Ukraine War: 1,130 ದಿನಗಳ ರಕ್ತಪಾತಕ್ಕೆ ಬ್ರೇಕ್ ಬೀಳಲೇ ಇಲ್ಲ, ರಷ್ಯಾ & ಉಕ್ರೇನ್ ಯುದ್ಧ ಮುಂದುವರಿಕೆ...

ಅಲ್ಲಿ ಯುದ್ಧ ಶುರುವಾಗಿ ಬರೋಬ್ಬರಿ 3 ವರ್ಷವೇ ಉರುಳಿ ಹೋಗಿದೆ, ಲಕ್ಷ ಲಕ್ಷ ಜನಗಳ ದೇಹ ಮಣ್ಣಾಗಿದೆ. ಜಾಗತಿಕ ಮಟ್ಟದಲ್ಲಿ ಭಯ ಕೂಡ ಶುರುವಾಗಿದೆ, ಹೀಗಿದ್ದರೂ ಯುದ್ಧ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಬದಲಾಗಿ ತಿಕ್ಕಾಟ ಇನ್ನಷ್ಟು & ಮತ್ತಷ್ಟು ಜೋರು ಜೋರಾಗುತ್ತಿದೆ. ರಷ್ಯಾ & ಉಕ್ರೇನ್ ಯುದ್ಧ ನೋಡ ನೋಡುತ್ತಲೇ 1130 ದಿನಗಳ ರಕ್ತಪಾತ ಮುಗಿಸಿದ್ದು, ಆತಂಕದ ದಿನಗಳು ಮತ್ತಷ್ಟು ಹತ್ತಿರವಾಗಿವೆ.

ಇಬ್ಬರ ಜಗಳದಲ್ಲಿ 3ನೇ ವ್ಯಕ್ತಿಗೆ ಲಾಭ ಅನ್ನೋ ಗಾದೆ ಮಾತು ಇದೆ, ಆದರೆ ರಷ್ಯಾ & ಉಕ್ರೇನ್ ಜಗಳದಲ್ಲಿ ಅಮೆರಿಕ ಲಾಭ ಮಾಡಿಕೊಳ್ಳುವುದು ಇರಲಿ ಪ್ರತಿನಿತ್ಯ ರಕ್ತ ಸುಟ್ಟುಕೊಳ್ಳುತ್ತಿದೆ. ಉಕ್ರೇನ್ ಅಧ್ಯಕ್ಷನಿಗೆ ಅದೆಷ್ಟೇ ಹೇಳಿದರೂ ಬುದ್ಧಿ ಬರುವ ಸೀನ್ ಇಲ್ಲ ಅನಿಸುತ್ತಿದೆ. ಯಾಕಂದ್ರೆ ರಷ್ಯಾ ವಿರುದ್ಧ ಪದೇ ಪದೇ ಕಿರಿಕ್ ಮಾಡುತ್ತಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಈಗ ರಷ್ಯಾದ ವಿರುದ್ಧ ಇನ್ನಷ್ಟು ಘೋರ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಇಡೀ ರಷ್ಯಾವನ್ನೇ ಸರ್ವನಾಶ ಮಾಡಲು, ರಿವೇಂಜ್ ತೆಗೆದುಕೊಳ್ಳಲು ಭಯಾನಕ ಅಸ್ತ್ರ ಬಳಕೆಗೂ ಉಕ್ರೇನ್ ಕುತಂತ್ರ ಮಾಡ್ತಿದೆ ಅನ್ನೋ ಆರೋಪಗಳ ನಡುವೆ ರಷ್ಯಾ ಕೂಡ ರೊಚ್ಚಿಗೆದ್ದು ಕೂತಿದೆ.

1 130 Days Later with No Resolution in Sight For Russia And Ukraine War

ಉಕ್ರೇನ್ ಸೇನೆಗೆ ರಷ್ಯಾ ಮಿಲಿಟರಿ ಶಾಕ್!

