Get Updates
Get notified of breaking news, exclusive insights, and must-see stories!

Zomato: ಅಂಕಿತಾ ನಿಮ್ಮ ಮಾಜಿ ಪ್ರಿಯಕರನಿಗೆ ಆಹಾರ ಆರ್ಡರ್ ಮಾಡುವುದು ನಿಲ್ಲಿಸಿ: ಝೊಮಾಟೋ ಟ್ವೀಟ್ ವೈರಲ್

ಆಹಾರ ವಿತರಣಾ ಕಂಪನಿ ಝೊಮಾಟೋ ಹಾಸ್ಯದ ಮತ್ತು ಸೃಜನಶೀಲ ಮಾರ್ಕೆಟಿಂಗ್ ತಂತ್ರಗಳಿಗೆ ಸಾಕಷ್ಟು ಹೆಸರು ಮಾಡಿದೆ. ತನ್ನ ಗ್ರಾಹಕರು, ಡೆಲಿವರಿ ಬಾಯ್‌ಗಳು ಇತ್ಯಾದಿ ವಿಚಾರದಲ್ಲಿ ಹಲವು ಸೃಜನಾತ್ಮಕ, ಹಾಸ್ಯದ ಟ್ವೀಟ್‌ಗಳು ಭಾರಿ ವೈರಲ್ ಕೂಡ ಆಗಿವೆ.

ಅಂತಹದ್ದೇ ಮತ್ತೊಂದು ಟ್ವೀಟ್ ಈಗ ವೈರಲ್ ಆಗಿದ್ದು, ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್‌ಗಳು ಮತ್ತು ಮೀಮ್‌ಗಳ ಪ್ರವಾಹಕ್ಕೆ ಕಾರಣವಾಗಿದೆ. ಭೋಪಾಲ್‌ನ ಅಂಕಿತಾ ಎನ್ನುವ ಮಹಿಳೆಯ ಹೆಸರನ್ನು ಉಲ್ಲೇಖಿಸಿ ಝೊಮಾಟೋ ಟ್ವೀಟ್ ಮಾಡಿದೆ.

Zomatos Plea to Ankita from Bhopal Sparks Online Humor After Exs Food Orders

ಭೋಪಾಲ್‌ನ ಅಂಕಿತಾ ಎನ್ನುವ ಮಹಿಳೆ ತನ್ನ ಮಾಜಿ ಪ್ರಿಯಕರನಿಗೆ ಝೊಮಾಟೋ ಮೂಲಕ ಆಹಾರ ಆರ್ಡರ್ ಮಾಡಿದ್ದಾರೆ. ಅದು ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮೂಲಕ, ಆದರೆ ಆಕೆಯ ಮಾಜಿ ಪ್ರಿಯಕರ ಹಣ ನೀಡಲು ನಿರಾಕರಿಸಿದ್ದಾರೆ ಎಂದು ಝೊಮಾಟೋ ಹೇಳಿದೆ.

ಟ್ವೀಟ್‌ನಲ್ಲಿ ಏನಿದೆ?

"ಭೋಪಾಲ್‌ನ ಅಂಕಿತಾ ದಯವಿಟ್ಟು ನಿಮ್ಮ ಮಾಜಿ ಪ್ರಿಯಕರನಿಗೆ ಕ್ಯಾಶ್ ಆನ್ ಡೆಲಿವರಿಯಲ್ಲಿ ಆಹಾರವನ್ನು ಕಳುಹಿಸುವುದನ್ನು ನಿಲ್ಲಿಸಿ. ಇದು 3 ನೇ ಬಾರಿ - ಅವರು ಹಣ ನೀಡಲು ನಿರಾಕರಿಸಿದ್ದಾರೆ!" ಎಂದು ಟ್ವಿಟರ್‌ನಲ್ಲಿ ಝೊಮಾಟೊ ಬರೆದುಕೊಂಡಿದೆ.

ಈ ಟ್ವೀಟ್ ನೋಡಿದ ಜನ ತರಹೇವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಸಾಕಷ್ಟು ಜನ ಈ ಅಂಕಿತಾ ಯಾರು ಎಂದು ತಿಳಿದುಕೊಳ್ಳುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಅಂಕಿತಾ ನಿಜವಾಗಿಯೂ ಇದ್ದಾಳ, ಝೊಮಾಟೋ ಬೇಕೆಂತಲೆ ಹೀಗೆ ಮಾಡಿದ್ಯಾ ಎನ್ನುವ ಆತಂಕ ಕೂಡ ವ್ಯಕ್ತಪಡಿಸಿದ್ದಾರೆ.

ಅದೇನೇ ಇರಲಿ, ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಮೀಮ್‌ಗಳು ಮತ್ತು ಜೋಕ್‌ಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದು ಅದರಲ್ಲಿ ಒಬ್ಬರು, "ಕಥೆಯಲ್ಲಿ ತಿರುವು: ಅಂಕಿತಾ ಅವರಿಗೆ ಹಣ ನೀಡಬೇಕಿದೆ ಎಂದು ಹೇಳಿದ್ದಾರೆ.

ಇನ್ನೊಬ್ಬರು ಪ್ರತಿಕ್ರಿಯೆ ನೀಡಿ "ಅಂಕಿತಾ ಮತ್ತು ಅವರ ಮಾಜಿ ಪ್ರಿಯಕರ ಹಸಿವು ಮತ್ತು ಭಗ್ನ ಹೃದಯದ ನಡುವೆ ಸಿಕ್ಕಿಹಾಕಿಕೊಂಡಿರಬೇಕು, ಇದು ಎಂದಿಗೂ ಮುಗಿಯದ ಕ್ಯಾಶ್ ಆನ್ ಡೆಲಿವರಿ ಚಕ್ರ" ಎಂದು ಬರೆದಿದ್ದಾರೆ.

ಮತ್ತೊಬ್ಬರು ಕಾಮೆಂಟ್ ಮಾಡಿದ್ದು, "ಜೀವನವು ನಿಮಗೆ ಮಾಜಿ ಗೆಳೆಯನನ್ನು ನೀಡಿದಾಗ, ಆಹಾರವನ್ನು ಆರ್ಡರ್ ಮಾಡಿ ಮತ್ತು ಅವನು ಏನು ಕಳೆದುಕೊಂಡಿದ್ದಾನೆಂದು ಅರ್ಥಮಾಡಿಸಿ!" ಎಂದು ವ್ಯಂಗ್ಯವಾಡಿದ್ದಾರೆ.

ಇನ್ನೂ ಕೆಲವರು ಇದು ಝೊಮೆಟೊ ಅವರ ಹೊಸ ಮಾರ್ಕೆಟಿಂಗ್ ತಂತ್ರ, ಜಾಲತಾಣಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಅಂಕಿತಾ ಎನ್ನುವವರನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ. ಏನೆ ಆದರೂ ಈ ಟ್ವೀಟ್ ಸಾಕಷ್ಟು ವೈರಲ್ ಆಗಿದೆ. 12500 ಲೈಕ್‌ಗಳನ್ನು ಪಡೆದುಕೊಂಡಿದ್ದು, 1270 ಬಾರಿ ರಿಟ್ವೀಟ್ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+