ಗೋರಖ್‌ಪುರದಲ್ಲಿ ರುದ್ರಾಭಿಷೇಕ ನೆರವೇರಿಸಿದ ಯೋಗಿ ಆದಿತ್ಯನಾಥ್
ಗೋರಖ್‌ಪುರ, ಜುಲೈ 17: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಗೋರಖನಾಥ ದೇವಾಲಯದಲ್ಲಿ 'ಸೋಮಾವತಿ ಅಮಾವಾಸ್ಯೆ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಿ ರುದ್ರಾಭಿಷೇಕ ನೆರವೇರಿಸಿದರು.
ಗೋರಕ್ಷಪೀಠದ ಮುಖ್ಯಸ್ಥರೂ ಆಗಿರುವ ಆದಿತ್ಯನಾಥ್ ಅವರು ಈ ಹಿಂದೆ ರುದ್ರಾಭಿಷೇಕವನ್ನು ಸಾವನ ಮಾಸದ ಮೊದಲ ದಿನದಂದು ನೆರವೇರಿಸಿ ಎಲ್ಲರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು. ಸೋಮಾವತಿ ಅಮಾವಾಸ್ಯೆಯಾದ ಸಾವನ ಎರಡನೇ ಸೋಮವಾರದಂದು ಅವರು ಗೋರಖನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ಇಡೀ ಪ್ರಪಂಚದ ಯೋಗಕ್ಷೇಮಕ್ಕಾಗಿ ಶಿವನ ವಿಶೇಷ ಪೂಜೆಯನ್ನು ಮಾಡಿದರು.

ಗೋರಖನಾಥ ದೇವಸ್ಥಾನದ ಮೊದಲ ಮಹಡಿಯಲ್ಲಿರುವ ಗೋರಕ್ಷಪೀಠ ಶಕ್ತಿಪೀಠದಲ್ಲಿ ಸಿಎಂ ಯೋಗಿ ಶಿವನಿಗೆ ವಿಲ್ವ ಪತ್ರ, ಕಮಲದ ಹೂವುಗಳು ಮತ್ತು ಇತರ ನೈವೇದ್ಯಗಳನ್ನು ಅರ್ಪಿಸಿದರು. ನಂತರ ಹಾಲು ಮತ್ತು ಹಣ್ಣಿನ ರಸದಿಂದ ರುದ್ರಾಭಿಷೇಕ ಮಾಡಿದರು. ಮಠದ ಪ್ರಧಾನ ಅರ್ಚಕ ಆಚಾರ್ಯ ರಾಮಾನುಜ ತ್ರಿಪಾಠಿ ಮತ್ತು ಇತರ ಆಚಾರ್ಯರು ಮತ್ತು ಪುರೋಹಿತರು ರುದ್ರಾಭಿಷೇಕದ ವಿಧಿಯನ್ನು ಪೂರ್ಣಗೊಳಿಸಿದರು.
ವೇದ ಮಂತ್ರಗಳ ಪಠಣದ ಮಧ್ಯೆ ಸಿಎಂ ರುದ್ರಾಭಿಷೇಕದ ನಂತರ ಹವನ, ಆರತಿ ನೆರವೇರಿಸಿದರು. ಧಾರ್ಮಿಕ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಮುಖ್ಯಮಂತ್ರಿಗಳು ರಾಜ್ಯದ ಜನರು ಆರೋಗ್ಯ, ಸಂತೋಷ, ಸಮೃದ್ಧ ಮತ್ತು ಶಾಂತಿಯುತ ಜೀವನಕ್ಕಾಗಿ ಹಾರೈಸಿದರು.
ಏತನ್ಮಧ್ಯ, ಸಾವನ ಮಾಸದಲ್ಲಿ ಬರುವ ಸೋಮಾವತಿ ಅಮವಾಸ್ಯೆಯ ಸಂದರ್ಭದಲ್ಲಿ ಧಾರ್ಮಿಕ ವಿಧಿಗಳನ್ನು ಮಾಡಲು ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಲು ಭಕ್ತರು ವಾರಣಾಸಿ, ಪ್ರಯಾಗ್ರಾಜ್ ಮತ್ತು ಹರಿದ್ವಾರದಲ್ಲಿ ಪೂಜೆ ಸಲ್ಲಿಸಿದರು. ಪವಿತ್ರ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯ ಭಕ್ತರು ಪ್ರಯಾಗರಾಜ್ ಬಳಿ ಸೇರಿದ್ದರು.
ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಸಾವನ ಮಾಸದ ಎರಡನೇ ಸೋಮವಾರದಂದು ಅನೇಕ ಭಕ್ತರು ಪ್ರಾರ್ಥನೆ ಸಲ್ಲಿಸಿದರು. ವಾರಣಾಸಿಯಲ್ಲಿ ಬಾಬಾ ವಿಶ್ವನಾಥನ ದರ್ಶನ ಪಡೆಯಲು ನೆರೆದಿದ್ದ ಭಕ್ತರಲ್ಲಿ ಒಬ್ಬ ಶಿವಭಕ್ತರು, ಸೋಮವಾರವನ್ನು ಶಿವನ ದಿನವೆಂದು ನಂಬಲಾಗಿದೆ. ಈ ದಿನದಂದು ಬಾಬಾನ ದರ್ಶನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ ಎಂದು ಹೇಳಿದರು.












Click it and Unblock the Notifications