Year End 2022: ಭಾರತದಲ್ಲಿ ಸುದ್ದಿ ಮಾಡಿದ ಲೀಡರ್ಸ್!

ನವದೆಹಲಿ, ಡಿಸೆಂಬರ್ 16: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸುಳಿಗೆ ಸಿಲುಕಿದ್ದ ಭಾರತವು 2022ರಲ್ಲಿ ನಿಧಾನಗತಿಯಲ್ಲಿ ಸಹಜ ಸ್ಥಿತಿಯತ್ತ ಮರಳಿತು. ಸಾರ್ವಜನಿಕ ಬದುಕನ್ನು ಸಹಜ ಸ್ಥಿತಿಗೆ ಹಿಂತಿರುಗಿಸಿದ 2022ರ ವರ್ಷಕ್ಕೆ ಗುಡ್ ಬೈ ಹೇಳುವ ದಿನ ಸನ್ನಿಹಿತವಾಗಿದೆ.

2022 ವರ್ಷವು ಕೋವಿಡ್ ನಿರ್ಬಂಧ-ಮುಕ್ತವಾಗಿರುವುದರಿಂದ ಹಿಡಿದು ರಾಜಕೀಯ ಸೇರಿದಂತೆ ಪ್ರತಿಯೊಂದು ವಲಯದ ಜೀವನ ಸಹಜ ಸ್ಥಿತಿಗೆ ಮರಳಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯಿತು. ಅದೇ ರೀತಿ ವರ್ಷಾಂತ್ಯದಲ್ಲಿ ಪ್ರಧಾನಿ ಮೋದಿ ತವರು ರಾಜ್ಯದಲ್ಲೂ ವಿಧಾನಸಭೆ ಚುನಾವಣೆ ನಡೆಯಿತು. ಈ ಅವಧಿಯಲ್ಲಿ ಕೆಲವು ನಾಯಕರು ಹೀರೋಗಳಾಗಿ ಮಿಂಚಿದರು.

ಕಳೆದೊಂದು ವರ್ಷದಲ್ಲಿ ಭಾರತವು ಎದುರಿಸಿದ ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಹಲವಾರು ನಾಯಕರು ಶ್ರಮ ವಹಿಸಿದ್ದಾರೆ. ಸಾರ್ವಜನಿಕರ ಸಹಕಾರದೊಂದಿಗೆ ಯಶಸ್ವಿ ಆಡಳಿತವನ್ನು ನೀಡುವ ಮೂಲಕ ಸೈ ಎನಿಸಿಕೊಂಡವರು ಇದ್ದಾರೆ. ಹೀಗೆ ಭಾರತೀಯರು ಭೇಷ್ ಎಂದಿರುವ ಟಾಪ್-10 ನಾಯಕರು ಯಾರು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

2022ರಲ್ಲಿ ರಾಜಕೀಯದಲ್ಲಿ ಸೋಲು-ಗೆಲುವು

2022ರಲ್ಲಿ ರಾಜಕೀಯದಲ್ಲಿ ಸೋಲು-ಗೆಲುವು

ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ನಂತರದ ಕಾಲದಲ್ಲಿ ಗೋವಾ, ಉತ್ತರಾಖಂಡ, ಪಂಜಾಬ್, ಮಣಿಪುರ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್‌ನಲ್ಲಿ ಚುನಾವಣೆಗಳು ನಡೆದವು. ಇದರಲ್ಲಿ ಬಿಜೆಪಿ 5 ರಾಜ್ಯಗಳನ್ನು ಗೆದ್ದರೆ, ಎಎಪಿ ಮತ್ತು ಕಾಂಗ್ರೆಸ್ ತಲಾ ಒಂದು ರಾಜ್ಯದಲ್ಲಿ ಗೆಲುವಿನ ಬಾವುಟ ಹಾರಿಸಿದವು. 2022 ಬಿಜೆಪಿಗೆ ಮಾತ್ರವಲ್ಲದೆ ಇತರ ಪಕ್ಷಗಳಿಗೂ ಅದೃಷ್ಟವನ್ನು ತಂದಿದೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

