು. ಈ ಭೂಕಂಪನ ಪರಿಣಾಮ ಅಂಡಮಾನ್-ನಿಕೋಬಾರ್, ಭಾರತದ ಕೆಲವು ಭಾಗಗಳಿಗೂ ತಟ್ಟಿತು.

10) ವಿಶ್ವವನ್ನೆ ಬೆಚ್ಚಿ ಬೀಳಿಸಿದ್ದ 2004ರ ಭೂಕಂಪ
2004ರ ಡಿಸೆಂಬರ್ 26 ರಂದು ಸಂಭವಿಸಿದ್ದ ಭೂಕಂಪ ವಿಶ್ವವನ್ನೇ ಬೆಚ್ಚಬೀಳಿಸಿತ್ತು. ಅತಿ ಭಯಂಕರ ಸುನಾಮಿಯನ್ನು ಹುಟ್ಟಿಸಿದ್ದ ಈ 9.2 ತೀವ್ರತೆಯ ಭೂಕಂಪನದಿಂದ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದರು. ಲಕ್ಷಾಂತರ ಜನ ನಿರ್ಗತಿಕರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+