Get Updates
Get notified of breaking news, exclusive insights, and must-see stories!

Video Viral: ರೀಲ್ಸ್ ಮಾಡುವವರೇ ಎಚ್ಚರ! ವಿಡಿಯೋ ಮಾಡುವಾಗ 300 ಅಡಿ ಆಳದ ಕಂದಕಕ್ಕೆ ಬಿದ್ದು ಯುವತಿ ಸಾವು!

ಮುಂಬೈ ಜುಲೈ 18: ಕೊರೊನಾ ಬಂದ ನಂತರ ಯುವಪೀಳಿಗೆ ಮಾತ್ರವಲ್ಲದೆ ಎಲ್ಲಾ ವಯೋಮಾನದವರಲ್ಲೂ ರೀಲ್ ಹುಚ್ಚು ಹೆಚ್ಚಾಗಿ ಹೋಗಿದೆ. ಇದರಿಂದಾಗಿ ಹಲವಾರು ಜನ ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆಯುತ್ತಿದ್ದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗೆ ರೀಲ್ಸ್ ಮಾಡಲು ಹೋಗಿ ಯುವತಿಯೊಬ್ಬಳು 300 ಅಡಿ ಆಳದ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.

ಇತ್ತೀಚೆಗೆ ಜಲಪಾತದ ಮಧ್ಯೆ ಸಿಲುಕಿಕೊಂಡು ಕುಟುಂಬವೊಂದು ಕೊಚ್ಚಿ ಹೋದ ದೃಶ್ಯ ಕಣ್ಣ ಮುಂದೆ ಹಾಗೇ ಇದೆ. ಇದರಿಂದ ಎಚ್ಚೆತ್ತುಕೊಳ್ಳಬೇಕಾದ ಯುವಜನತೆ ರೀಲ್ಸ್ ಮಾಡುವ ಹುಚ್ಚಾಟದಲ್ಲಿ ಪ್ರಾಣದ ಜೊತೆ ಚೆಲ್ಲಾಟವಾಗುತ್ತಿದ್ದಾರೆ. ಸದ್ಯ ಮತ್ತೊಬ್ಬ ಯುವತಿ ರೀಲ್ಸ್ ಮಾಡುವ ಗೋಜಿಗೆ ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

Young woman died after falling into a 300 feet deep trench while making reels in maharastra

ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಅನ್ವಿ ಕಂಬಾರ್ (27) ಎಂದು ಗುರುತಿಸಲಾಗಿದೆ. ಇವರು ರೀಲ್ಸ್ ಮಾಡಲು ಕಾರನ್ನು ರಿವಾರ್ಸ್ ತೆಗೆಯುವಾಗ 300 ಅಡಿ ಆಳದ ಕಂದಕಕ್ಕೆ ಕಾರು ಉರುಳಿದೆ. ಈ ದುರ್ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಅನ್ವಿ ಕಂಬಾರ್ ಜುಲೈ 16 ರಂದು ಏಳು ಸ್ನೇಹಿತರೊಂದಿಗೆ ರಾಯಗಡ ಜಿಲ್ಲೆಯ ಮನಗಾಂವನ ಪ್ರಸಿದ್ಧ ಕುಂಭೆ ಜಲಪಾತ ನೋಡಲು ಪ್ರವಾಸಕ್ಕೆಂದು ತೆರಳಿದ್ದರು. ಬೆಳಗ್ಗೆ 10.30ರ ಸುಮಾರಿಗೆ ವಿಡಿಯೋ ಚಿತ್ರೀಕರಣ ಮಾಡುವಾಗ ಅನ್ವಿ ಕಂಬಾರ್ (Anvi Kamdar) ಆಳವಾದ ಕಂದಕಕ್ಕೆ ಬಿದ್ದಿದ್ದಾರೆ. ಘಟನೆ ಕುರಿತು ಸ್ಥಳೀಯ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದು, ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ.

