Yamaha RX100: ಥೇಟ್ ಅದೇ ಲುಕ್‌ನಲ್ಲಿ ಮತ್ತೆ ರಸ್ತೆಗಿಳಿಯಲಿದೆ 'ಕಿಂಗ್ RX100'- ದರ, ವಿಶೇಷತೆ ತಿಳಿಯಿರಿ
ಯಮಹಾ RX100 ಒಂದಾನೊಂದು ಕಾಲದಲ್ಲಿ ಭಾರೀ ಸದ್ದು ಮಾಡಿದ್ದು, ಯುವಕರ ಪಾಲಿಗೆ ಇದೇ ಕಿಂಗ್ ಆಗಿ ಮಿಂಚಿತ್ತು. ಈಗಲೂ ಕೂಡ ಈ ಮಾಡೆಲ್‌ನ ಬೈಕ್‌ಗೆ ಭಾರೀ ಬೇಡಿಕೆಯಿದೆ. ಕಳೆದ ಕೆಲವು ವರ್ಷಗಳ ಹಿಂದೆ ಇದರ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು, ಇದೀಗ ಮತ್ತೆ ಮರು ಆರಂಭಿಸಲು ಕಂಪನಿ ಮುಂದಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಯುವಪೀಳಿಗೆಯ ಯುವಕರಲ್ಲಿ ಮಂದಹಾಸ ಮೂಡಿಸಿದೆ. ಹಾಗಾದರೆ ಇದು ಯಾವಾಗ ಪ್ರಾರಂಭವಾಗಲಿದೆ ಹಾಗೂ ದರ, ಹೊಸ ವಿಶೇಷತೆಗಳನ್ನು ತಿಳಿಯಿರಿ.
ಯಮಹಾ RX100 ರಸ್ತೆಗಿಳಿಯಿತು ಎಂದರೆ ಸಾಕು ಪಕ್ಕದಲ್ಲಿ ಸಾವಿರ ದೊಡ್ಡ ದೊಡ್ಡ ಕಂಪನಿಗಳ ಬೈಕ್‌ಗಳು ಹೋದರೂ ಕೂಡ, ಜನರ ಕಣ್ಣು ಮಾತ್ರ RX100 ಕಡೆಗೆ ಇರುತ್ತದೆ. ಇದೀಗ ಯಮಹಾ ತನ್ನ ಐಕಾನಿಕ್ RX100 ಅನ್ನು ದೊಡ್ಡ ಎಂಜಿನ್‌ನೊಂದಿಗೆ ಮರುಪ್ರಾರಂಭಿಸಲು ಯೋಜಿಸುತ್ತಿದೆ.

ವರದಿಗಳ ಪ್ರಕಾರ, RX 100 ಹೆಸರಿನ ಬೈಕ್ ಕಾಣೆಯಾಗಿರಬಹುದು. ಆದರೆ, ಇದರ ಮಾದರಿಯಲ್ಲೇ ದೊಡ್ಡ 225.9 cc ಎಂಜಿನ್ ಅನ್ನು ಹೊಂದಿರುವ ಬೈಕ್ ರಸ್ತೆಗಳಿಯಲಿದೆ. ಈ ಬೈಕ್ ಪ್ರಭಾವಶಾಲಿ 20.1 bhp ಪವರ್ ಮತ್ತು 19.93 Nmನ ಗರಿಷ್ಠ ಟಾರ್ಕ್ ಅನ್ನು ಪುನರುತ್ಪಾದಿಸುತ್ತದೆ.
RX 100 ಉತ್ತರಾಧಿಕಾರಿಯು ಅದರ ಹಿಂದಿನ ಕೆಲವು ವಿನ್ಯಾಸ ಅಂಶಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಇದರ ಬೆಲೆ 1.25 ಲಕ್ಷದಿಂದ 1.50 ಲಕ್ಷದವರೆಗೆ ಇರಬಹುದು. ಆದರೆ ಯಮಹಾ ಈ ಬಗ್ಗೆ ಇನ್ನೂ ಖಚಿತಪಡಿಸಿಲ್ಲ. ಇಂತಹ ವರದಿ ಬಂದಿರುವುದು ಇದೇ ಮೊದಲೇನಲ್ಲ. 2022ರಲ್ಲಿಯೂ ಯಮಹಾ RX100ನ ಹೊಸ ಮಾದರಿ ಬರಲಿದೆ ಎನ್ನವ ಬಗ್ಗೆಯೂ ವರದಿಯಾಗಿತ್ತು. ಆದರೆ ಇದುವರೆಗೂ ಆರ್‌ಎಕ್ಸ್ ಅಣ್ಣ ಅಂತಾ ಯಾವುದೇ ಹೊಸ ಮಾದರಿ ಬಂದಿಲ್ಲ.
ಆದರೆ ಯಮಹಾ ಇಂಡಿಯಾ ಅಧ್ಯಕ್ಷ ಇಶಿನ್ ಚಿಹಾನಾ RX 100 ಮತ್ತೆ ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ. RX 100 ತನ್ನ ಪ್ರಸ್ತುತ ಹೆಸರನ್ನು ಉಳಿಸಿಕೊಳ್ಳುತ್ತದೆ ಎಂದು ಅವರು ಆಗ ಹೇಳಿದ್ದರು. ಅದರ ಜಾಗಕ್ಕೆ ಬೇರೆ ಮೋಟಾರ್ ಸೈಕಲ್ ಇರುವುದಿಲ್ಲ. ಸಂಸ್ಥೆಯು ಈ ಲಾಂಛನವನ್ನು ಮರುಪರಿಚಯಿಸಲು ಉದ್ದೇಶಿಸಿರುವುದರಿಂದ ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ.
1980ರಿಂದ ಇತ್ತೀಚಿನವರೆಗೂ ಜನಪ್ರಿಯವಾಗಿದ್ದ ಈ ಬೈಕ್ ತನ್ನ ವೇಗಕ್ಕೆ ಗುರುತಿಸಿಕೊಂಡಿತ್ತು. ಆದಾಗ್ಯೂ, ಕಂಪನಿಯು ಕೆಲವು ವರ್ಷಗಳ ಹಿಂದೆ ಈ ಬೈಕನ್ನು ಸ್ಥಗಿತಗೊಳಿಸಿದ್ದು, ಇದೀಗ ಅದನ್ನು ಮರುಪರಿಚಯಿಸಲು ಮುಂದಾಗಿದೆ. ಯಮಹಾ 1985ರಿಂದ 1996 ರವರೆಗೆ ಎರಡು-ಸ್ಟ್ರೋಕ್ ಮೋಟಾರ್‌ಸೈಕಲ್ ಅನ್ನು ತಯಾರಿಸುತ್ತಿತ್ತು. ನಂತರ ಅದು 2005ರವರೆಗೆ ಅದರ ವಿವಿಧ ಬೇರೆ ಬೇರೆ ಮಾದರಿಗಳನ್ನು ಪರಿಚಯಿಸಿತು.












Click it and Unblock the Notifications