2014 ರಿಂದ ಶುರುವಾಗಿರುವ 'ಮೋದಿ-ಮ್ಯಾಜಿಕ್' ಎಂದಿಗೂ ಕಡಿಮೆಯಾದ ಲಕ್ಷಣಗಳೇ ಗೋಚರಿಸುತ್ತಿಲ್ಲ. ವರ್ಷ ಕಳೆದಂತೆ 'ಮೋದಿ ಅಲೆ' ಬಲಗೊಳ್ಳುತ್ತಲೇ ಹೋಗುತ್ತಿದೆ. ಅದೇ ರೀತಿ ಕಳೆದ 2022ರ ವರ್ಷವು ಪ್ರಬಲವಾದ ಮೋದಿ ಅಲೆಗೆ ಸಾಕ್ಷಿಯಾಯಿತು. ಭಾರತೀಯ ಜನತಾ ಪಕ್ಷವು 7ರಲ್ಲಿ 5 ರಾಜ್ಯಗಳಲ್ಲಿ ಗೆಲುವಿನ ನಗೆ ಬೀರಿತು. ಇದರಲ್ಲಿ ಉತ್ತರ ಪ್ರದೇಶ ಮತ್ತು ಗುಜರಾತ್‌ ರಾಜ್ಯಗಳೂ ಸೇರಿದ್ದವು.

ಪ್ರಧಾನಿ ಮೋದಿಯವರ ಮೇಲೆ ಬಿಜೆಪಿ ಅವಲಂಬಿತವಾಗಿರುವುದು ಅವರ ರಾಜಕೀಯ ತೂಕವನ್ನು ಎತ್ತಿ ತೋರಿಸುತ್ತಿದೆ. ಎಲ್ಲಾ 7 ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮತ್ತು ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಅವರು ಕೇಸರಿ ಪಕ್ಷದ ಅಗ್ರಮಾನ್ಯ ನಾಯಕರಾಗಿದ್ದರು. ಪ್ರಧಾನಿಯ ಬಿರುಸಿನ ಪ್ರಚಾರವೇ ಯೋಗಿ ಸರ್ಕಾರ ಅಧಿಕಾರಕ್ಕೆ ಮರಳಲು ಸಹಕಾರಿ ಆಯಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 35 ವರ್ಷಗಳ ದಾಖಲೆಯನ್ನು ಮುರಿದು ಯುಪಿಯಲ್ಲಿ ತಮ್ಮ ಕುರ್ಚಿಯನ್ನು ಉಳಿಸಿಕೊಂಡ 5ನೇ ಮುಖ್ಯಮಂತ್ರಿ ಎನಿಸಿಕೊಂಡರು. ಪ್ರಧಾನಿ ಮೋದಿಯವರ ತವರು ರಾಜ್ಯ ಗುಜರಾತ್‌ನಲ್ಲಿ ಬಿಜೆಪಿ ಸತತ 7ನೇ ಬಾರಿ ಗದ್ದುಗೆ ಹಿಡಿಯುವ ಮೂಲಕ ಇತಿಹಾಸ ಸೃಷ್ಟಿಸಿತು.

ಬಿಜೆಪಿ ಗುಜರಾತ್‌ನಲ್ಲಿ 27 ವರ್ಷಗಳಿಂದ ಅಧಿಕಾರದಲ್ಲಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಂತಹ ದಾಖಲೆಯ ಛಿದ್ರಕಾರಿ ಗೆಲುವನ್ನು ಎಂದಿಗೂ ದಾಖಲಿಸಿರಲಿಲ್ಲ. ಕೇಸರಿ ಪಕ್ಷವು ತನ್ನದೇ ಆದ 2002ರ ದಾಖಲೆಯನ್ನೂ ಮೀರಿಸಿ ಹೊಸ ಇತಿಹಾಸ ಸೃಷ್ಟಿಸಿತು. ಕಳೆದ 2002ರಲ್ಲಿ ಗುಜರಾತ್ ವಿಧಾನಸಭೆಯ 182 ಸ್ಥಾನಗಳಲ್ಲಿ ಬಿಜೆಪಿ 127 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಅದಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿತು.