ರ‍ಷ್ಯಾ ಸೇನೆಯ ಶಕ್ತಿ ಮುಂದೆ ಹೋಲಿಕೆ ಮಾಡಿದರೆ ಉಕ್ರೇನ್ ಸೇನೆ ಏನಕ್ಕೂ ಸಾಲುವುದಿಲ್ಲ. ಒಂದೋ ನಾವು ಇರಬೇಕು ಇಲ್ಲ ನೀವಿರಬೇಕು.. ಹಿಂಗೆ ಡೈಲಾಗ್ ಹೇಳುತ್ತಲೇ ರಷ್ಯಾ ಮಿಲಿಟರಿ ಉಕ್ರೇನ್ ವಿರುದ್ಧ ದಾಳಿ ಮಾಡುತ್ತಿದೆ ಅಂತಾ ಕಾಣುತ್ತೆ. ಯಾಕಂದ್ರೆ ಉಕ್ರೇನ್‌ನ ಮೇಲೆ ಇದೀಗ ರಷ್ಯಾ ನಡೆಸುತ್ತಿರುವ ದಾಳಿ ನೋಡಿದ್ರೆ ಎಂತಹವರಿಗೂ ಆಘಾತ ಎದುರಾಗದೆ ಇರಲ್ಲ.

ಉಕ್ರೇನ್ ಸೇನೆಯು ಪುಟಿನ್ ಹುಡುಗರು ಕೊಡುತ್ತಿರುವ ಏಟಿಗೆ ನಲುಗಿ ಹೋಗಿದೆ, ಇಷ್ಟಾದರೂ ಸಂಪೂರ್ಣವಾಗಿ ರಷ್ಯಾದ ಎದುರು ಶರಣಾಗಲು ಸಿದ್ಧವಿಲ್ಲ. ಇನ್ನೊಂದು ಕಡೆ ರಷ್ಯಾ ಕೂಡ ಒಪ್ಪಂದಕ್ಕೆ ಬಂದು ಕೂರುತ್ತಿಲ್ಲ. ಹೀಗಾಗಿ ಯುರೋಪ್ ದೇಶಗಳಲ್ಲಿ ಮತ್ತೆ ಭಯ ಆವರಿಸಿದ್ದು, ಮುಂದಿನ ಪರಿಸ್ಥಿತಿ ನೆನಪು ಮಾಡಿಕೊಳ್ಳುವುದಕ್ಕೂ ಅಸಾಧ್ಯ ಎಂಬಂತಾಗಿದೆ.

ಡೊನಾಲ್ಡ್ ಟ್ರಂಪ್ ನಡೆ ಏನು?

ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ 24 ಗಂಟೆ ಒಳಗಾಗಿ ರಷ್ಯಾ & ಉಕ್ರೇನ್ ಯುದ್ಧ ನಿಲ್ಲುಸುತ್ತೇನೆ, ಇದು ನನ್ನ ಶಪಥ ಹಾಗೇ.. ಹೀಗೆ.. ಅಂತೆಲ್ಲಾ ಡೊನಾಲ್ಡ್ ಟ್ರಂಪ್ ಅವರು ಬಿಲ್ಡಪ್ ಕೊಟ್ಟಿದ್ದರು. ಆದರೆ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರವನ್ನ ವಹಿಸಿಕೊಂಡು 2 ತಿಂಗಳು ಕಳೆದರೂ ಅಂದ್ರೆ 1,440 ಗಂಟೆಗಳು ಉರುಳಿದರೂ ಈ ಯುದ್ಧ ನಿಂತಿಲ್ಲ. ಹೀಗಾಗಿ ಟ್ರಂಪ್ ಕೂಡ ಈ ವಿಚಾರದಲ್ಲಿ ಬೇಸತ್ತು ಹೋಗಿದ್ದು, ಖಡಕ್ ಕ್ರಮ ಕೈಗೊಳ್ಳಲು ಇದೀಗ ಡೊನಾಲ್ಡ್ ಟ್ರಂಪ್ ಚಿಂತನೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+