ಕೋಸ್ಟ್ ಗಾರ್ಡ್, ಪಾರುಗಾಣಿಕಾ ತಂಡ ಮತ್ತು ಮಹಾರಾಷ್ಟ್ರ ರಾಜ್ಯ ವಿದ್ಯುತ್ ಮಂಡಳಿಯ ನೌಕರರು ಹೆಚ್ಚಿನ ಸಹಾಯಕ್ಕಾಗಿ ತಕ್ಷಣ ಆಗಮಿಸಿದ್ದಾರೆ. ಸ್ಥಳಕ್ಕಾಗಮಿಸಿದ ತಕ್ಷಣ ಯುವತಿ ಸುಮಾರು 300-350 ಅಡಿ ಎತ್ತರದಿಂದ ಬಿದ್ದಿರುವುದು ತಿಳಿದು ಬಂದಿದೆ.

ತಡಮಾಡದೆ ಕೋಸ್ಟ್ ಗಾರ್ಡ್, ಪಾರುಗಾಣಿಕಾ ತಂಡ ಕಂದಕಕ್ಕೆ ಇಳಿದು ಯುವತಿಯನ್ನು ತಲುಪಿದೆ. ಆದರೆ ಜೋರಾಗಿ ಮಳೆಯಾಗುತ್ತಿದ್ದರಿಂದ ಅವಳನ್ನು ಎತ್ತುವುದು ಕಷ್ಟಕರವಾಗಿತ್ತು. ಆದ್ದರಿಂದ ಆಕೆಯನ್ನು ಲಂಬವಾದ ರಾಟೆಯ ಸಹಾಯದಿಂದ ಹೊರತೆಗೆಯಲಾಯಿತು.

ಆರು ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಶ್ವೇತಾ ಅವರನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು. ಆದರೆ ಬಿದ್ದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಅವರನ್ನು ಮನಗಾಂವ ಉಪ ಜಿಲ್ಲಾಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.

ಈ ದುರ್ಘಟನೆಯ ಬಳಿಕ ತಹಸೀಲ್ದಾರ್, ಮನಗಾಂವ ಪೊಲೀಸ್ ನಿರೀಕ್ಷಕರು ಸೇರಿದಂತೆ ಸ್ಥಳೀಯ ಅಧಿಕಾರಿಗಳು ಪ್ರವಾಸಿಗರು ಹಾಗೂ ನಾಗರಿಕರಿಗೆ ಮನವಿ ಮಾಡಿದ್ದಾರೆ.

ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಪ್ರವಾಸವನ್ನು ಆನಂದಿಸಬೇಕು ಮತ್ತು ಸಹ್ಯಾದ್ರಿ ಶ್ರೇಣಿಗಳ ನೈಸರ್ಗಿಕ ಸೌಂದರ್ಯವನ್ನು ಆನಂದಿಸುವಾಗ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಜೀವಕ್ಕೆ ಅಪಾಯವನ್ನುಂಟುಮಾಡುವ ಅಪಾಯಕಾರಿ ನಡವಳಿಕೆಯನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

ಅನ್ವಿ ಕಂಬಾರ್ ಸಾಮಾಜಿಕ ಮಾಧ್ಯಮದ ಪ್ರಭಾವಿ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಯುವತಿ. ಆದರೆ ದುರಾದೃಷ್ಟವಶಾತ್ ಕುಂಭ ಜಲಪಾತದ ಸೊಬಗನ್ನು ಕಣ್ತುಂಬಿಕೊಳ್ಳಲು ಯತ್ನಿಸಿ ಸಾವನ್ನಪ್ಪಿದ್ದಾರೆ.

ಪ್ರಕೃತಿಯ ಅದ್ಭುತಗಳನ್ನು ಅನ್ವೇಷಿಸುವ ಅವರ ಪ್ರೀತಿಯು ಅವರ ಜನಪ್ರಿಯ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಯಾವಾಗಲೂ ಪ್ರತಿಫಲಿಸುತ್ತದೆ. ಅವರ ಅನುಯಾಯಿಗಳೊಂದಿಗೆ ತಮ್ಮ ಅನನ್ಯ ಅನುಭವಗಳನ್ನು ಹಂಚಿಕೊಳ್ಳಲು ಅವರು ಆಸಕ್ತಿ ಹೊಂದಿದ್ದರು. ಆದರೆ ಇದೇ ಆಸಕ್ತಿ ಅವರ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+