ರಾಷ್ಟ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಪ್ರಧಾನಿ ಮೋದಿ ಮಿಂಚಿನ ಸಂಚಲನ ಮೂಡಿಸಿದರು. ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾದಾಗ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ನೇರವಾಗಿ ಮಾತನಾಡಿದ ಕೆಲವೇ ರಾಜಕಾರಣಿಗಳಲ್ಲಿ ಪ್ರಧಾನಿ ಮೋದಿ ಕೂಡ ಒಬ್ಬರಾಗಿದ್ದರು.

ಯುಪಿ ಸಿಎಂ ಯೋಗಿ ಆದಿತ್ಯನಾಥ್

ಯುಪಿ ಸಿಎಂ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ 2022 ಸವಾಲಿನ ವರ್ಷವಾಗಿತ್ತು. 2017ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗ, ಯೋಗಿ ಸಿಎಂ ರೇಸ್‌ನಲ್ಲೇ ಇರಲಿಲ್ಲ. ಬಿಜೆಪಿಯ ಪ್ರಮುಖ ಮುಖವೂ ಆಗಿರಲಿಲ್ಲ. ಆದರೆ 2022 ರಲ್ಲಿ ಸಿಎಂ ಯೋಗಿ ಆಡಳಿತ ಪಕ್ಷದ ಮುನ್ನೆಲೆಯಲ್ಲಿ ಕಾಣಿಸಿಕೊಂಡರು. ಅವರ ಕಾರ್ಯಕ್ಷಮತೆ ರಾಜ್ಯದ ಜನರಿಂದ ನಿರ್ಣಯಿಸುವುದಾಗಿತ್ತು. ಅಚ್ಚರಿ ಎಂದರೆ ಅವರ ನೇತೃತ್ವದಲ್ಲಿ ಬಿಜೆಪಿ 35 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಮತ್ತೆ ಅಧಿಕಾರಕ್ಕೆ ಬಂದಿತು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವ ತಮ್ಮ ವೈಖರಿಯಿಂದಾಗಿ ಅವರು 'ಬುಲ್ಡೋಜರ್ ಬಾಬಾ' ಎಂಬ ಹೊಸ ಹೆಸರನ್ನು ಪಡೆದುಕೊಂಡರು. ಉತ್ತರ ಪ್ರದೇಶವು ಯೋಗಿ ನಾಯಕತ್ವದಲ್ಲಿ 2022ರಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ. ಯುಪಿಯು ರಾಷ್ಟ್ರದಲ್ಲಿ 13 ಎಕ್ಸ್‌ಪ್ರೆಸ್‌ವೇಗಳನ್ನು ಹೊಂದಿರುವ ಮೊದಲ ರಾಜ್ಯವಾಗಿದೆ. ರಾಜ್ಯವು ಈಗ ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರ ಮೂರನೇ ಅತಿದೊಡ್ಡ ಆರ್ಥಿಕತೆ ರಾಜ್ಯವಾಯಿತು.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

2013ರ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೊದಲ ಬಾರಿಗೆ ಚುನಾವಣಾ ಪ್ರಚಾರವನ್ನು ಮುನ್ನಡೆಸಿದಾಗ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೇರುಸಹಿತ ಕಿತ್ತೊಗೆದು ಇತಿಹಾಸವನ್ನು ಸೃಷ್ಟಿಸಿದ್ದರು. ಅದೇ ಮಾಪ್ಲರ್ ಮ್ಯಾನ್ ಪಾಲಿಗೆ 2022 ಅತ್ಯಂತ ಸ್ಮರಣೀಯ ವರ್ಷವಾಯಿತು. 2022ರ ವರ್ಷವು ಅವರ ಟೋಪಿಗೆ ಅನೇಕ ಗರಿಗಳನ್ನು ಸೇರಿಸಿತು. ಇತ್ತೀಚೆಗಷ್ಟೇ ನಡೆದ ಗುಜರಾತ್ ಮತ್ತು ದೆಹಲಿ ಚುನಾವಣೆಗಳಲ್ಲಿ ಅವರ ನಾಯಕತ್ವದಲ್ಲಿ ಎಎಪಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದೆ. ಪ್ರಧಾನಿ ಮೋದಿಯ ತವರು ರಾಜ್ಯದಲ್ಲಿ 5 ವಿಧಾನಸಭಾ ಸ್ಥಾನಗಳನ್ನು ಗೆದ್ದ ನಂತರ ಎಎಪಿ 2022ರಲ್ಲಿ ರಾಷ್ಟ್ರೀಯ ಪಕ್ಷವಾಯಿತು. ಗುಜರಾತ್ ನೆಲದಲ್ಲಿ ಶೇ.13ರಷ್ಟು ಮತ ಪಡೆದುಕೊಳ್ಳುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿತು. ಎಂಸಿಡಿ ಚುನಾವಣೆಯಲ್ಲಿ ಕೇಜ್ರಿವಾಲ್ ನಾಗರಿಕ ಸಂಸ್ಥೆಯಲ್ಲಿ ಬಿಜೆಪಿಯ 15 ವರ್ಷಗಳ ಪ್ರಾಬಲ್ಯವನ್ನು ಕೊನೆಗೊಳಿಸಿದರು.

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

ಟೀಕಾಕಾರರು ನಂಬಲಿ, ನಂಬದಿರಲಿ 2022ರಲ್ಲಿ ಅಶೋಕ್ ಗೆಹ್ಲೋಟ್ ಅಗ್ರಮಾನ್ಯ ಕಾಂಗ್ರೆಸ್ ನಾಯಕರ ಪಟ್ಟಿಯಲ್ಲಿ ಕಾಣಿಸಿಕೊಂಡರು. ಅವರು ಗಾಂಧಿ ಕುಟುಂಬದ ಸಂದೇಶವನ್ನು ಧಿಕ್ಕರಿಸುವ ಮೂಲಕ ನಾಯಕತ್ವದಿಂದ ಹಿಂದೆ ಸರಿದರು. ಇತ್ತೀಚೆಗೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರ ಚುನಾವಣೆಗೆ ಮುನ್ನ ರಾಹುಲ್ ಗಾಂಧಿ ಒನ್ ಮ್ಯಾನ್-ಒನ್ ಹುದ್ದೆ ನೀತಿಗೆ ಒತ್ತು ನೀಡಿದಾಗ ಸ್ಪರ್ಧಿಗಳಲ್ಲಿ ಒಬ್ಬರಾದ ಗೆಹ್ಲೋಟ್ ರಾಜಸ್ಥಾನದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದರು. ಸಚಿನ್ ಪೈಲಟ್ ಅನ್ನು ಮುಂದಿನ ಮುಖ್ಯಮಂತ್ರಿ ಮಾಡುವ ಹೈಕಮಾಂಡ್ ಬಯಕೆಯ ವಿರುದ್ಧ ತಮ್ಮ ಶಾಸಕರನ್ನು ಪ್ರಚೋದಿಸಿದರು. ಹೈಕಮಾಂಡ್‌ನಿಂದ ಕಟ್ಟುನಿಟ್ಟಿನ ಎಚ್ಚರಿಕೆಯ ಹೊರತಾಗಿಯೂ, ಅವರು ತಮ್ಮ ಪಕ್ಷದ ಸಹೋದ್ಯೋಗಿ ಮತ್ತು ಪ್ರತಿಸ್ಪರ್ಧಿ ಸಚಿನ್ ಪೈಲಟ್ ಅನ್ನು ಗುರಿಯಾಗಿಸುವಲ್ಲಿ ಹಿಂದೆ ಸರಿಯಲಿಲ್ಲ.

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ

ಕಳೆದ 2019ರಲ್ಲಿ ಕಾಂಗ್ರೆಸ್‌ನ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಕ್ಷೇತ್ರವಾದ ಅಮೇಥಿಯಲ್ಲಿ ಸೋತಾಗಿನಿಂದ ತಮ್ಮ ಚುನಾವಣಾ ಭವಿಷ್ಯಕ್ಕಾಗಿ ಕಾಯುತ್ತಿದ್ದಾರೆ. ಕಾಂಗ್ರೆಸ್ ನಾಯಕತ್ವದ ಸಂಪೂರ್ಣ ಬೆಂಬಲದ ಹೊರತಾಗಿಯೂ ಗಾಂಧಿ ಹಲವಾರು ಸಂದರ್ಭಗಳಲ್ಲಿ ಲಾಭ ಪಡೆಯುವಲ್ಲಿ ಸೋತರು. 2022ರ ವರ್ಷವು ಅವರಿಗೆ ಮಿಶ್ರ ಪ್ರತಿಫಲವನ್ನು ನೀಡಿತು. ಏಕೆಂದರೆ ಅವರು ಬಿಜೆಪಿಯ ದಾಳಿಯ ಕೇಂದ್ರಸ್ಥಾನದಲ್ಲಿ ಗುರುತಿಸಿಕೊಂಡರು. ಅದೇ ಸಮಯದಲ್ಲಿ ಅವರು ಇತ್ತೀಚೆಗೆ, ಕಾಂಗ್ರೆಸ್ 'ಭಾರತ್ ಜೋಡೋ ಯಾತ್ರಾ' ಅನ್ನು ಪ್ರಾರಂಭಿಸಿದರು. ಇದು ಸ್ಪಷ್ಟವಾಗಿ 'ರಾಹುಲ್ ಗಾಂಧಿ' ಬ್ರಾಂಡ್ ಅನ್ನು ಮರುಪ್ರಾರಂಭಿಸುವುದಕ್ಕೇ ಆಗಿತ್ತು. ಅವರು 3,570 ಕಿಮೀ ಪಾದಯಾತ್ರೆಯನ್ನು ಮುನ್ನಡೆಸುತ್ತಿದ್ದು, ಫೆಬ್ರವರಿ ಆರಂಭದಲ್ಲಿ ಈ ಯಾತ್ರೆಯು 3,570 ಕಿಮೀಗಳನ್ನು ಕ್ರಮಿಸಲಿದೆ. ಈ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದು ಪಕ್ಷದ ಪುನಶ್ಚೇತನ ಎಂದು ಕಾಂಗ್ರೆಸ್ ಭಾವಿಸಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಇಡಿ ಹಲವು ಬಾರಿ ಪ್ರಶ್ನಿಸಿದಾಗಲೂ ಸುದ್ದಿಯಾಯಿತು. ವರ್ಷವಿಡೀ ರಾಹುಲ್ ಗಾಂಧಿ ಹಲವು ವಿಷಯಗಳ ಬಗ್ಗೆ ಆರ್‌ಎಸ್‌ಎಸ್ ಮತ್ತು ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.

ಗೃಹ ಸಚಿವ ಅಮಿತ್ ಶಾ

ಗೃಹ ಸಚಿವ ಅಮಿತ್ ಶಾ

2022ರ ವರ್ಷವು ಗೃಹ ಸಚಿವ ಅಮಿತ್ ಶಾ ಅವರಿಗೆ ತುಂಬಾ ಸವಾಲಿನದ್ದಾಗಿದೆ. ತಮ್ಮ 'ಚಾಣಕ್ಯನೀತಿ'ಗೆ ಹೆಸರುವಾಸಿಯಾಗಿರುವುದರಿಂದ ಅಮಿತ್ ಶಾ ಎಲ್ಲಾ ಸವಾಲುಗಳನ್ನು ಮೀರಿಸಿದರು. 2022ರಲ್ಲಿ ಅವರು ಎದುರಿಸಿದ ಪ್ರಮುಖ ಸವಾಲು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯಾಗಿದ್ದು, ಹಲವಾರು ಕಾಶ್ಮೀರಿ ಪಂಡಿತರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದರು. ಇದು ಅವರ ವಿರುದ್ಧ ಪ್ರತಿಪಕ್ಷಗಳ ದಾಳಿಯನ್ನು ಪ್ರಚೋದಿಸಿತು, ಆದರೆ ಅವರು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಯಂತ್ರಿಸಿದರು. ಭದ್ರತಾ ಬೆದರಿಕೆಯ ನಡುವೆ ಅವರು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿದರು.

ರಾಜ್ಯವೇ ತವರು ಮನೆಯಾಗಿದ್ದ ಅವರಿಗೆ ಗುಜರಾತ್ ಚುನಾವಣೆಯೂ ಭಾರಿ ಸವಾಲಾಗಿದ್ದು, ಅದರಲ್ಲೂ ವಿಜಯಶಾಲಿಯಾದರು. ವಾಸ್ತವವಾಗಿ ಗುಜರಾತ್‌ನಲ್ಲಿ ಅವರ ಪಕ್ಷ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿತು. ಗುಜರಾತ್ ನಲ್ಲಿ ಶಾ ಬಿರುಸಿನ ಪ್ರಚಾರ ನಡೆಸಿದರು. ಚುನಾವಣಾ ಮೆರವಣಿಗೆಯಲ್ಲಿ, ಅಮಿತ್ ಶಾ 'ಗೋಧ್ರಾ ಹಿಂಸಾಚಾರ'ವನ್ನು ಉಲ್ಲೇಖಿಸಿ, ಒಮ್ಮೆ ತಪ್ಪಿತಸ್ಥರನ್ನು ಶಿಕ್ಷಿಸಿದ ನಂತರ ರಾಜ್ಯದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಿದೆ ಎಂದು ಹೇಳಿದರು.

ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ

ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ 2022ರ ವರ್ಷವು ಬಹಳ ಘಟನಾತ್ಮಕವಾಗಿದೆ. ಕಳೆದ ಆಗಸ್ಟ್‌ನಲ್ಲಿ,ರಾಷ್ಟ್ರೀಯ ರಾಜಧಾನಿಯಲ್ಲಿ ಅವರ ಶಿಕ್ಷಣ ಮಾದರಿಯನ್ನು ಹೊಗಳಿದ ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ಅವರನ್ನು ಉಲ್ಲೇಖಿಸಲಾಗಿದೆ. ಅದೇ ಸಮಯದಲ್ಲಿ, ದೆಹಲಿ ಮದ್ಯ ನೀತಿಯಲ್ಲಿನ ಅಕ್ರಮಗಳ ಆರೋಪದಲ್ಲಿ ಸಿಸೋಡಿಯಾ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿತು. ಎಫ್‌ಐಆರ್‌ನಲ್ಲಿ ಇತರ 15 ಆರೋಪಿಗಳಲ್ಲಿ ಅವರನ್ನು ಹೆಸರಿಸಲಾಗಿದೆ, ಆದರೆ ಆರೋಪಪಟ್ಟಿಯಲ್ಲಿ ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಮನೀಶ್ ಸಿಸೋಡಿಯಾ ಇದನ್ನು ತನ್ನ ವಿಜಯ ಎಂದು ಕರೆದರು.

ಎಂಸಿಡಿ ಚುನಾವಣೆಯ ಸಮಯದಲ್ಲಿ ಅವರು ಬಿಜೆಪಿಯ ದಾಳಿಯ ಕೇಂದ್ರದಲ್ಲಿದ್ದರು, ಆದರೆ ದೆಹಲಿಯಲ್ಲಿ ಸಿಸೋಡಿಯಾ ಅವರ ಪ್ರಭಾವವು ಹಾಗೇ ಉಳಿದಿದೆ, ಇದು ಎಂಸಿಡಿ ಚುನಾವಣಾ ಫಲಿತಾಂಶಗಳಲ್ಲಿ ಪ್ರತಿಫಲಿಸುತ್ತದೆ, ಇದರಲ್ಲಿ ಅವರ ಪಕ್ಷ-ಎಎಪಿ ಕೇಸರಿ ಪಕ್ಷವನ್ನು ಸೋಲಿಸಿತು.

ಬಿಹಾರ ಸಿಎಂ ನಿತೀಶ್ ಕುಮಾರ್

ಬಿಹಾರ ಸಿಎಂ ನಿತೀಶ್ ಕುಮಾರ್

ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾಡಿದ ಮತ್ತೊಂದು ಯು-ಟರ್ನ್‌ಗೆ 2022ರ ವರ್ಷವು ಸಾಕ್ಷಿ ಆಯಿತು. ಅವರು ಕುತೂಹಲಕಾರಿಯಾಗಿ ತಮ್ಮದೇ ಸರ್ಕಾರಕ್ಕೆ ರಾಜೀನಾಮೆ ನೀಡಿದರು. ಹೊಸ ಮಿತ್ರಪಕ್ಷದೊಂದಿಗೆ ಮತ್ತೆ ಸರ್ಕಾರವನ್ನು ರಚಿಸಿದರು. ಬಿಜೆಪಿಯನ್ನು ತೊರೆದ ನಿತೀಶ್ ಕುಮಾರ್, ಆರ್‌ಜೆಡಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಅವರ ಸ್ವಿಚಿಂಗ್ ಸೈಡ್ ಸ್ಟಂಟ್‌ನೊಂದಿಗೆ ಬಿಹಾರದ ರಾಜಕೀಯ ಸಮೀಕರಣವು ಸಂಪೂರ್ಣವಾಗಿ ಬದಲಾಯಿತು.

ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ವೈರಿ-ಮಿತ್ರ ತೇಜಸ್ವಿ ಯಾದವ್ ಅವರನ್ನು ಘೋಷಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ಮುಂಬರುವ ಚುನಾವಣೆಯಲ್ಲಿ ತೇಜಸ್ವಿ ಯಾದವ್ ಅವರ ಉನ್ನತಿಯನ್ನು ಸೂಚಿಸುವ ಯಾವುದೇ ಹುದ್ದೆಗೆ ತಾನು ಸ್ಪರ್ಧಿಯಲ್ಲ ಎಂದು ನಿತೀಶ್ ಕುಮಾರ್ ಘೋಷಿಸಿದರು. ಬಿಜೆಪಿಯನ್ನು ಸೋಲಿಸುವ ಸಂಕಲ್ಪವನ್ನೂ ತೆಗೆದುಕೊಂಡರು. 2022ರ ವರ್ಷವು ಬಿಹಾರದಲ್ಲಿ ನಡೆದ ಹಲವಾರು ದುರಂತಗಳ ಬಗ್ಗೆ ಪ್ರತಿಪಕ್ಷಗಳಿಂದ ತೀವ್ರ ಟೀಕೆಗಳನ್ನು ತಂದಿತು.

ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ

ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ

ಈಶಾನ್ಯದ ಪ್ರಮುಖ ರಾಜಕಾರಣಿಗಳಲ್ಲಿ ಹಿಮಂತ ಬಿಸ್ವಾ ಶರ್ಮಾ ಕೂಡ ಒಬ್ಬರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಸಹ ಯೋಗಿ ಆದಿತ್ಯನಾಥ್ ಜೊತೆಗೆ ಹಿಂದುತ್ವದ ಉನ್ನತ ಮುಖವಾಗಿ ಹೊರಹೊಮ್ಮಿದರು. 2022ರಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ಅವರನ್ನು ಎಲ್ಲೆಡೆ ಕರೆದೊಯ್ದಿತು. ಗುಜರಾತ್ ವಿಧಾನಸಭೆ ಚುನಾವಣೆಯಿಂದ ದೆಹಲಿ ಎಂಸಿಡಿ ಚುನಾವಣೆಯವರೆಗೆ ಅವರು ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡರು. ಯೋಗಿ ರೀತಿಯೇ ಅವರು ಕೂಡ 2022ರಲ್ಲಿ ಬುಲ್ಡೋಜರ್ ರಾಜಕೀಯ ಮಾಡಿದರು.

ಅಸ್ಸಾಂನಲ್ಲಿ ಮದರಸಾಗಳನ್ನು ಬುಲ್ಡೋಜರ್ ಮಾಡಲಾಯಿತು. ಅವರು ಮದರಸಾಗಳ ಆಧುನೀಕರಣಕ್ಕಾಗಿ ಬ್ಯಾಟಿಂಗ್ ಮಾಡಿದರು. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿದಂತೆ ಅವರು ದೆಹಲಿ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅನ್ನು ತರಾಟೆಗೆ ತೆಗೆದುಕೊಂಡರು. ಇತ್ತೀಚೆಗೆ ಅವರು ರಾಹುಲ್ ಗಾಂಧಿಯನ್ನು ಸದ್ದಾಂ ಹುಸೇನ್ ಜೊತೆ ಹೋಲಿಸಿದ್ದರು. ಹಿಂದೂ-ಮುಸ್ಲಿಂ ವಿವಾಹಗಳಿಗಾಗಿ ಬಲಪಂಥೀಯರು ರೂಪಿಸಿದ 'ಲವ್ ಜಿಹಾದ್' ಬಗ್ಗೆಯೂ ಅವರು ಧ್ವನಿ ಎತ್ತಿದ್ದರು.

ಪಂಜಾಬ್ ಸಿಎಂ ಭಗವಂತ್ ಮಾನ್

ಪಂಜಾಬ್ ಸಿಎಂ ಭಗವಂತ್ ಮಾನ್

ಕಳೆದ 2022ರ ವರ್ಷವು ಎಎಪಿ ನಾಯಕ ಭಗವಂತ್ ಮಾನ್ ಮತ್ತು ಪಂಜಾಬ್ ರಾಜಕೀಯಕ್ಕೂ ಬಹಳ ವಿಶೇಷವಾಗಿದೆ. 2022ರ ವರ್ಷವು ಪಂಜಾಬ್‌ನ ಇತಿಹಾಸಕ್ಕೆ ಕೆಂಪು ಅಕ್ಷರದ ವರ್ಷವಾಗಲಿದೆ. ಏಕೆಂದರೆ ರಾಜ್ಯದಲ್ಲಿ ಎಎಪಿ ಮುಖ್ಯಮಂತ್ರಿಯನ್ನು ಪಡೆಯಿತು. ಭಗವಂತ್ ಮಾನ್ ನೇತೃತ್ವದ ಆಪ್ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಸೋಲಿಸಿ ಇತಿಹಾಸ ಸೃಷ್ಟಿಸಿತು. ಎಎಪಿ ತನ್ನ ಮೊದಲ ಪೂರ್ಣ ಪ್ರಮಾಣದ ಸರ್ಕಾರವನ್ನು ಪಡೆದುಕೊಂಡಿತು. ಹಾಸ್ಯನಟ-ರಾಜಕಾರಣಿಯನ್ನು ರಾಜಕೀಯ ವಿಶ್ಲೇಷಕರು ಕಡಿಮೆ ಅಂದಾಜು ಮಾಡಿದರು, ಆದರೆ 2022 ರಲ್ಲಿ ಅವರು ಪಂಜಾಬ್‌ನ ದೂರದ ಹಳ್ಳಿಗಳಲ್ಲಿ ವ್ಯಾಪಕವಾಗಿ ಪ್ರಯಾಣಿಸಿದರು. ಪಂಜಾಬ್ ಅನ್ನು ಮಾದಕ ವ್ಯಸನ ಮುಕ್ತವಾಗಿಸುವ ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸುವ ವ್ಯಕ್ತಿ ಎಂದು ಅವರಿಗೆ ಮನವರಿಕೆ ಮಾಡಿದರು. ಅವರ ಪಟ್ಟಾಭಿಷೇಕವು ಎಎಪಿ ಕಾರ್ಯಕರ್ತರಿಗೆ ಸ್ಫೂರ್ತಿ ನೀಡಿತು. ಅವರು ತಮ್ಮ ಪಕ್ಷಕ್ಕೆ ಪೋಸ್ಟರ್ ಬಾಯ್ ಆದರು. ಅವರು ಗುಜರಾತ್, ಹಿಮಾಚಲ ಮತ್ತು ದೆಹಲಿಯ ಚುನಾವಣೆಗಳಲ್ಲಿ ಪ್ರಚಾರ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+